More

    ಸುಳ್ಳು ರೇಪ್‌ ಕೇಸ್‌ ಹಾಕುವವರೇ ಎಚ್ಚರ: ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

    ರಾಜ್‌ಗಢ (ಮಧ್ಯಪ್ರದೇಶ): ಹಲವಾರು ಕಾನೂನುಗಳು ಮಹಿಳೆಯರ ಪರವಾಗಿ ಇವೆ. ಆದರೆ ಕೆಲವು ಮಹಿಳೆಯರು ಈ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪಗಳು ಬರುತ್ತಲೇ ಇವೆ. ಅತ್ಯಾಚಾರ, ವರದಕ್ಷಿಣೆ ಕಿರುಕುಳದಂಥ ಮಹಿಳಾ ಪರ ಕಾನೂನುಗಳನ್ನು ಕೆಲವು ಮಹಿಳೆಯರು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಆಗಿದ್ದಾಂಗೆ ನಡೆಯುತ್ತಲೇ ಇವೆ.

    ಇಂಥದ್ದೇ ಒಂದು ಪ್ರಕರಣದಲ್ಲಿ ಸುಖಾಸುಮ್ಮನೆ ನಾಲ್ವರ ವಿರುದ್ಧ ರೇಪ್‌ ಕೇಸ್‌ ಹಾಕಿ, ಅವರೆಲ್ಲಾ ವರ್ಷಾನುಗಟ್ಟಲೆ ಕೋರ್ಟ್‌ ಅಲೆಯುವಂತೆ ಮಾಡಿದ ಮಹಿಳೆಯೊಬ್ಬಳಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಧ್ಯಪ್ರದೇಶ ಕೋರ್ಟ್‌ ಆದೇಶಿಸಿದೆ.

    2008ರಲ್ಲಿ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಜೀರಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 38 ವರ್ಷದ ಮಹಿಳೆ ನಾಲ್ವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದರು. ಇದರ ವಿಚಾರಣೆ ವರ್ಷಾನುಗಟ್ಟಲೆ ನಡೆದಿತ್ತು. ಈ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲಿಯೂ ಅತ್ಯಾಚಾರದಂಥ ಪ್ರಕರಣಗಳು ದಾಖಲಾದಾಗ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಪರಿಯೇ ಕಠೋರವೂ ಆಗಿರುತ್ತದೆ.

    ಆದರೆ ಪೊಲೀಸರ ತನಿಖೆಯ ನಂತರ ಈ ಆರೋಪಿಗಳ ತಪ್ಪಿಲ್ಲ ಎಂದು ತಿಳಿದುಬಂದಿತ್ತು. ನಂತರ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾಗ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆ ನಾಲ್ವರ ವಿರುದ್ಧ ಸುಳ್ಳು ಆರೋಪ ಮಾಡಿರುವುದಾಗಿ ಹೇಳಿದ್ದಳು. ನಂತರ ಕೇಸನ್ನ ವಾಪಸ್‌ ತೆಗೆದುಕೊಂಡಿದ್ದಳು. ಆದರೆ ಅದಾಗಲೇ ಈ ಆರೋಪಿಗಳು ಜೈಲಿನಲ್ಲಿದ್ದರು. ಮಹಿಳೆಯ ಹೇಳಿಕೆ ನಂತರ ನಾಲ್ವರು ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅವರು ಮಹಿಳೆಯ ವಿರುದ್ಧ ಕೇಸ್‌ ದಾಖಲು ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್‌ 10 ವರ್ಷಗಳ ಕಠಿಣ ಸಜೆ ಮತ್ತು ಎರಡು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.

    ಇನ್ಮುಂದೆ ಕಡಿಮೆ ವಯಸ್ಸಿನವರೂ ಮದ್ಯ ಸೇವಿಸ್ಬೋದು: ಕಾನೂನಿಗೆ ತಿದ್ದುಪಡಿ ಮಾಡಿದ ಹರಿಯಾಣ ಸರ್ಕಾರ

    ಅಪ್ಪನಿಂದ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬಾಲಕಿ: ತಪ್ಪಿಸಿಕೊಳ್ಳುವ ಭರದಲ್ಲಿ ಹಾರಿ ಸಾವು-ಬದುಕಿನ ನಡುವೆ ಹೋರಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts