More

    ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ… ವಿಐಪಿಗಳಂತೆ ಅಂತ್ಯಸಂಸ್ಕಾರ

    ವಿಜಯನಗರ: ಈತ ಅರೆಹುಚ್ಚ. ಹೆಸರು ಬಸವರಾಜ್.‌ ಎಲ್ಲರ ಬಾಯಲ್ಲ ಅರೆಹುಚ್ಚು ಬಸ್ಯಾ ಅಂತಲೂ, ಅಪ್ಪಾಜೀ ಅಂತಲೂ ಪ್ರಸಿದ್ಧನಾಗಿದ್ದ. ಅದ್ಯಾವ ಕಾರಣದಿಂದ ಹುಚ್ಚನಾದನೋ ಒಬ್ಬರಿಗೂ ತಿಳಿಯದು. ಆದರೆ ಭಿಕ್ಷೆ ಬೇಡುತ್ತ ಹೂವಿನಹಡಗಲಿ ತುಂಬೆಲ್ಲಾ ಓಡಾಡುತ್ತಿದ್ದ. ಕೆದರಿದ ಕೂದಲು, ಮೊಗದಲ್ಲಿ ನಗು ಇಷ್ಟೇ ಈತನ ಬಂಡವಾಳ, ಇವನ ಒಂದೇ ಒಂದು ವಿಶೇಷ ಗುಣ ಎಂದರೆ ಒಂದು ರೂಪಾಯಿ ಮಾತ್ರ ಭಿಕ್ಷೆ ನೀಡಿ ಎಂದು ಕೇಳುತ್ತಿದ್ದ.

    ಹೂವಿನಹಡಗಲಿ ಜನತೆಗೆ ಈತನ ಬಗ್ಗೆ ಅದ್ಯಾವ ನಂಟೋ ಗೊತ್ತಿಲ್ಲ. ಜನರಿಗೆ ಈ ‘ಅರೆಹುಚ್ಚ ಬಸ್ಯಾ’ ಎಂದರೆ ಬಹಳ ಪ್ರೀತಿ. ಈ ಅಪ್ಪಾಜಿ ಹೂವಿನಹಡಗಲಿಯ ಅದೃಷ್ಟವಂತ ಎಂದೇ ಹೇಳುತ್ತಿದ್ದರು. ಹುಚ್ಚು ಬಸ್ಯಾ ಅಂಗಡಿಗಳಿಗೆ ಬಂದರೆ ಅದೃಷ್ಟ ಖುಲಾಸಿತ್ತದೆ ಎನ್ನುತ್ತಿರುವ ವ್ಯಾಪಾರಸ್ಥರು.

    ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ... ವಿಐಪಿಗಳಂತೆ ಅಂತ್ಯಸಂಸ್ಕಾರ

    ಉಪಮುಖ್ಯಮಂತ್ರಿಯಾಗಿದ್ದ ದಿವಂಗತ ಎಂಪಿ. ಪ್ರಕಾಶ್, ಶಾಸಕರಾಗಿದ್ದ ದಿ. ಎಂಪಿ. ರವೀಂದ್ರ ಅವರೂ ಅಪ್ಪಾಜಿ ಎಂದೇ ಕರೆಯುವಷ್ಟರ ಮಟ್ಟಿಗೆ ಈ ಊರಿಗೆ ಬೇಕಾಗಿದ್ದ ಈ ಬಸ್ಯಾ. ಈಗ ಆತ ಇಹಲೋಕ ತ್ಯಜಿಸಿದ್ದಾನೆ. ಕೆಎಸ್‌ಆರ್‌ಟಿಸಿ ಬಸ್ ಹರಿದು ಅಪ್ಪಾಜಿ ಮೃತಪಟ್ಟಿದ್ದಾನೆ. ಈತನ ಸಾವಿಗೆ ಹೂವಿನಹಡಗಲಿಯಲ್ಲಿ ದುಃಖ ಮಡುಗಟ್ಟಿದೆ. ತಮ್ಮ ಕುಟುಂಬಸ್ಥರನ್ನೇ ಕಳೆದುಕೊಂಡಷ್ಟು ದುಃಖದಲ್ಲಿದ್ದಾರೆ ಊರಿನ ಜನತೆ.

    ಯಾವ ಗಣ್ಯ ವ್ಯಕ್ತಿಗೂ ಕಡಿಮೆ ಇಲ್ಲದಂತೆ ಅಂತ್ಯಸಂಸ್ಕಾರ ನೆರವೇರಿಸಲು ಬಯಸಿದ ಹೂವಿನಹಡಗಲಿ ಜನರು, ಅದ್ಧೂರಿಯಾಗಿ ಈತನ ಅಂತಿಮ ಯಾತ್ರೆಗೆ ನಡೆಸಿದ್ದಾರೆ. ಭಾರಿ ಜನೋಸ್ತಮದ ನಡುವೆ ಅಂತಿಮಯಾತ್ರೆ ನಡೆದಿದೆ. ಅಂತಿಮ ದರ್ಶನಕ್ಕೆ ಇಡೀ ಊರಿಗೆ ಊರೇ ಬಂದಿದೆ. ಅದ್ಯಾವ ಜನ್ಮದ ಋಣವೋ ಎಂಬಂತೆ ಹೂವಿನಹಡಗಲಿಯ ಹುಚ್ಚು ಬಸ್ಯಾ ಇನ್ನು ನೆನಪು ಮಾತ್ರ.

    ‘ಜೈ ಭೀಮ್‌‘ ಚಿತ್ರದ ನಾಯಕ ಸೂರ್ಯನ ಮೇಲೆ ಹಲ್ಲೆ ಮಾಡಿದ್ರೆ ಒಂದು ಲಕ್ಷ ರೂ. ಬಹುಮಾನ!

    ಮದುವೆಗೆಂದು ಇಟ್ಟ ಹಣ ಬಡ ಹೃದ್ರೋಗಿಗಳ ಚಿಕಿತ್ಸೆಗೆಂದು ದೇಣಿಗೆ ನೀಡಿದ ಉಪರಾಷ್ಟ್ರಪತಿ ಮೊಮ್ಮಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts