More

    ಅಕ್ರಮ ವಲಸಿಗರೆಂದು ತಿಳಿದು ಒಂದೂವರೆ ವರ್ಷ ಜೈಲಲ್ಲಿ ಕಳೆದ ದಂಪತಿಯ ಕಣ್ಣೀರಿನ ಕಥೆ…

    ಗುವಾಹಟಿ (ಅಸ್ಸಾಂ): ಅಸ್ಸಾಂನವರಾದರೂ ಬಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಎನ್ನುವ ಹಣೆಪಟ್ಟಿ ನೀಡಿ ದಂಪತಿ ಹಾಗೂ ಎರಡು ಪುಟಾಣಿ ಮಕ್ಕಳನ್ನು ಬಂಧಿಸಿರುವ ನೋವಿನ ಘಟನೆ ಗುವಾಹಟಿಯಲ್ಲಿ ನಡೆದಿದೆ.

    ಕಳೆದ ವರ್ಷ ಇದೇ ಸಮಯದಿಂದ ಮೊಹಮ್ಮದ್​ ನೂರ್​ ಹುಸೇನ್​ (34) ಪತ್ನಿ ಸಹೇರಾ ಬೇಗಂ (26) ಹಾಗೂ ಅವರ ಇಬ್ಬರು ಮಕ್ಕಳನ್ನು ಇಲ್ಲಿಯ ಸರ್ಕಾರ ಬಂಧಿಸಿ ಇಟ್ಟಿತ್ತು. ಆದರೆ 2021 ಇವರ ಪಾಲಿಗೆ ಸಂತಸ ತಂದಿದ್ದು ಕೊನೆಗೂ ಇವರನ್ನು ಬಿಡುಗಡೆ ಮಾಡಲಾಗಿದೆ.

    ವಿದೇಶಿಯರ ನ್ಯಾಯಮಂಡಳಿ ಮರು ವಿಚಾರಣೆ ನಡೆಸಿ ಇವರು ಅಕ್ರಮ ವಲಸಿಗರಲ್ಲ, ಬದಲಿಗೆ ಭಾರತೀಯ ಪ್ರಜೆಗಳೇ ಎಂದು ಹೇಳಿದೆ. ಮಾತ್ರವಲ್ಲದೇ ಇವರಿಗೆ ಭಾರತೀಯ ಪೌರತ್ವವನ್ನೂ ನೀಡಲಾಗಿದೆ.

    ಆಸ್ಸಾಂನ ಉದಲ್​ಗುರಿ ಜಿಲ್ಲೆಯ ಲಾಡಾಂಗ್​ ಗ್ರಾಮದವರಾಗಿದ್ದು ಗುವಾಹಟಿಯಲ್ಲಿ ರಿಕ್ಷಾ ಎಳೆಯುವ ಕೆಲಸ ಮಾಡ್ತಾರೆ.
    ನಮ್ಮನ್ನ ಬಾಂಗ್ಲಾದೇಶವರೆಂದು ತಪ್ಪಾಗಿ ಬಿಂಬಿಸಲಾಗಿತ್ತು. ನಾನು ಭಾರತದಲ್ಲೇ ಜನಿಸಿದ್ದೇನೆ ಎಂದ ಮೇಲೆ ಬಾಂಗ್ಲಾದವನಾಗಲು ಹೇಗೆ ಸಾಧ್ಯ? ಆದರೂ ನಮ್ಮನ್ನು ಬಂಧಿಸಿಡಲಾಗಿತ್ತು. ಈಗ ಬಿಡುಗಡೆಯ ಭಾಗ್ಯ ದೊರೆತಿದೆ ಎಂದು ಹುಸೇನ್​ ಹೇಳಿದರು.

    1951ರ ಎನ್​ಆರ್​ಸಿ ಪಟ್ಟಿಯಲ್ಲಿ ನನ್ನ ಅಜ್ಜಿಯ ಹೆಸರು ಇದೆ. 1965ರ ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರು ಇದೆ. ಅಲ್ಲದೇ ನಮ್ಮ ಕುಟುಂಬ 1958-59ರ ಭೂ ದಾಖಲೆಗಳನ್ನು ಹೊಂದಿದೆ. ಆದರೂ ಅಕ್ರಮ ವಲಸಿಗರು ಎಂದು ಭಾವಿಸಲಾಗಿತ್ತು ಎಂದು ದಂಪತಿ ನೋವಿನಿಂದ ನುಡಿಯುತ್ತಾರೆ.

    ನಮ್ಮನ್ನು ಏತಕ್ಕಾಗಿ ಬಂಧಿಸಲಾಯಿತು ಎಂದು ತಿಳಿದುಬಂದಿಲ್ಲ. 2019ರ ಆಗಸ್ಟ್​ ಸಮಯದಲ್ಲಿ ಅಕ್ರಮ ವಲಸಿಗರ ಹುಡುಕಾಟದಲ್ಲಿ ಸರ್ಕಾರ ಇದ್ದ ಸಮಯದಲ್ಲಿ ನಮ್ಮ ದಾಖಲೆಗಳನ್ನು ಕೇಳಲಾಯಿತು. ಆದರೆ ಆ ಸಮಯದಲ್ಲಿ ದಾಖಲೆ ಸಿಗಲಿಲ್ಲ. ನಂತರ ನಮ್ಮನ್ನು ಬಂಧಿಸುವುದಾಗಿ ಪೊಲೀಸರು ಹೇಳಿದರು. ಒಬ್ಬ ವಕೀಲರನ್ನು ಸಂಪರ್ಕಿಸಿದೆ. ಆದರೆ ಅವರು ಕೇಳಿದಷ್ಟು ಶುಲ್ಕ ಕೊಡಲು ನಮ್ಮಿಂದ ಆಗಲಿಲ್ಲ. ಆಗ ಅವರು, ನೀವು ಇಲ್ಲಿಯೇ ಇದ್ದರೆ ನಿಮ್ಮನ್ನು ಬಂಧಿಸುತ್ತಾರೆ, ಆದ್ದರಿಂದ ಕುಟುಂಬ ಸಹಿತ ಎಲ್ಲಿಯಾದರೂ ಓಡಿಹೋಗಿ ಎಂದರು ಎಂದು ದಂಪತಿ ನೋವಿನ ದಿನಗಳನ್ನು ನೆನೆಸಿಕೊಳ್ಳುತ್ತಾರೆ.

    ನಾವು ಭಾರತೀಯನೇ ಆಗಿರುವಾಗ, ನಾವ್ಯಾಕೆ ಹೋಗಬೇಕು ಎಂದು ಕೇಳಿದೆ. ಅದಕ್ಕಾಗಿ ಏನಾದರೂ ಆಗಲಿ, ಇಲ್ಲಿಯೇ ಇದ್ದು ಜಯಿಸಬೇಕು ಎಂದುಕೊಂಡೆ. ಅದಾಗಲೇ ಅನೇಕ ಮಂದಿಯನ್ನು ಬಂಧಿಸಲಾಗಿತ್ತು. ನಂತರ ನಮ್ಮನ್ನೂ ಬಂಧಿಸಲಾಯಿತು. ನಾವು ಜೈಲಿನಲ್ಲಿ ಇರುವಾಗ ಸಂಬಂಧಿಕರು ಮಾನವ ಹಕ್ಕುಗಳ ವಕೀಲರೊಬ್ಬರನ್ನು ಹಿಡಿದು ಕೋರ್ಟ್​ಗೆ ಕೇಸ್​ ಹಾಕಿಸಿದರು. ಅದರಿಂದ ಒಂದೂವರೆ ವರ್ಷಗಳ ನಂತರ ಬಿಡುಗಡೆ ಸಿಕ್ಕಿತು ಎಂದು ಕಣ್ಣೀರು ಹಾಕುತ್ತಾರೆ ಹುಸೇನ್​ ದಂಪತಿ.

    ಅಸ್ಸಾಂನಲ್ಲಿ ಭಾರತೀಯರನ್ನ ಗುರುತಿಸಲು ಮಾರ್ಚ್ 24, 1971 ಕಟ್​ ಆಫ್​ ದಿನಾಂಕ ಎಂದು ಹೇಳಲಾಗಿದೆ.

    ಭಾರತಕ್ಕೂ ಬಂತು ಲೈಟ್​ ಹೌಸ್​ ಪ್ರಾಜೆಕ್ಟ್​- ಪ್ರಧಾನಿ ಚಾಲನೆ: ಪ್ರತಿಯೊಬ್ಬರಿಗೂ ಮನೆ ಎಂದ ಮೋದಿ

    13 ದೇಶಗಳ ಕರೊನಾ ಬಿಕ್ಕಟ್ಟು ನಿರ್ವಹಣೆ: ಭಾರತದ ಪ್ರಧಾನಿಗೆ ಸಿಕ್ಕ ಸ್ಥಾನ ಎಷ್ಟು ಗೊತ್ತಾ?

    ಹುಡುಗನಾಗಿದ್ದರೂ, ಹುಡುಗರನ್ನು ಕಂಡರೆ ಏನೇನೋ ಆಸೆ ಹುಟ್ಟುತ್ತಿದೆ: ಪ್ಲೀಸ್​ ಪರಿಹಾರ ಹೇಳಿ…

    ಹಳಿ ತಪ್ಪಿದ ಬೆಂಗಳೂರು- ತಾಳಗುಪ್ಪ ಎಕ್ಸ್​ಪ್ರೆಸ್​: ರಾತ್ರಿ ನಡೆದ ಅನಾಹುತ

    ಅಮ್ಮ ವಿವಾಹಿತನ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾಳೆ- ಭಾವಿ ಪತಿಗೆ ಹೇಗೆ ತಿಳಿಸಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts