More

    VIDEO: 32 ಗಂಟೆ ರೈಲು ಟ್ರಾಲಿ ತಳ್ಳಿಕೊಂಡು ಊರು ಸೇರಿದ ರಾಜತಾಂತ್ರಿಕ ಕುಟುಂಬದ ಸದಸ್ಯರು!

    ಮಾಸ್ಕೋ: ರಷ್ಯಾದ ರಾಜತಾಂತ್ರಿಕ ಕುಟುಂಬ ಹಾಗೂ ರಾಜತಾಂತ್ರಿಕ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ತಳ್ಳುವ ರೈಲಿನ ಗಾಡಿಯಲ್ಲಿ 32 ಗಂಟೆ ಪ್ರಯಾಣ ಬೆಳೆಸಿ ಉತ್ತರ ಕೊರಿಯಾದಿಂದ ಮನೆಗೆ ವಾಪಸಾಗಿರುವ ಘಟನೆ ನಡೆದಿದೆ.

    ಇದಕ್ಕೆ ಕಾರಣ ಕರೊನಾ ಲಾಕ್‌ಡೌನ್‌. ಉತ್ತರ ಕೊರಿಯಾದಲ್ಲಿ ಕರೊನಾ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ಕಡೆಗಳ ಗಡಿಭಾಗವನ್ನು ಮುಚ್ಚಲಾಗಿದ್ದು, ಯಾವುದೇ ರೀತಿಯ ವಾಹನಕ್ಕೂ ಅವಕಾಶವಿಲ್ಲ. ಆದರೆ ತಳ್ಳುವ ರೈಲು ಗಾಡಿಗಳು ಇಲ್ಲಿಂದ ಸಾಗಲು ಅವಕಾಶ ಕಲ್ಪಿಸಲಾಗಿದೆ.

    ಈ ಹಿನ್ನೆಲೆಯಲ್ಲಿ 3 ವರ್ಷದ ಮಗು ಸೇರಿದಂತೆ 8 ಮಂದಿ ರಾಜತಾಂತ್ರಿಕ ಕುಟುಂಬದ ಸದಸ್ಯರು ಹಾಗೂ ಸಿಬ್ಬಂದಿ ತಳ್ಳುವ ರೈಲು ಟ್ರಾಲಿ ಮೂಲಕ ಉತ್ತರ ಕೊರಿಯಾದಿಂದ ಸಾಗಿದ್ದಾರೆ. ರಷ್ಯಾದ ವಿದೇಶಾಂಗ ಸಚಿವಾಲಯ ತನ್ನ ಅಧಿಕೃತ ಟೆಲಿಗ್ರಾಂ ಖಾತೆ ಮೂಲಕ ಈ ವಿಡಿಯೋವನ್ನ ಶೇರ್​ ಮಾಡಿದ್ದು ಆತಂಕ ವ್ಯಕ್ತಪಡಿಸಿದೆ. ಮನೆ ತಲುಪಲು ಇಷ್ಟೊಂದು ಸುದೀರ್ಘ ಹಾಗೂ ಕಠಿಣ ಪ್ರವಾಸ ಕೈಗೊಂಡಿರುವುದು ನೋವಿನ ಸಂಗತಿ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗುಂಪಿನ ಪುರುಷ ಸದಸ್ಯರು ಗಾಡಿ ತಳ್ಳುತ್ತಿದ್ದು, ಮಹಿಳೆಯರು ಅದರ ಮೇಲೆ ಹೋಗುತ್ತಿರುವುದನ್ನು ನೋಡಬಹುದಾಗಿದೆ. ವಿಡಿಯೋ ಮಾಡುತ್ತಿರುವ ಸಂದರ್ಭದಲ್ಲಿ ಎಲ್ಲರೂ ಕೇಕೇ ಹಾಕಿ ನಗುತ್ತಿದ್ದರೂ ಸತ 32 ಗಂಟೆ ಈ ರೀತಿ ಗಾಡಿ ತಳ್ಳಿಕೊಂಡು ಹೋಗಿರುವುದು ಎಷ್ಟು ಹಿಂಸೆ ನೀಡಿರಬಹುದು ಎಂದು ಅನೇಕ ಮಂದಿ ಕಮೆಂಟ್‌ ಮೂಲಕ ಹೇಳುತ್ತಿದ್ದಾರೆ.

    32 ಗಂಟೆಗಳ ತಳ್ಳುವ ರೈಲಿನ ಮೇಲಿನ ಪ್ರಯಾಣ ಹಾಗೂ ಅಲ್ಲಿಂದ 2 ಗಂಟೆಗಳ ಬಸ್​ ಪ್ರಯಾಣದ ಬಳಿಕ ಈ ಕುಟುಂಬ ತವರಿಗೆ ಮರಳಿದೆ. ಮಾಸ್ಕೋದಲ್ಲಿ ಇವರಿಗೆ ಸ್ವಾಗತ ಕೋರಲಾಗಿದೆ.

    ಶಾಕಿಂಗ್‌! ಶಾಲೆಗೆ ನುಗ್ಗಿದ ದುರ್ಷರ್ಮಿಗಳು- 317 ವಿದ್ಯಾರ್ಥಿನಿಯರನ್ನು ಅಪಹರಿಸಿ ಕರೆದೊಯ್ದರು…

    ಜೈಲಾಧಿಕಾರಿ ಸೇರಿದಂತೆ ಎಂಟು ಮಂದಿಯ ಕೊಲೆ ಮಾಡಿ 100ಕ್ಕೂ ಅಧಿಕ ಕೈದಿಗಳು ಎಸ್ಕೇಪ್‌‌!

    ಹೀಗೊಂದು ಆತ್ಮೀಯ ಬೀಳ್ಕೊಡುಗೆ: ಪೊಲೀಸ್‌ ವ್ಯಾನ್‌ನ ಬಾನೆಟ್‌ ಮೇಲೆ ಕುಳ್ಳರಿಸಿ ಊರೆಲ್ಲಾ ನಡೆಯಿತು ಮೆರವಣಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts