More

    ಮೋದಿಯಿಂದ್ಲೇ ನನ್ನ ಫಾಲೋವರ್ಸ್‌ ಕುಸಿದಿದ್ದು- ರಾಹುಲ್‌ ಕೆಂಡಾಮಂಡಲ: ಟ್ವಿಟರ್‌ ಏನು ಹೇಳಿದೆ ನೋಡಿ…

    ನವದೆಹಲಿ: ಟ್ವಿಟರ್‌ನಲ್ಲಿ ಕಾಂಗ್ರೆಸ್‌ ನಾಯಕ, ರಾಹುಲ್‌ ಗಾಂಧಿಯವರು ಫಾಲೋವರ್ಸ್‌ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಸಾಗಿದೆ; ಈ ಬಗ್ಗೆ ಗರಂ ಆಗಿರುವ ರಾಹುಲ್‌, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಒತ್ತಡದಿಂದ ತಮ್ಮ ಟ್ವಿಟರ್ ಫಾಲೋವರ್​​ಗಳ ಸಂಖ್ಯೆಯನ್ನು ಟ್ವಿಟರ್‌ ಸಂಸ್ಥೆ ಸೀಮಿತಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನ ಸಿಇಒ ಪರಾಗ್ ಅಗರ್ವಾಲ್​ಗೆ ಅವರು ಪತ್ರ ಬರೆದಿದ್ದಾರೆ.

    ಮೊದಲಿಗೆ ನನಗೆ ಪ್ರತಿ ತಿಂಗಳು ಸುಮಾರು 2 ಲಕ್ಷ ಹೊಸಬರು ಟ್ವಿಟರ್​ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ 2021ರ ಆಗಸ್ಟ್ ನಂತರ ಈ ಸಂಖ್ಯೆ ಕೇವಲ 2,500ರ ಆಸುಪಾಸಿನಲ್ಲಿದೆ. ಅಂದರೆ ಎರಡೂವರೆ ಸಾವಿರ ಜನರು ಮಾತ್ರ ಪ್ರತಿ ತಿಂಗಳು ಹೊಸದಾಗಿ ಫಾಲೋ ಮಾಡುತ್ತಿದ್ದಾರೆ. ಅಲ್ಲದೇ ಕೆಲ ಸಮಯದಿಂದ ಟ್ವಿಟರ್ ಫಾಲೋವರ್​​ಗಳ ಸಂಖ್ಯೆ 19.5 ಮಿಲಿಯನ್​ನಲ್ಲೇ ಸ್ಥಿರವಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

    ಅದಕ್ಕೆ ಟ್ವಿಟರ್ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಯಾರಿಗೆ ಎಷ್ಟು ಮಂದಿ ಫಾಲೋ ಮಾಡುತ್ತಾರೋ ಅಷ್ಟು ಮಾತ್ರ ಟ್ವಿಟರ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಫೋಟೋ ಮಾಡುವವರನ್ನು ಸ್ಪಾಮ್‌ಗೆ ಹಾಕುವ ಯಾವುದೇ ಅವಕಾಶ ಟ್ವಿಟರ್‌ನಲ್ಲಿ ಇಲ್ಲ. ಒಂದು ವೇಳೆ ಫಾಲೋ ಮಾಡಿದವರ ಹೆಸರು ಫಾಲೋದಲ್ಲಿ ಕಾಣಿಸುತ್ತಿಲ್ಲ ಎಂದರೆ ಫಾಲೋ ಮಾಡಿದವರಿಗೆ ಈ ವಿಷಯ ಸ್ಪಷ್ಟವಾಗುತ್ತದೆ. ಆದರೆ ಎಲ್ಲಿಯೂ ಹಾಗಾಗಲಿಲ್ಲ. ಎಷ್ಟು ಮಂದಿ ಫಾಲೋ ಮಾಡುತ್ತಿದ್ದಾರೋ ಅಷ್ಟೇ ಸಂಖ್ಯೆಗಳು ಕಾಣಿಸುತ್ತವೆ. ಟ್ವಿಟರ್‌ ಮೇಲೆ ಬಂದಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದೆ.

    ಅಂದಹಾಗೆ, ದೆಹಲಿಯ ಅತ್ಯಾಚಾರ ಸಂತ್ರಸ್ತೆಯೋರ್ವರ ಕುಟುಂಬದ ಫೋಟೋವನ್ನು ಟ್ವೀಟ್ ಮಾಡಿದ ನಂತರ ಆಗಸ್ಟ್​​ನಲ್ಲಿ ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು. ನಂತರ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್​ನ ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಎಂಟು ದಿನಗಳ ಕಾಲ ಅವರ ಖಾತೆಯನ್ನು ಅಮಾನತಿನಲ್ಲಿತ್ತು. ಅದರ ಬಳಿಕ ತಮ್ಮ ಟ್ವಿಟರ್‌ ಫಾಲೋವರ್ಸ್‌ ಸಂಖ್ಯೆ ದಿಢೀರ್‌ ಕುಸಿದಿದ್ದು ಇದಕ್ಕೆ ಪ್ರಧಾನಿಯೇ ಕಾರಣ ಎನ್ನುವುದು ರಾಹುಲ್‌ ಆರೋಪ.

    VIDEO: ರಾಷ್ಟ್ರಗೀತೆ ಹಾಡುತ್ತಲೇ ಪ್ರಾಣ ತ್ಯಜಿಸಿದ ಹಿರಿಯ ಪತ್ರಕರ್ತ- ಚಿಕ್ಕೋಡಿಯಲ್ಲೊಂದು ದುರಂತ

    ಕಾರಲ್ಲಿ ಬರ್ತಾಳೆ ಬೆಂಗಳೂರು ‘ಸುಂದರಿ’… ಮನೆಯ ಕುಂಡ ತುಂಬಿಸ್ಕೊಂಡು ಎಸ್ಕೇಪ್‌ ಆಗ್ತಾಳೆ! ಸಿಸಿಟಿವಿಯಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts