More

    VIDEO: ಸಂಗೀತ ದಿಗ್ಗಜರ ಕಾರ್ಯಕ್ರಮದಲ್ಲಿ ರಾಜಮನೆತನದ ಈ ರಾಜಕಾರಣಿ ಛೀ ಹೀಗೆ ಮಾಡೋದಾ?

    ಗ್ವಾಲಿಯರ್​ (ಮಧ್ಯಪ್ರದೇಶ): ಈ ದೇಶ ಕಂಡ ಅದ್ವಿತೀಯ ಸಂಗೀತಕಾರರಲ್ಲಿ ಒಬ್ಬರು ತಾನ್​ಸೇನ್​. ಮೊಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದ ಪ್ರಸಿದ್ಧ ಸಂಗೀತಗಾರರಾಗಿದ್ದ ತಾನ್​ಸೇನ್​ ಶಾಸ್ತ್ರೀಯ ಸಂಗೀತಕ್ಕೆ ನೀಡಿರುವ ಕೊಡುಗೆ ಅಪಾರ.

    ಇಂಥ ಶ್ರೇಷ್ಠ ಕಲಾವಿದನ ನೆನಪಿಗಾಗಿ ಮಧ್ಯಪ್ರದೇಶದ ಗ್ವಾಲಿಯರ್​ನ ಬೇಹತ್​ ಎಂಬಲ್ಲಿ ಇಲ್ಲಿಯ ಸರ್ಕಾರ ಪ್ರತಿವರ್ಷವೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಆದ್ದರಿಂದ ಈ ಸಂಗೀತ ಕಾರ್ಯಕ್ರಮಕ್ಕೆ ತನ್ನದೇ ಆದ ಘನತೆ ಇದೆ.

    ಪ್ರತಿ ವರ್ಷ ಡಿಸೆಂಬರ್​ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಜಗತ್ತಿನ ವಿವಿಧ ಭಾಗಗಳ ಸಂಗೀತ ದಿಗ್ಗಜರು ಪಾಲ್ಗೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಗತ್ತಿನ ಮೂಲೆಮೂಲೆಗಳಿಂದ ಸಹಸ್ರಾರು ಕಲಾರಸಿಕರು ತುದಿಗಾಲಿನಲ್ಲಿ ನಿಲ್ಲುವುದು ಇದೆ. ಈ ಬಾರಿಯ ಕಾರ್ಯಕ್ರಮ ಡಿಸೆಂಬರ್​ 26ರಿಂದ ಶುರುವಾಗಿದ್ದು 30ರವರೆಗೆ ನಡೆಯಲಿದೆ. ಕೋವಿಡ್​ ಹಿನ್ನೆಲೆಯಲ್ಲಿ ಈ ಬಾರಿ 350 ಮಂದಿಗೆ ಮಾತ್ರ ಪ್ರವೇಶ ನೀಡಲಾಗಿದೆ.

    VIDEO: ಸಂಗೀತ ದಿಗ್ಗಜರ ಕಾರ್ಯಕ್ರಮದಲ್ಲಿ ರಾಜಮನೆತನದ ಈ ರಾಜಕಾರಣಿ ಛೀ ಹೀಗೆ ಮಾಡೋದಾ?ಆದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಆಗಿರುವ ಘಟನೆ ಮಾತ್ರ ಸಂಗೀತ ಕಲಾರಸಿಕರಿಗೆ ನೋವುಂಟು ಮಾಡುವುದು ಮಾತ್ರವಲ್ಲದೇ ಜಗತ್ತಿನಾದ್ಯಂತದ ಕಲಾಪ್ರೇಮಿಗಳು ಭಾರತದ ರಾಜಕಾರಣಿಗಳಿಗೆ ಛೀಮಾರಿ ಹಾಕುವಂತಾಗಿದೆ.

    ಅಷ್ಟಕ್ಕೂ ಆಗಿದ್ದೇನೆಂದರೆ ನಿನ್ನೆ ಡಿ.28ರಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುತ್ತಲಿತ್ತು. ಕಲಾರಸಿಕರು ನೇರವಾಗಿ, ಫೇಸ್​ಬುಕ್​ ಲೈವ್​, ಯೂಟ್ಯೂಬ್​ಗಳ ಮೂಲಕ ಈ ಸಂಗೀತದ ಸವಿಯನ್ನು ಸವಿಯುತ್ತಲಿದ್ದರು. ಶಾಸ್ತ್ರೀಯ ಸಂಗೀತ ಪ್ರೇಮಿಗಳು ತಲೆದೂಗುತ್ತಿದ್ದರು.

    VIDEO: ಸಂಗೀತ ದಿಗ್ಗಜರ ಕಾರ್ಯಕ್ರಮದಲ್ಲಿ ರಾಜಮನೆತನದ ಈ ರಾಜಕಾರಣಿ ಛೀ ಹೀಗೆ ಮಾಡೋದಾ?ಅಷ್ಟರಲ್ಲಿಯೇ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕಲಾವಿದರಿಗೆ ಒಂದು ಚೀಟಿ ಬಂದಿದೆ. ಅಚ್ಚರಿಗೊಂಡ ಕಲಾವಿದರು ತಲೆ ಅಲ್ಲಾಡಿಸಿ ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ.

    ಅರೆ, ಏನಾಯಿತು ಎಂದು ಅಲ್ಲಿದ್ದವರೆಲ್ಲಾ ನೋಡುವಷ್ಟದಲ್ಲಿ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ವೇದಿಕೆ ಏರಿದ್ದಾರೆ. ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿ ತಮ್ಮ ರಾಜಕಾರಣದ ಭಾಷಣ ಮಾಡಿ ವೇದಿಕೆಯಿಂದ ಹೋಗಿದ್ದಾರೆ. ನಂತರ ಅರ್ಧಕ್ಕೆ ನಿಂತಿರುವ ಕಾರ್ಯಕ್ರಮ ಮುಂದುವರೆದಿದೆ.

    ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಛೀಮಾರಿಗಳ ಸುರಿಮಳೆಯೇ ಆಗುತ್ತಿದೆ. ರಾಜಮನೆತನದವರಾಗಿಯೂ ಶಾಸ್ತ್ರೀಯ ಸಂಗೀತಕ್ಕೆ ಮಾಡಿರುವ ಅವಮರ್ಯಾದೆ ನಾಚಿಕೆಗೇಡು ಎಂದು ಹಲವರು ಹೇಳಿದರೆ, ಇವರು ರಾಜಕೀಯ ಕ್ಷೇತ್ರಕ್ಕೇ ಕಪ್ಪುಚುಕ್ಕೆ ಎಂದು ಬಣ್ಣಿಸಿದ್ದಾರೆ ಹಲವರು.

    ಶಾಂತನು ನಂದನ್​ ಎನ್ನುವವರು ಶೇರ್​ ಮಾಡಿರುವ ಈ ವಿಡಿಯೋ ಹಾಗೂ ಅದಕ್ಕೆ ಬಂದಿರುವ ಕಮೆಂಟ್​ಗಳು ಈ ಲಿಂಕ್​ನಲ್ಲಿವೆ ನೋಡಿ:

    https://m.facebook.com/story.php?story_fbid=10157543771657132&id=632942131

    ಟಿಆರ್​ಪಿ ತಿರುಚಲು ಲಕ್ಷ ಲಕ್ಷ ಲಂಚ- ವಸ್ತುಗಳು ಗಿಫ್ಟ್​: ಕೋರ್ಟ್​ಗೆ​ ಮಾಹಿತಿ ನೀಡಿದ ಪೊಲೀಸರು

    ಮದುವೆಗೆ ಕೆಲವೇ ದಿನವಿದ್ದು, ಈಗ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದಾಳೆ- ತಲೆ ಕೆಟ್ಟುಹೋಗಿದೆ…

    ಧರ್ಮೇಗೌಡರ ಡೆತ್​ನೋಟ್​ ಸಿಕ್ಕಿದೆ- ಅದರಲ್ಲಿ ಅನೇಕ ರಹಸ್ಯಗಳಿವೆ: ಸಿಎಂ ಯಡಿಯೂರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts