More

    ಹೊಟ್ಟೆತುಂಬಾ ಉಂಡು ಕೂಲ್​ ಕೂಲ್​ ಆಗ್ರಪ್ಪಾ… ಸಿಎಂ ಮನೆಯಲ್ಲಿ ಕುತೂಹಲ ತಂದ ಡಿನ್ನರ್​ ಪಾರ್ಟಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಇಂದು ಸಂಜೆ ಸಚಿವರು, ಶಾಸಕರನ್ನು ತಮ್ಮ ಮನೆಗೆ ಡಿನ್ನರ್​ ಪಾರ್ಟಿಗೆ ಆಹ್ವಾನ ಇತ್ತಿದ್ದಾರೆ.

    ಇಂದು ಅಧಿವೇಶನ ಮುಕ್ತಾಯವಾದ ಬಳಿಕ ಕಾವೇರಿ ನಿವಾಸದಲ್ಲಿ ಭೋಜನ ಕೂಟವನ್ನು ಏರ್ಪಡಿಸಲಾಗಿದೆ. ಇದಕ್ಕೆ ಸಚಿವರು, ಶಾಸಕರಿಗೆ ಆಹ್ವಾನ ನೀಡಲಾಗಿದೆ. ಪಕ್ಷ ಹಾಗೂ ಸರ್ಕಾರದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಸಾಮಾನ್ಯವಾಗಿ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಲಾಗುತ್ತದೆ. ಆದರೆ ಇದೀಗ ನಿವಾಸದಲ್ಲಿಯೇ ಊಟಕ್ಕೆ ಆಹ್ವಾನ ಇತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹಾಗೂ ಕುತೂಹಲ ಮೂಡಿಸಿದೆ.

    ಸಂಪುಟದಲ್ಲಿ ಸಿಗದ ಸೂಕ್ತ ಸ್ಥಾನಮಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರ ಕೋಪವನ್ನು ತಣಿಸಲು, ಮುನಿಸಿಕೊಂಡಿರುವ ಶಾಸಕರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿಗಳು ಮುಖಾ ಮುಖಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಅದೇ ಇನ್ನೊಂದೆಡೆ, ಬಿಎಸ್​ವೈ ವಿರುದ್ಧ ಕೆಲವು ಶಾಸಕರು ಹೈಕಮಾಂಡ್​ಗೆ ದೂರು ಸಲ್ಲಿಸಲು ರೆಡಿಯಾಗಿವ ಕಾರಣ, ಇದನ್ನು ತಡೆಗಟ್ಟಲೂ ಭೋಜನಕೂಟ ಏರ್ಪಡಿಸಿರುವುದಾಗಿ ಹೇಳಲಾಗುತ್ತಿದೆ.

    ಈಚೆಗೆ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರಾದ ರಾಜುಗೌಡ ನಾಯಕ್, ಶಿವರಾಜ್‍ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಮತ್ತಿತರ ಆಪ್ತ ಶಾಸಕರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಇದಾದ ಮೇಲೆ ಭೋಜನ ಕೂಟಕ್ಕೆ ಆಹ್ವಾನ ಇತ್ತಿರುವುದು ಕುತೂಹಲ ಹೆಚ್ಚಲು ಕಾರಣವಾಗಿದೆ.

    ಅತೃಪ್ತ ಶಾಸಕರು ಇದಾಗಲೇ ತಿರುಗಿಬಿದ್ದಿರುವ ಹಿನ್ನೆಲೆಯಲ್ಲಿ, ಭೋಜನಕೂಟಕ್ಕೆ ಎಲ್ಲರೂ ಹೋಗಲಿದ್ದಾರೆಯೇ, ಇಲ್ಲವೇ ಎಂಬುದು ಈಗಿರುವ ಪ್ರಶ್ನೆ.

    ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭ್ರಷ್ಟಾಚಾರ ಮುಕ್ತವಾಗಿ, ಕುಟುಂಬದವರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೂ ಒಂದೂವರೆ ವರ್ಷ ಕಳೆದರೂ ನಾವು ಅಧಿಕಾರದಲ್ಲಿದ್ದೇವೆ ಎಂಬ ಭಾವನೆಯೇ ಬರುತ್ತಿಲ್ಲ. ಇದು ಕೊನೆಗಾಣಬೇಕು ಎಂಬುದು ಹಲವು ಶಾಸಕರು ಇದಾಗಲೇ ಒತ್ತಾಯವನ್ನೂ ಮಾಡಿದ್ದಾರೆ.

    ನನ್ನ ಸಹಿ ಇಲ್ಲದೇ ಅಣ್ಣ-ಅಮ್ಮ ಹೊಲ ಮಾರಿದ್ದಾರೆ; ಆಸ್ತಿ ಸಿಗಲು ನಾನೇನು ಮಾಡಬೇಕು?

    ಪೋಲಿಯೋ ಡ್ರಾಪ್ಸ್​ ಬದಲು ಸ್ಯಾನಿಟೈಸರ್​: ಕಂದಮ್ಮಗಳ ಪ್ರಾಣದ ಜತೆ ಆರೋಗ್ಯ ಸಿಬ್ಬಂದಿ ಚೆಲ್ಲಾಟ

    ದನಿ ಕೇಳಿಯೇ ಲವ್​ ಆಯ್ತು ಎಂದು ರಾತ್ರಿಯಿಡೀ ನಿದ್ದೆಗೆಡಿಸುತ್ತಾನೆ- ಅವನ ಮನಸ್ಸು ತಿಳಿಯುವುದು ಹೇಗೆ?

    ರಿಮೋಟ್​ ಕಂಟ್ರೋಲ್​​ ಸಹಾಯದಿಂದ ನಿದ್ರಿಸುತ್ತಾಳೀಕೆ! 14 ವರ್ಷ ನಿದ್ದೆಗೆಟ್ಟವಳ ವಿಚಿತ್ರ ಕೇಸಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts