More

    ಆನ್‌ಲೈನ್‌ ಗೇಮ್ ಕೊಟ್ಟ ಚಾಲೆಂಜ್‌ ಸ್ವೀಕರಿಸಿ ತಾಯಿ, ಅಣ್ಣ ಮತ್ತು ಇಬ್ಬರು ಅಕ್ಕಂದಿರನ್ನು ಕೊಂದ ಬಾಲಕ!

    ಲಾಹೋರ್: ಭಾರತದಲ್ಲಿ ಆನ್‌ಲೈನ್ ಗೇಮ್ ಪಬ್​ಜಿ ಬ್ಯಾನ್‌ ಮಾಡಲಾಗಿದೆ. ಈ ಆಟದಿಂದ ಎಷ್ಟೋ ಮಕ್ಕಳು ಜೀವ ಕಳೆದುಕೊಂಡಿರುವುದನ್ನು ಗಮನಿಸಿ ನಮ್ಮ ಸರ್ಕಾರ ಈ ಒಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಆದರೆ ಪಾಕಿಸ್ತಾನದ ಸೇರಿದಂತೆ ಕೆಲವು ದೇಶಗಳಲ್ಲಿ ಈ ಆಟ ಇನ್ನೂ ಚಾಲ್ತಿಯಲ್ಲಿದೆ.

    ಇದೀಗ ಇನ್ನೊಂದು ಭಯಾನಕ ಎನಿಸುವ ಕೃತ್ಯವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯಲ್ಲಿ ನಡೆದಿದೆ. ಈ ಆಟದ ಹುಚ್ಚಿಗೆ ಬಲಿಯಾಗಿರುವ 14 ವರ್ಷದ ಬಾಲಕನೊಬ್ಬ ತನ್ನ ತಾಯಿ, ಅಣ್ಣ ಮತ್ತು ಇಬ್ಬರು ಅಪ್ರಾಪ್ತ ಸಹೋದರಿಯರು ಸೇರಿದಂತೆ ಇಡೀ ಕುಟುಂಬವನ್ನು ಗುಂಡಿಕ್ಕಿ ಕೊಂದಿದ್ದಾನೆ!

    ಲಾಹೋರ್‌ನ ಕಹ್ನಾ ಪ್ರದೇಶದಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್, ಇವರ 22 ವರ್ಷದ ಮಗ ತೈಮೂರ್ ಮತ್ತು 17 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದರು. ಇದರ ತನಿಖೆಯ ವೇಳೆ ಈ ಭಯಾನಕ ಅಂಶ ಬೆಳಕಿಗೆ ಬಂದಿದೆ. 14 ವರ್ಷದ ಬಾಲಕನೊಬ್ಬನೇ ಹೇಗೆ ಬದುಕುಳಿದ ಎನ್ನುವ ಸಂದೇಹದ ಮೇರೆಗೆ ಆತನನ್ನು ವಿಚಾರಿಸಿದಾಗ ಈತನ ಪಬ್‌ಜಿ ವ್ಯಾಮೋಹ ಬೆಳಕಿಗೆ ಬಂದಿದೆ. ದಿನದ ಹೆಚ್ಚಿನ ಸಮಯವನ್ನು ಆನ್‌ಲೈನ್ ಆಟವಾಡುತ್ತಾ ಕಳೆಯುವುದರಿಂದ ಆತ ಮಾನಸಿಕ ಸಮಸ್ಯೆಗೆ ಒಳಗಾಗಿದ್ದ. ಆಟದಲ್ಲಿ ಕೊಟ್ಟಿರುವ ಚಾಲೆಂಜ್‌ಗಳನ್ನು ಸ್ವೀಕರಿಸುತ್ತಾ ಎಲ್ಲರನ್ನೂ ಕೊಂದುಹಾಕಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

    ನಹೀದ್ ವಿಚ್ಛೇದಿತೆಯಾಗಿದ್ದು, ಮಗ ಬರೀ ಆಟವಾಡುತ್ತಿದ್ದ ಎಂದು ಬುದ್ಧಿಮಾತು ಹೇಳುತ್ತಿದ್ದರು. ಇದರಿಂದ ತಾಯಿಯ ಬಗ್ಗೆ ಆತ ಬಹಳ ಸಿಟ್ಟುಗೊಂಡಿದ್ದ. ನಂತರ ಅದರಂತೆಯೇ ಪಬ್‌ಜಿ ಗೇಮ್‌ನಲ್ಲಿ ಕೆಲವೊಂದು ಚಾಲೆಂಜ್‌ಗಳು ಇದ್ದವು. ಅದರ ಅನ್ವಯ ಮೊದಲು ಕಬೋರ್ಡ್‌ನಲ್ಲಿದ್ದ ಪಿಸ್ತೂಲ್‌ ತೆಗೆದು ಆಕೆಯ ಕೊಲೆ ಮಾಡಿದ್ದ. ಇದಾದ ಮೇಲೆ ಮಲಗಿದ್ದ ಇಬ್ಬರು ಸೋದರಿಯರನ್ನು ಹಾಗೂ ಒಬ್ಬ ಅಣ್ಣನನ್ನು ಅದೇ ಪಿಸ್ತೂಲ್‌ನಿಂದ ಕೊಂದಿದ್ದಾನೆ.

    ಲಾಹೋರ್‌ನಲ್ಲಿ ಆನ್‌ಲೈನ್ ಆಟಕ್ಕೆ ಸಂಬಂಧಿಸಿದಂತೆ ಇದು ನಾಲ್ಕನೇ ಅಪರಾಧವಾಗಿದೆ ಎಂದು ಸ್ಥಳೀಯ ಡಾನ್‌ ಪತ್ರಿಕೆ ವರದಿ ಮಾಡಿದೆ. 2020 ರಲ್ಲಿಯೇ ಈ ಆಟದ ಭಯಾನಕತೆ ಗಮನಿಸಿದ್ದ ಅಂದಿನ ಪೊಲೀಸ್ ಅಧಿಕಾರಿ ಜುಲ್ಫಿಕರ್ ಹಮೀದ್ ಈ ಆಟವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದ್ದರು. ಆದರೆ ಅದಿನ್ನೂ ಬ್ಯಾನ್‌ ಆಗಲಿಲ್ಲ. ಸರ್ಕಾರ ಇನ್ನೂ ಮನಸ್ಸು ಮಾಡಲಿಲ್ಲ.

    ಉ.ಪ್ರದೇಶದ ಸಿಎಂ ಖುರ್ಚಿ ಯಾರಿಗೆ? 2024ರ ಚುನಾವಣೆ ಭವಿಷ್ಯವೇನು? ಖ್ಯಾತ ಜ್ಯೋತಿರ್ವಿಜ್ಞಾನಿ ಅಮ್ಮಣ್ಣಾಯ ಹೇಳಿದ್ದು ಹೀಗೆ…

    ಶಾಲಾ, ಕಾಲೇಜು ಓಪನ್‌ ಯಾವಾಗ? ಮದುವೆ ಮನೆಗಳಿಗೆ ಎಷ್ಟು ಜನ? ಪಬ್‌-ಬಾರ್‌, ಕರ್ಫ್ಯೂ ರೂಲ್ಸ್ ಏನು? ಇಲ್ಲಿವೆ ಸಂಪೂರ್ಣ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts