More

    ಬಿಜೆಪಿ ಅಧಿಕಾರ ಬಿಟ್ಟುಕೊಟ್ಟರೆ ಇಲ್ಲೇ ಮಲಗಿಯಾದರೂ ಪರಿಸ್ಥಿತಿ ನಿರ್ವಹಿಸುತ್ತೇನೆ- ಡಿಕೆಶಿ

    ಕೊಡಗು: ಪ್ರವಾಹದಿಂದ ನಲುಗಿ ಹೋಗಿರುವ ಕೊಡಗಿನ ಸಂತ್ರಸ್ತರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಕೊಡಗು ಜನರ ಹಿತ ಕಾಯುವಲ್ಲಿ ಆಡಳಿತರೂಢ ಭಾರತೀಯ ಜನತಾ ಪಕ್ಷ ಸೇರಿದಂತೆ ಎಲ್ಲರೂ ಸೋತಿದ್ದಾರೆ ಎಂದು ಗುಡುಗಿದರು.

    ಬ್ರಹ್ಮಗಿರಿ ಬೆಟ್ಟ ಭೂಕುಸಿತದಲ್ಲಿ ಕಣ್ಮರೆಯಾದ ಅರ್ಚಕರ ಕುಟುಂಬದ ರಕ್ಷಣಾ ಕಾರ್ಯಚರಣೆ ಪರಿಶೀಲಿಸಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು, ಇಲ್ಲಿ ಕಳೆದ ಮೂರು ವರ್ಷಗಳಿಂದಲೂ ಮಳೆಯಿಂದಾಗಿ ಆಸ್ತಿ ಪಾಸ್ತಿಯೆಲ್ಲಾ ನಷ್ಟವಾಗುತ್ತಿದೆ. ಯಾವ ಪಕ್ಷಗಳೂ ರಕ್ಷಿಸುವ ಕೆಲಸ ಮಾಡುತ್ತಿಲ್ಲ ಕೊಡಗಿನ ಜನರಿಗೆ ಸಿಗಬೇಕಾಗಿರುವ ಸೌಲಭ್ಯಗಳ ದೊರಕಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶಭರಿತವಾಗಿ ನುಡಿದರು.
    |
    ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದಿದ್ದ ಮೇಲೆ ಸರ್ಕಾರ ಏತಕ್ಕೆ ಇರಬೇಕು. ಬಿಜೆಪಿ ಅಧಿಕಾರ ಬಿಟ್ಟುಕೊಟ್ಟು ನೋಡಲಿ, ಇದೇ ಸ್ಥಳದಲ್ಲಿ ಮಲಗಿಯಾದರೂ ಪರಿಸ್ಥಿತಿ ನಿರ್ವಹಿಸುತ್ತೇನೆ ಎಂದು ಬಿಜೆಪಿಗೆ ಚಾಲೆಂಜ್‌ ಹಾಕಿದರು.

    ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ವರದಿ ಸಿದ್ಧಪಡಿಸಲು ಕಾಂಗ್ರೆಸ್ ಪಕ್ಷದಿಂದ 5 ತಂಡಗಳನ್ನು ರಚಿಸಲಾಗಿದ್ದು, ಇಂದಿನಿಂದಲೇ ನಾನು ನೆರೆ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದೇನೆ ಎಂದ ಅವರು, ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

    ಇದನ್ನೂ ಓದಿ: ಕೃಷ್ಣಾ ನದಿ ಪ್ರವಾಹ; ಮ್ಯಾದರಗಡ್ಡಿಯಲ್ಲಿ ಸಿಲುಕಿದ 14 ಜನ

    ‘ಕರ್ನಾಟಕದ ಕಾಶ್ಮೀರ’ ಎಂದೇ ಕರೆಸಿಕೊಳ್ಳುವ ಕೊಡಗು ಜಿಲ್ಲೆ ರಾಜ್ಯದ ಬೊಕ್ಕಸಕ್ಕೆ ಅಪಾರ ಆದಾಯ ತಂದುಕೊಡುತ್ತದೆ. ಇಲ್ಲಿ ಹುಟ್ಟಿ ಹರಿಯುವ ಕಾವೇರಿಯಿಂದಲೇ ಹಲವು ಜಿಲ್ಲೆಗಳು ಬದುಕಿವೆ. ದೇಶದ ಸೇನೆಗೆ ಹಲವು ಧೀಮಂತ ನಾಯಕರನ್ನು ಈ ಜಿಲ್ಲೆ ನೀಡಿದೆ ಎಂದರು. ಇಂಥ ಕೊಡಗಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅದಕ್ಕಾಗಿ ಸರ್ಕಾರ ಪ್ರತ್ಯೇಕ ಪ್ಯಾಕೆಜ್ ನೀಡಬೇಕು ಎಂದರು.

    ‌ಮುಂದಿನ ಅಧಿವೇಶನದಲ್ಲಿ ಈ ಕುರಿತು ಚರ್ಚಿಸ್ತೇವೆ. ಅನೇಕ ಕಡೆ ತಡೆಗೋಡೆ, ರಸ್ತೆ ಆಗಬೇಕು. ಸಲಹೆ ಕೊಡೋದನ್ನು ಬಿಟ್ಟು ಅಧಿವೇಶನದಲ್ಲಿ 10 ಸಾವಿರ ಕೋಟಿ ಪ್ಯಾಕೆಜ್ ಕುರಿತು ಚರ್ಚಿಸಬೇಕು. ಬೇರೆ ಕೆಲಸ ನಿಲ್ಲಿಸಿ ಶಾಶ್ವತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಕುರಿಬಿಟ್ಟು ಬರಲಾರೆ: ಪ್ರವಾಹದಲ್ಲಿ ಪ್ರಾಣ ಹೋಗುತ್ತಿದ್ದರೂ ಐದು ದಿನ ಕದಲದ ಕುರಿಗಾಹಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts