More

    ಮೋದಿಗೆ ದೀದಿ ಕ್ಲೀನ್​ಚಿಟ್​: ಅವರ ತಪ್ಪೇ ಇಲ್ಲ ಎಂದ ಮಮತಾ ಮಾತಿಗೆ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ!

    ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಗೊಮ್ಮೆ ಈಗೊಮ್ಮೆ ಅಚ್ಚರಿಯ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಪ್ರಧಾನಿ ಮೋದಿ ಅವರ ಬಗ್ಗೆ ಸಾಫ್ಟ್​ಕಾರ್ನರ್​ ತೋರಿ ಮಾತನಾಡಿದ್ದು, ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

    ಅಷ್ಟಕ್ಕೂ ಅವರು ಮಾತನಾಡಿರುವುದು ಇತ್ತೀಚೆಗೆ ಹೆಚ್ಚುತ್ತಿರುವ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿಯ ಕುರಿತು. ಕಾಂಗ್ರೆಸ್​ ಸೇರಿದಂತೆ ಇತರ ರಾಜಕೀಯ ನಾಯಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸುತ್ತಿರುವುದಕ್ಕೆ ಪ್ರಧಾನಿ ಮೋದಿಯವರೇ ಕಾರಣ ಎಂದು ವಿಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದರೆ, ಮಮತಾ ಮಾತ್ರ ಅದಕ್ಕೂ ಪ್ರಧಾನಿ ಮೋದಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

    ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇ.ಡಿ.ಯನ್ನು ರಾಜ್ಯ ಪ್ರವೇಶಿಸದಂತೆ ನಿರ್ಬಂಧಿಸುವ ಕುರಿತಾದ ನಿರ್ಣಯವನ್ನು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಮತಾ, ‘ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಛೂ ಬಿಡುತ್ತಿರುವ ಹಿಂದೆ, ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲ ಎಂದೆನಿಸುತ್ತದೆ. ಪ್ರಧಾನಿ ಮೋದಿಯವರು, ತಮ್ಮ ವಿರೋಧಿಗಳನ್ನು ನಿಯಂತ್ರಣದಲ್ಲಿ ಇಡಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನನಗನ್ನಿಸುತ್ತಿಲ್ಲ. ಈ ಷಡ್ಯಂತ್ರದ ಹಿಂದೆ, ಬಿಜೆಪಿಯ ಪ್ರತ್ಯೇಕ ತಂಡವೊಂದಿದೆ. ಬಿಜೆಪಿ ನಾಯಕರು ತಮ್ಮ ಸ್ವಂತ ಹಿತಾಸಕ್ತಿಗಳನ್ನು ಪೂರೈಸಲು ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ’ ಎಂದು ಹೇಳಿದ್ದಾರೆ.

    ಈ ಹಿಂದೆ ಮಾಜಿ ಸಚಿವ ಮತ್ತು ಅಮಾನತುಗೊಂಡ ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರನ್ನು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿಸಲಾಗಿತ್ತು. ಇದರ ನಂತರ, ತೃಣಮೂಲ ಬಿರ್ಭೂಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮಂಡಲ್ ಅವರನ್ನು ಪ್ರಾಣಿ ಕಳ್ಳಸಾಗಣೆ ಆರೋಪದಡಿ ಬಂಧಿಸಲಾಯಿತು. ಕಳೆದ ವರ್ಷ ತೃಣಮೂಲ ಹಿರಿಯ ನಾಯಕರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಅವರನ್ನು ಸಿಬಿಐ ಬಂಧಿಸಿತ್ತು. ಇವುಗಳ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇದಕ್ಕೂ ಪ್ರಧಾನಿ ಮೋದಿಗೂ ಸಂಬಂಧವಿಲ್ಲ ಎಂದು ದೀದೀ ಹೇಳಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ಈ ರೀತಿ ಮಮತಾ ಕ್ಲೀನ್​ಚಿಟ್​ ನೀಡಿರುವುದು ಇದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ (ಏಜೆನ್ಸೀಸ್​)

    ಮೂಡಬಿದಿರೆ ಟು ಮುರಾದಾಬಾದ್​: 45 ಗಂಟೆಗಳಲ್ಲಿ 2700 ಕಿ.ಮೀ ಪ್ರಯಾಣ- ಆಂಬುಲೆನ್ಸ್​ ಚಾಲಕರಿಗೆ ಹ್ಯಾಟ್ಸ್​ಆಫ್​!

    ಡಿಕೆಶಿಗೆ ಶಾಕ್​ ಮೇಲೆ ಶಾಕ್​! ಇ.ಡಿ ಕಚೇರಿಗೆ ಕಾಲಿಡುತ್ತಲೇ ಸುಪ್ರೀಂನಿಂದ ಮತ್ತೊಂದು ಆಘಾತಕಾರಿ ಆದೇಶ

    ಪಿಎಸ್​ಐ ನೇಮಕಾತಿ ಗೋಲ್​ಮಾಲ್​: ಮೈಸೂರಿನ ಇನ್​ಸ್ಪೆಕ್ಟರ್ ಅಶ್ವಿನಿ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts