More

    ಡಿಎಲ್‌, ಆರ್‌ಸಿ ಡೇಟ್‌ ಬಾರ್‌ ಆಗಿದೆ ಎನ್ನೋ ಚಿಂತೆ ಬಿಡಿ: ಇನ್ನು ಮೂರು ತಿಂಗಳು ಆರಾಮಾಗಿರಿ…

    ನವದೆಹಲಿ: ವಾಹನಗಳ ಚಾಲನಾ ಪರವಾನಗಿ (ಡಿಎಲ್‌), ರೆಜಿಸ್ಟ್ರೇಷನ್‌ ಸರ್ಟಿಫಿಕೇಟ್‌ (ಆರ್‌ಸಿ), ಫಿಟ್‌ನೆಟ್‌ ಸರ್ಟಿಫಿಕೇಟ್‌ ಇವೆಲ್ಲವುಗಳೂ ಡೇಟ್‌ ಬಾರ್‌ ಆಗಿದ್ದು, ವಾಹನವನ್ನು ರಸ್ತೆಗೆ ಇಳಿಸೋದು ಹೇಗೆ ಎನ್ನೋ ಚಿಂತೆನಾ? ಲಾಕ್‌ಡೌನ್‌, ಕರೊನಾ ಹಿನ್ನೆಲೆಯಲ್ಲಿ ಇವುಗಳನ್ನು ಅಪ್‌ಡೇಟ್‌ ಮಾಡಿಸಲು ಸಾಧ್ಯವಾಗಿಲ್ಲ, ಪೊಲೀಸರು ಹಿಡಿದರೆ ಏನು ಗತಿ ಎಂಬ ಭಯನಾ?

    ಹಾಗಿದ್ದರೆ ಇನ್ನು ಮೂರು ತಿಂಗಳು ಭಯ ಪಡುವ ಅಗತ್ಯವಿಲ್ಲ. ಏಕೆಂದರೆ ಸೆಪ್ಟೆಂಬರ್‌ ಅಂತ್ಯದವರೆಗೂ ಡೇಟ್‌ಬಾರ್‌ ಆಗಿರುವ ಡಿಎಲ್‌, ಆರ್‌ಸಿ ಸೇರಿದಂತೆ ಕೆಲವು ಪ್ರಮಾಣಪತ್ರಗಳಿಗೆ ಅನುಮತಿ ನೀಡಲಾಗಿದೆ. ಕಚೇರಿಗಳಿಗೆ ಹೋಗಿ ಇದನ್ನು ನವೀಕರಣ ಮಾಡಿಸುವುದು ಕಷ್ಟವಾಗಿರುವ ಕಾರಣ, ಇದರ ಅವಧಿಯನ್ನು ಸೆಪ್ಟೆಂಬರ್ 30,2021 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆಯೇ ಸಾರಿಗೆ ಸಚಿವಾಲಯ ಈ ಬಗ್ಗೆ ಸ್ಪಷ್ಟಪಡಿಸಿದ್ದರೂ ಈಗ ಮತ್ತೊಮ್ಮೆ ಮಾಹಿತಿ ನೀಡಿದೆ. ಹಿಂದೆ ಫೆ.1ರಿಂದ ಜೂ.30ರವರೆಗಿನ ದಾಖಲೆಗಳ ಮಾನ್ಯತೆಯನ್ನು ನೀಡಿ ಪ್ರಕಟಣೆ ನೀಡಲಾಗಿತ್ತು. ಇದೀಗ ಇದರ ಗಡುವು ಅವಧಿಯನ್ನು ಮತ್ತೆ  ಸಚಿವಾಲಯವು ವಿಸ್ತರಣೆ ಮಾಡಿದೆ.

    ಆದರೆ ಒಂದೇ ಒಂದು ಷರತ್ತು ಏನೆಂದರೆ, ನಿಮ್ಮ ಡಿಎಲ್‌, ಆರ್‌ಸಿ ಇಲ್ಲವೇ ಇತರ ದಾಖಲೆಗಳು 2020ರ ಫೆಬ್ರವರಿಯ ನಂತರ ಅವಧಿ ಮೀರಿರಬೇಕು. ಅಂದರೆ ಅದರೊಳಗೆ ಅವಧಿ ಮೀರಿದ್ದು, ನೀವು ನವೀಕರಣ ಮಾಡಿಸಿಕೊಳ್ಳದಿದ್ದರೆ ಆಗ ಅದು ಅಪರಾಧ.

    ಲಾಕ್ ಡೌನ್ ಕಾರಣದಿಂದ ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989 ಕ್ಕೆ ಸಂಬಂಧಿಸಿದ ದಾಖಲೆಗಳ ನವೀಕರಣದಲ್ಲಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಫಿಟ್‌ನೆಸ್, ಪರ್ಮಿಟ್ (ಎಲ್ಲಾ ಪ್ರಕಾರಗಳು), ಚಾಲನಾ ಪರವಾನಗಿ, ಲಾಕ್‌ಡೌನ್ ಕಾರಣದಿಂದಾಗಿ ಮಾನ್ಯತೆಯ ವಿಸ್ತರಣೆಯನ್ನು ನೀಡಲು ಸಾಧ್ಯವಿಲ್ಲದ ದಾಖಲೆಗಳಿಗೆ ಇದು ಅನ್ವಯಿಸಲಿದೆ.

    ಒಂದು ಪೈಸೆಯನ್ನೂ ಖರ್ಚು ಮಾಡದೇ ನೀವು ಆಸ್ತಿಯ ಪಾಲನ್ನು ಪಡೆಯಬಹುದು

    ಸುಳ್ಳು ರೇಪ್‌ ಕೇಸ್‌ನಲ್ಲಿ ಸಿಲುಕಿರೋ ಖ್ಯಾತ ನಟನ ಬದುಕು ಛಿದ್ರ ಛಿದ್ರ- ಕುಟುಂಬದಲ್ಲಿ ಸಾಲು ಸಾಲು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts