More

    ಸರ್ಕಾರದ ವಿರುದ್ಧ ಮಾತನಾಡಲು ನಮ್ಗೆ ಒಳ್ಳೇ ಅವಕಾಶ ಕೊಟ್ರೂ ಸುಮ್ನೆ ಇದ್ದೀರಲ್ರಿ… ಅವ್ರನ್ನ ವಜಾಗೊಳಿಸ್ರೀ…

    ಬೆಂಗಳೂರು: ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧವೇ ಸಿಡಿದೆದ್ದು, ರಾಜ್ಯಪಾಲರಿಗೆ ಪತ್ರ ಬರೆದ ಮೇಲೆ ಅವರು ಯಾರಿಗೆ ನಿಷ್ಠೆ ತೋರುತ್ತಿದ್ದಾರೆ? ಇಲ್ಲಿರುವವರೆಲ್ಲ ಚಿಕ್ಕ ಮಕ್ಕಳೇ? ಸಾಮಾನ್ಯ ಪ್ರಜ್ಞೆ ಇರುವ ಹಳ್ಳಿ ಜನರಿಗೂ ಇದರ ಬಗ್ಗೆ ಅರ್ಥವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಈ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು? ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಅವಕಾಶ ಕೊಟ್ಟಿರುವವರು ಯಾರು? ಅವರೇ ಪತ್ರ ಬರೆದು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈಶ್ವರಪ್ಪನವರು ಯಾರಿಗೆ ನಿಷ್ಠರಾಗಿದ್ದಾರೆ? ಎಂದು ಪ್ರಶ್ನಿಸಿದರು.

    ಸಿಎಂ ವಿರುದ್ಧ ಬೇಸತ್ತು, ಎಲ್ಲ ಕಾನೂನು ನಿಯಮಗಳನ್ನು ನಮೂದಿಸಿ ರಾಜ್ಯಪಾಲರಿಗೆ ಪತ್ರ ಬರೆದು ಅವರು ಅವರ ಪಕ್ಷಕ್ಕೆ ನಿಷ್ಠರಿರಬಹುದು. ಆದರೆ ಮುಖ್ಯಮಂತ್ರಿಗಳಿಗೆ ನಿಷ್ಠೆ ತೋರುತ್ತಿಲ್ಲ ಎಂದು ಹೇಳಿದರು.

    ಇಲ್ಲಿ ಸರ್ಕಾರದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಮುಖ್ಯಮಂತ್ರಿಗಳು ಯಾಕೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸದೇ ಸುಮ್ಮನೆ ಕೂತಿದ್ದಾರೆ? ಆ ಮೂಲಕ ಮುಖ್ಯಮಂತ್ರಿಗಳೇ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

    ಬಿಜೆಪಿಯಲ್ಲಿ ಗುಂಪುಗಾರಿಕೆಯಾದರೂ ಮಾಡಿಕೊಳ್ಳಲಿ, ಏನಾದರೂ ಮಾಡಿಕೊಳ್ಳಲಿ. ಈಗಾಗಲೇ ಅವರು ಸಹಿ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರು ಏನುಬೇಕಾದರೂ ಮಾಡಿಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಕರೊನಾ ಮಾರ್ಗಸೂಚಿ ಎರ್ರಾಬಿರ್ರಿ ಮಾಡಿದ್ರೆ ಹುಷಾರ್​, ಸರ್ಕಾರಕ್ಕೇ ಎಚ್ಚರಿಕೆ ನೀಡಿದ ಡಿಕೆಶಿ!

    50 ವರ್ಷಗಳ ಬಳಿಕ ಪ್ರೇಮಿಗಳ ಮಿಲನ… 82 ವರ್ಷದ ಅಜ್ಜನಲ್ಲಿ ಪುಳಕ… ಇದು ಡಿಫರೆಂಟ್​ ಲವ್​ ಸ್ಟೋರಿ…

    ವಿಶೇಷ ವ್ಯಕ್ತಿಯನ್ನು ಭೇಟಿಯಾಗಲು ಬಂದು ದೇವರ ಮುಂದೆ ಕಣ್ಣೀರು ಸುರಿಸಿದ ನಟಿ ಕಂಗನಾ ರಣಾವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts