More

    ‘ಉತ್ತರ ಪ್ರದೇಶ ಸುಂದರಿ’ಗೆ ಒಲಿಯದ ಮತದಾರ! ಬಿಜೆಪಿ ಎದುರು ‘ಮಿಸ್​ ಬಿಕಿನಿ ಗರ್ಲ್’​ಗೆ ಭಾರಿ ಹಿನ್ನಡೆ…

    ಲಖನೌ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಬಿಜೆಪಿ ಭರ್ಜರಿ ಮುನ್ನಡೆಯತ್ತ ಸಾಗಿದೆ.

    ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳು ಭಾರಿ ಪ್ರಚಾರ ಗಳಿಸಿದ್ದು, ಅದರಲ್ಲಿ ಒಂದು ಹಸ್ತಿನಾಪುರ ಕ್ಷೇತ್ರ. ಇಲ್ಲಿ ಕಾಂಗ್ರೆಸ್​ ಉತ್ತರ ಪ್ರದೇಶದ ಸುಂದರಿ ಅರ್ಚನಾ ಗೌತಮ್​ ಅವರನ್ನು ಕಣಕ್ಕೆ ಇಳಿಸಿತ್ತು. 2014ರಲ್ಲಿ ಮಿಸ್​ ಉತ್ತರ ಪ್ರದೇಶ ಆಗಿದ್ದವರು ಅರ್ಚನಾ.

    ನಟಿ, ರೂಪದರ್ಶಿಯೂ ಆಗಿರುವ ಅರ್ಚನಾ ಗೌತಮ್​ ಮಿಸ್​ ಬಿಕಿನಿ ಇಂಡಿಯಾ, ಮಿಸ್​ ಬಿಕಿನಿ ಯೂನಿವರ್ಸ್​​​ ಇಂಡಿಯಾ ಆಗಿಯೂ ಮಿಂಚಿದ್ದಾರೆ. ಮೀರತ್​​ನ ಐಐಎಂಟಿಯಿಂದ ಬಿಜೆಎಂಸಿ ಯಲ್ಲಿ ಡಿಗ್ರಿ ಪಡೆದುಕೊಂಡಿದ್ದು, 2018ರಲ್ಲಿ ‘ಮೋಸ್ಟ್​ ಟ್ಯಾಲೆಂಟ್’​​ ಶೀರ್ಷಿಕೆ ಗೆದ್ದಿದ್ದಾರೆ. ಇವರನ್ನು ‘ಬಿಕಿನಿ ಗರ್ಲ್’​ ಎಂದೇ ಕರೆಯಲಾಗುತ್ತದೆ.
    .

    2015ರಲ್ಲಿ ಬಾಲಿವುಡ್​ಗೂ ಇವರು ಪ್ರವೇಶ ಮಾಡಿದ್ದಾರೆ. ಆದ್ದರಿಂದ ಇವರು ಸ್ಟಾರ್​ ಎಂದೇ ಎನಿಸಿಕೊಂಡಿದ್ದು, ಇವರ ಮೇಲೆ ಕಾಂಗ್ರೆಸ್​ ಭಾರಿ ಭರವಸೆ ಇಟ್ಟುಕೊಂಡಿತ್ತು. ಆದರೆ ಮತದಾರರು ಇವರತ್ತ ಒಲವು ತೋರಲಿಲ್ಲ. ಇಲ್ಲಿ ಕೂಡ ಬಿಜೆಪಿಯ ದಿನೇಶ್​ ಕಾಟಿಕ್​ ಮುನ್ನಡೆ ಕಾಯ್ದುಕೊಂಡಿದ್ದು, ಅರ್ಚನಾ ಭಾರಿ ಹಿನ್ನಡೆ ಅನುಭವಿಸುತ್ತಿದ್ದಾರೆ.

    ಭಾರಿ ಸಂಚಲನ ಸೃಷ್ಟಿಸಿದ್ದ ಉ.ಪ್ರದೇಶದ ಹಾಥರಾಸ್​, ಲಖೀಂಪುರ ಕ್ಷೇತ್ರಗಳಲ್ಲಿ ಅಚ್ಚರಿಯ ಬೆಳವಣಿಗೆ…

    ಮಾಹಿತಿ ಕೊಟ್ಟಾಗ ಯೂಕ್ರೇನ್​ನಿಂದ ಮರಳದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರಕ್ಕೆ ಖರ್ಚಾದದ್ದು ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts