More

    28 ಬಾರಿ ಚಿನ್ನ ಗೆದ್ದೆ, ನನ್ನ ಈ ಸ್ಥಿತಿ ಬರಬಾರದು… ದೇಶದ ಮೊದಲ ಪ್ಯಾರಾಶೂಟರ್‌ ಕಣ್ಣೀರು

    ಡೆಹ್ರಾಡೂನ್: ಇವರ ಹೆಸರು ದಿಲ್‌ರಾಜ್‌ ಕೌರ್‌. ದೇಶದ ಮೊದಲ ಪ್ಯಾರಶೂಟರ್‌ ಎಂಬ ಹೆಗ್ಗಳಿಕೆ ಇವರದ್ದು. ಒಂದೆರಡು ಬಾರಿಯಲ್ಲ, 28 ಬಾರಿ ಚಿನ್ನದ ಪದಕ ಗೆದ್ದವರು ಇವರು. ಆದರೆ ಇದೀಗ ಜೀವನ ನಿರ್ವಹಣೆ ಕಷ್ಟವಾಗಿ ಬೀದಿಗಿಳಿದಿದ್ದಾರೆ. ರಸ್ತೆ ಬದಿಯಲ್ಲಿ ಬಿಸ್ಕತ್, ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ!

    ಡೆಹ್ರಾಡೂನ್‌ನ ದಿಲ್‌ರಾಜ್‌ 2005ರಲ್ಲಿ ಕ್ರೀಡಾ ಜೀವನ ಆರಂಭಿಸಿದರು. ಸತತ 15 ವರ್ಷ ಭಾರತವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದಾರೆ. 28 ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆದರೆ ಈಗ ಬೀದಿ ವ್ಯಾಪಾರಿಯಾಗಿದ್ದಾರೆ.

    ‘ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೂ ನನಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ರಾಜ್ಯದ ಪ್ಯಾರಾಶೂಟಿಂಗ್ ಕ್ರೀಡಾ ಇಲಾಖೆಯೊಂದಿಗೆ ತಿಳಿಸಿದಾಗ ನನಗೆ ಯಾವುದೇ ನೆರವು ಸಿಕ್ಕಿಲ್ಲ. ನಾನು ನನ್ನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನನಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆ ಈವರೆಗೆ ಯಾವುದೇ ಕೆಲಸ ಸಿಕ್ಕಿಲ್ಲ. ಆದ್ದರಿಂದ ಹೀಗೆ ಕಷ್ಟಪಡುವಂತಾಗಿದೆ. ಯಾರಿಗೂ ಬರಬಾರದು ಇಂಥ ಸ್ಥಿತಿ’ ಎಂದು ದಿಲ್‌ರಾಜ್‌ ನೋವು ತೋಡಿಕೊಂಡಿದ್ದಾರೆ.

    ಗಾಳಿಪಟದ ದಾರ ಕುತ್ತಿಗೆಗೆ ಉರುಳು: ತಪ್ಪಿಸಿಕೊಳ್ಳಲು ಹೋದ ಬೈಕ್‌ ಸವಾರನ ಬೆರಳುಗಳು ಕಟ್‌!

    ಪತ್ನಿ ಮಾತು ಕೇಳಿ ಮಕ್ಕಳಿಗೆ ಮೈತುಂಬಾ ಬರೆ! ಸುಟ್ಟುಹೋದ ಶರೀರ- ನೋಡಲಾಗುತ್ತಿಲ್ಲ ಕಂದಮ್ಮಗಳ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts