More

    ಪ್ರತಿಭಟನೆ ವೇಳೆ ಮೃತಪಟ್ಟ ರೈತರಿಗೆ ಪರಿಹಾರ ಸಿಗುತ್ತಾ? ಸಚಿವರ ಉತ್ತರ ಕೇಳಿ ಪೇಚಿಗೆ ಸಿಲುಕಿದ ಪ್ರತಿಪಕ್ಷಗಳು, ಸಂಘಟನೆಗಳು!

    ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆ, ಆ ಕಾನೂನು ಹಿಂದಕ್ಕೆ ಪಡೆದ ಮೇಲೆ ಸ್ಥಗಿತವೇನೋಗೊಂಡಿತು. ಆದರೆ ಈ ಪ್ರತಿಭಟನೆ ವೇಳೆ ಮೃತಪಟ್ಟಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಕೆಲವರು ಸರ್ಕಾರದ ಮೇಲೆ ಭಾರಿ ಒತ್ತಡ ಹಾಕಿದ್ದರು.

    ಇದೇ ಒತ್ತಾಯ ಸಂಸತ್‌ ಅಧಿವೇಶನದಲ್ಲಿ ಕೂಡ ನಡೆದಿತ್ತು. ಮೃತಪಟ್ಟಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷಗಳು ಗಲಾಟೆ ಮಾಡಿದ್ದವು.

    ಅದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌, ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ರೈತರು ಮೃತಪಟ್ಟಿರುವ ಬಗ್ಗೆ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ!

    ಪ್ರತಿಭಟನೆಯ ಅವಧಿಯಲ್ಲಿ ಸುಮಾರು 700 ರೈತರು ಪ್ರತಿಭಟನಾ ಸ್ಥಳದಲ್ಲಿ ಮೃತಪಟ್ಟಿದ್ದಾರೆಂದು ರೈತ ನಾಯಕರು ಹಾಗೂ ಪ್ರತಿಪಕ್ಷಗಳು ಹೇಳುತ್ತಿರುವ ನಡುವೆಯೇ ಇಂಥದ್ದೊಂದು ಹೇಳಿಕೆ ಬಂದಿರುವುದು ಇದೀಗ ಪಟ್ಟುಹಿಡಿದ ಹೋರಾಟಗಾರರನ್ನು ಗೊಂದಲದಲ್ಲಿ ಸಿಲುಕಿದೆ.

     

    View this post on Instagram

     

    A post shared by Sudharani (@sudharanigovardhan)

    ಮತ್ತೆ ಶಾಕ್‌ ಕೊಟ್ಟ ಸಿಲಿಂಡರ್‌, ದಿಢೀರ್‌ 100 ರೂ ಏರಿಕೆ! ವಾಣಿಜ್ಯ ಬಳಕೆದಾರರಿಗೆ ಶುರುವಾಯ್ತು ತಲೆನೋವು

    ಒಮಿಕ್ರಾನ್‌ ಭೀತಿ ನಡುವೆಯೇ ಕಾಗೆಗಳ ಸಾವು: ದೃಢಪಟ್ಟ ಹಕ್ಕಿಜ್ವರ- ಕೋಳಿಗಳ ಸ್ಯಾಂಪಲ್‌ ರವಾನೆ, ಕೆಲವೆಡೆ ಮಾಂಸದಂಗಡಿ ಕ್ಲೋಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts