More

    ಫುಡ್‌ ಡೆಲಿವರಿ ಗರ್ಲ್‌: ಕೈಯಲ್ಲಿ ಕೆಲಸವೇ ಇಲ್ಲ ಎಂದು ಗೋಳೋ ಎನ್ನುವವರಿಗೆ ಈಕೆಯೇ ಸ್ಫೂರ್ತಿಯ ಚಿಲುಮೆ

    ಭುವನೇಶ್ವರ: ಕರೊನಾ ವೈರಸ್‌ ಕಳೆದೊಂದು ವರ್ಷದಲ್ಲಿ ಮಾಡಿರುವ ಹಾಗೂ ಮಾಡುತ್ತಿರುವ ಅನಾಹುತಗಳಿಗೆ ಲೆಕ್ಕವೇ ಇಲ್ಲ. ಎಷ್ಟೋ ಮಂದಿ ಈ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದರೆ, ಚಿಕ್ಕಪುಟ್ಟ ವ್ಯಾಪಾರಸ್ಥರ ಗೋಳಂತೂ ಕೇಳುವುದೇ ಬೇಡವಾಗಿದೆ.

    ಒಂದೆಡೆ, ಮಾಡಲು ಕೆಲಸವೇ ಇಲ್ಲ ಎಂದು ಹಲವರು ಖಿನ್ನತೆಗೆ ಜಾರುತ್ತಿದ್ದರೆ, ಮನಸ್ಸೊಂದಿದ್ದರೆ ಮಾರ್ಗವು ಉಂಟು ಎನ್ನುತ್ತಿದ್ದಾರೆ ಇನ್ನು ಕೆಲವರು. ಈ ಎರಡನೆಯ ಸಾಲಿಗೆ ಸೇರಿರುವ ಯುವತಿಯೊಬ್ಬಳು ಇದೀಗ ಸಾಮಾಜಿಕ ಜಾಲತಾಣದ ನಾಯಕಿಯಾಗಿದ್ದಾಳೆ. ಉದ್ಯೋಗವೇ ಇಲ್ಲ, ಏನು ಮಾಡುವುದು, ಅದರಲ್ಲಿಯೂ ನಾನೊಬ್ಬ ಹೆಣ್ಣಾಗಿ ಏನು ಮಾಡಲು ಸಾಧ್ಯ ಎಂದೆಲ್ಲಾ ನೋವು ಪಡುತ್ತಿರುವವರಿಗೆ ಈಕೆಯೇ ಸ್ಫೂರ್ತಿಯಾಗಿದ್ದಾಳೆ.

    Image

    ಲಾಕ್‌ಡೌನ್‌ ಇರಲಿ, ಕರೊನಾ ವೈರಸ್ಸೇ ಬರಲಿ. ಆಹಾರವಂತೂ ಎಲ್ಲರಿಗೂ ಬೇಕೇ ಬೇಕು. ಅದಕ್ಕಾಗಿಯೇ ಎಲ್ಲೆಲ್ಲೂ ಫುಡ್‌ ಡೆಲವರಿಗಳನ್ನು ಕಾಣಬಹುದಾಗಿದೆ. ಫುಡ್‌ ಡೆಲವರಿ ಎಂದಾಕ್ಷಣ ಹುಡುಗರೇ ನೆನಪಾಗುತ್ತಾರೆ. ಆದರೆ ಇದೀಗ ಓರ್ವ ಯುವತಿ ಫುಡ್‌ ಡೆಲವರಿ ಗರ್ಲ್‌ ಆಗಿದ್ದಾಳೆ.

    ಭಾನುಪ್ರಿಯ ಎಂಬ 18 ವರ್ಷದ ಯುವತಿ ಈಕೆ. ಒಡಿಶಾದ ಭುವವೇಶ್ವರದವಳು. ಚಾಲಕನಾಗಿ ಕೆಲಸ ಮಾಡುತ್ತಿದ್ದ ಈಕೆಯ ತಂದೆ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡಾಗ ಇವರ ಕುಟುಂಬಕ್ಕೆ ಆಘಾತವೇ ಆಗಿಹೋಯಿತು. ಇಡೀ ಕುಟುಂಬವೇ ಕುಸಿದು ಹೋದ ಸಂದರ್ಭದಲ್ಲಿ ಕುಟುಂಬಕ್ಕೆ ಆಧಾರವಾಗಿ ನಿಲ್ಲುವ ಪಣ ತೊಟ್ಟ ಭಾನುಪ್ರಿಯಾ, ಝೊಮ್ಯಾಟೋನಲ್ಲಿ ಸಂದರ್ಶನ ಎದುರಿಸಿದಳು. ಅಲ್ಲಿ ಪಾಸ್‌ ಆಗಿ ಇದೀಗ ಆಹಾರ ಪೂರೈಕೆ ಮಾಡುತ್ತಿದ್ದಾಳೆ.

    ಅಷ್ಟಕ್ಕೂ ಇದು ಸುಲಭ ಕೆಲಸವಲ್ಲ. ರಾತ್ರಿ ಸಮಯದಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ಆಹಾರ ಪೂರೈಕೆ ಮಾಡುವುದು ಕಷ್ಟವೇ. ಆದರೆ ಅದನ್ನು ತಾನು ನಿಭಾಯಿಸಬಲ್ಲೆ ಎನ್ನುತ್ತಾಳೆ ಭಾನುಪ್ರಿಯಾ. ಅಷ್ಟಕ್ಕೇ ಈಕೆಯ ಕೆಲಸ ಮುಗಿಯುವುದಿಲ್ಲ ಬೆಳಗ್ಗೆ 6 ಗಂಟೆಗೆ ಟ್ಯೂಷನ್ ತೆಗೆದುಕೊಳ್ಳುತ್ತಾಳೆ, ನಂತರ ಫುಡ್‌ ಡೆಲವರಿ. ಈ ಹಣದಲ್ಲಿ ಕಾಲೇಜು ಮುಂದುವರೆಸುವ ಇಚ್ಛೆ ಈಕೆಯದ್ದು.

    ಶೂಟಿಂಗ್‌ ಇಲ್ಲ, ಉದ್ಯೋಗವೂ ಇಲ್ಲ ಎನ್ನುತ್ತಲೇ ಎಫ್‌ಬಿ ಲೈವ್‌ನಲ್ಲಿ ಆತ್ಮಹತ್ಯೆಗೆ ನಟನ ಯತ್ನ

    ಅಬಕಾರಿ ಇಲಾಖೆ ಅಧಿಕಾರಿಯ ಕಳ್ಳಾಟ- ಗೋದಾಮಿನಿಂದ ಮದ್ಯ ಕದ್ದು ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್‌

    ದೇಹ ಪೂರ್ತಿ ತಿರುಗಿಸಿ ರಾಖಿಸಾವಂತ್‌ ವ್ಯಾಯಾಮ: ವಿಡಿಯೋ ಶೇರ್- ಅಲ್ಲೂ ಟ್ರೋಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts