More

    ದೇವರ ಸನ್ನಿಧಿಯಲ್ಲಿಯೇ ಚಿತ್ರಹಿಂಸೆ ಅನುಭವಿಸಿದ ಸುಂದರ್​ ಇನ್ನಿಲ್ಲ: ಈತನ ಕರಾಳ ಬದುಕಿನ ಕಣ್ಣೀರ ಕಥೆಯಿದು…

    ಆನೇಕಲ್​: ಈ ಚಿತ್ರದಲ್ಲಿ ಕಾಣುತ್ತಿರುವ ಆನೆಯ ಹೆಸರು ಸುಂದರ್​. ಹೆಸರು ಮಾತ್ರ ಸುಂದರ್​. ಆದರೆ ಈ ಆನೆಯ ಬದುಕು ಮಾತ್ರ ಕರಾಳ. ಕ್ಷಣಕ್ಷಣಕ್ಕೂ ಜೀವನದಲ್ಲಿ ನೋವನ್ನೇ ಅನುಭವಿಸಿ, ಇನ್ನೇನು ಸುಂದರವಾದ ಬದುಕನ್ನು ಕಟ್ಟಿಕೊಳ್ಳುತ್ತಲೇ ಎಲ್ಲರನ್ನೂ ಬಿಟ್ಟು ಅಗಲಿದೆ. ಬೆಂಗಳೂರಿನ ಬನ್ನೇರಘಟ್ಟದಲ್ಲಿ ಕೊನೆಯುಸಿರೆಳೆದಿದ್ದಾನೆ ಸುಂದರ್​.

    ಈತನ ಕಥೆ ಶುರುವಾಗುವುದು ಮಹಾರಾಷ್ಟ್ರದ ಕೊಲ್ಲಾಪುರದಿಂದ. 2007ರಲ್ಲಿ ಸುಂದರ್​ನನ್ನು ಕೊಲ್ಲಾಪುರದ ದೇವಾಲಯಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು. ಅಲ್ಲಿಂದಲೇ ಈತನ ನರಕದ ಬಾಳು ಶುರುವಾಗಿದ್ದು. ಕೊಲ್ಲಾಪುರದ ದೇವಸ್ಥಾನದಲ್ಲಿದ್ದ ಈತ ಅನುಭವಿಸಿದ ಚಿತ್ರಹಿಂಸೆ ಅಷ್ಟಿಷ್ಟಲ್ಲ. ವರ್ಷಗಟ್ಟಲೆ ಕೆಲವು ನಿಕೃಷ್ಟ ಮನುಷ್ಯರ ಕೈಯಲ್ಲಿ ನೋವನ್ನು ಅನುಭವಿಸಿದ ಈ ಸುಂದರ್​. ದುಷ್ಟ ಮಾವುತನ ಕೈಯಲ್ಲಿ ಭೀಕರವಾದ ನೋವು ಮತ್ತು ಸಂಕಟಗಳನ್ನು ಸಹಿಸಬೇಕಾಗಿತ್ತು.

    ದೇವಸ್ಥಾನದಲ್ಲಿ ಸುಂದರ್ ತನ್ನ ದಿನಗಳನ್ನು ಏಕಾಂಗಿಯಾಗಿ ಕಳೆಯಬೇಕಾಯಿತು. ಆತನನ್ನು ಕತ್ತಲೆಯ ಶೆಡ್‌ನಲ್ಲಿ ಸರಪಳಿಯಲ್ಲಿ ಕಟ್ಟಿ ಹಾಕಲಾಗಿತ್ತು. ಆತನನ್ನು ನೋಡಿಕೊಳ್ಳುತ್ತಿದ್ದವರು ಚಿತ್ರಹಿಂಸೆ ನೀಡುತ್ತಿದ್ದರು.

    ಒಂದು ಬಾರಿ ಚಿತ್ರಹಿಂಸೆಯಿಂದ ತಪ್ಪಿಸಿಕೊಂಡು ಈತ ಓಡಿ ಹೋಗಿದ್ದ ಕೂಡ. ಈ ಸಂದರ್ಭದಲ್ಲಿ ಬಹಳಷ್ಟು ಸುದ್ದಿಯಾಗಿದ್ದ ಈತ. ಇದು ಭಾರಿ ಸುದ್ದಿಯಾಗುತ್ತಲೇ ಮಹಾರಾಷ್ಟ್ರದ ಅಂದಿನ ಅರಣ್ಯ ಸಚಿವ ಡಾ. ಪತಂಗರಾವ್ ಕದಮ್ ಆನೆಯನ್ನು ಕಾಡಿಗೆ ಬಿಡುವಂತೆ ಸೂಚಿಸಿದ್ದರು. ಪರಿಸರ ಮತ್ತು ಅರಣ್ಯ ಸಚಿವಾಲಯದ ಪ್ರಾಜೆಕ್ಟ್ ಆನೆ ವಿಭಾಗವು ಸುಂದರ್​ನನ್ನು ಅಭಯಾರಣ್ಯಕ್ಕೆ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.

    ಆದರೂ ಈತನಿಗೆ ಬಿಡುಗಡೆ ಸಿಕ್ಕಿರಲಿಲ್ಲ. ಹಳೆಯ ಕೋಳಿ ಶೆಡ್‌ನಲ್ಲಿ ಕೂಡಿ ಹಾಕಲಾಗಿತ್ತು. ಸರಪಳಿಯಲ್ಲಿ ಕಟ್ಟಿ ಚಿತ್ರಹಿಂಸೆ ನೀಡಲಾಗಿತ್ತು. 2013ರಲ್ಲಿ ಪೇಟಾ ಸ್ವಯಂ ಸೇವಾ ಸಂಸ್ಥೆಯು ಮಾವುತ ಸುಂದರ್​ನನ್ನು ಮರದ ಕೋಲಿನಿಂದ ಹಿಂಸಾತ್ಮಕವಾಗಿ ಹೊಡೆಯುವ ರಹಸ್ಯ ದೃಶ್ಯಗಳನ್ನು ಬಿಡುಗಡೆ ಮಾಡಿತ್ತು. ಆನೆಯ ದೇಹವು ಗಂಭೀರ ಗಾಯಗಳಾಗಿರುವ ವಿಡಿಯೋ ಬಿಡುಗಡೆ ಮಾಡಿತ್ತು.

    ಸುಂದರ್ ಇಡೀ ದಿನ ಕಾಂಕ್ರೀಟ್ ಮೇಲೆ ನಿಲ್ಲುವಂತೆ ಕಟ್ಟಿ ಹಾಕಲಾಗಿತ್ತು. ಇದು ಆನೆಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಪರಿಣಾಮ ಬೀರುವುದನ್ನು ತೋರಿಸುತ್ತಿತ್ತು. ವಿಡಿಯೋ ವೀಕ್ಷಿಸಿದ ಪ್ರಾಣಿ ಪ್ರಿಯರು ಆಕ್ರೋಶವನ್ನು ಹೊರ ಹಾಕಿದ್ದರು.
    ದೇವರ ಸನ್ನಿಧಿಯಲ್ಲಿಯೇ ಚಿತ್ರಹಿಂಸೆ ಅನುಭವಿಸಿದ ಸುಂದರ್​ ಇನ್ನಿಲ್ಲ: ಈತನ ಕರಾಳ ಬದುಕಿನ ಕಣ್ಣೀರ ಕಥೆಯಿದು...

    ಪ್ರಪಂಚದಾದ್ಯಂತದ ಸಾವಿರಾರು ಜನ ಸಾಮಾಜಿಕ ಜಾಲತಾಣದಲ್ಲಿ ಆನೆ ಉಳಿಸಲು ಅಭಿಯಾನ ಕೈಗೊಂಡಿದ್ದರು. ಸುಂದರ್​ನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆಗಲೂ ಈತನಿಗೆ ಮುಕ್ತಿ ಸಿಕ್ಕಿರಲಿಲ್ಲ.

    2013ರ ನವೆಂಬರ್ ತಿಂಗಳಿನಲ್ಲಿ ಪೇಟಾ ಸಂಸ್ಥೆ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ದರ್‌ನನ್ನು ನೆಮ್ಮದಿಯ ಜೀವನ ನಡೆಸಬಹುದಾದ ಅಭಯಾರಣ್ಯಕ್ಕೆ ಬಿಡುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 2014ರ ಜೂನ್ 5ರಂದು ಈತನನ್ನು ಅಭಯಾರಣ್ಯಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಲಾಯಿತು. ಆಗಲೂ ಸಾಕಷ್ಟು ಅಡೆತಡೆಗಳು ಎದುರಾದವು.

    ಕೊನೆಗೂ ಸುಂದರ್​ನ ಸುಂದರ ಬದುಕು ಆರಂಭವಾಯಿತು. ಅದು 2014ರ ಜೂನ್ 6. ಸುಂದರ್ ಕರ್ನಾಟಕದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸಿದ, ವಿಶಾಲವಾದ 122 ಎಕರೆ ಅರಣ್ಯ ಪ್ರದೇಶದಲ್ಲಿ ಸುಂದರ್ ಜೀವನ ಪ್ರಾರಂಭವಾಯಿತು. ಸುಂದರ್ ಬನ್ನೇರುಘಟ್ಟದಲ್ಲಿ ಇದ್ದ 13 ಇತರ ಆನೆಗಳ ಹಿಂಡನ್ನು ಸೇರಿದ್ದ.

    ಸುಂದರ್ ಉದ್ಯಾನದ ಪ್ರತ್ಯೇಕ ಪ್ರದೇಶದಲ್ಲಿ ಬಿಡಲಾಗಿತ್ತು. ಹೊಸ ಮಾವುತನ ಜೊತೆ ಸುಂದರ್ ಹೊಂದಿಕೊಂಡ. ಸರಪಳಿಯಿಂದ ಬಂಧಿಸಲ್ಪಟ್ಟು ಉಂಟಾದ ಗಂಭೀರವಾದ ಕಾಲಿನ ಗಾಯಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆದ. ಎಲ್ಲರ ಜೊತೆ ಬೆರೆತು ಇತರೆ ಆನೆಗಳಂತೆ ಜೀವನ ನಡೆಸಿದ್ದ.

    ಬನ್ನೇರುಘಟ್ಟದ ಸಾಕಾನೆ ಲಕ್ಷ್ಮಿ ಮತ್ತು ಸುಂದರ್ ಸ್ನೇಹಿತರಾದರು. ಇತರ ಆನೆಗಳ ಜೊತೆ ಕುಟುಂಬದ ಸದಸ್ಯನಾಗಿ ಬೆರೆತಿದ್ದ ಸುಂದರ್. 2014 ರಿಂದ ನಿನ್ನೆಯವರೆಗೆ ಬನ್ನೇರುಘಟ್ಟದಲ್ಲಿ ತನ್ನ ಜೀವನ ನಡೆಸಿದ್ದ.

    ಕಳೆದ ನಾಲ್ಕೈದು ದಿನಗಳಿಂದ ಹೊಟ್ಟೆ ನೋವು ಹಾಗೂ ಬಾಯಿಯಲ್ಲಿ ಅಲ್ಸರ್ನಿಂದ ನೋವು ಅನುಭವಿಸಿದ್ದ. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗಿದೆ ಸುಂದರ್ ಇಹಲೋಕ ತ್ಯಜಿಸಿದ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸುಂದರ್ ಮಣ್ಣಲ್ಲಿ ಮಣ್ಣಾಗಲಿದ್ದಾನೆ. (ದಿಗ್ವಿಜಯ ನ್ಯೂಸ್​)

    ಬಾಗಲಕೋಟೆ ಬಿಜೆಪಿಯಲ್ಲಿ ಕೋಲಾಹಲ: ಶಾಸಕನ ತಮ್ಮ ಪಕ್ಷದಿಂದ ಔಟ್​- ‘ಸಹೋದರರ ಸವಾಲ್​’ ಎಂದು ಕಾಂಗ್ರೆಸ್​ ವ್ಯಂಗ್ಯ

    ಪೊಲೀಸರಿಂದ ತಪ್ಪಿಸಿಕೊಳ್ಳೋ ಭರದಲ್ಲಿ ಆಸ್ಪತ್ರೆಯ 3ನೇ ಮಹಡಿಯಿಂದ ಬಿದ್ದು ಕಲಬುರಗಿ ಆರೋಪಿ ಸಾವು

    ಇದು ಮದುವೆಯ ಗೋಲ್​ಮಾಲ್​! ಇಲ್ಲಿರೋದೇ ಒಂದೂವರೆ ಸಾವಿರ ಜನ, ಮದ್ವೆಯಾದವ್ರು 1470 ಜನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts