More

    ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿಗೆ ಕಾರು ಕಾರಣನಾ? ಹಾಂಗ್​ಕಾಂಗ್​​ನಿಂದ ಬಂದ ತಜ್ಞರ ತಂಡ

    ಮುಂಬೈ: ಇದೇ 4ನೇ ತಾರೀಖಿನಿಂದ ಭೀಕರ ಅಪಘಾತದಲ್ಲಿ ಮೃತಪಟ್ಟ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಕಾರಿನ ತನಿಖೆ ನಡೆಸಲು ಮರ್ಸಿಡಿಸ್​​​​​ ಬೆಂಜ್ ಕಾರಿನ ತಜ್ಞರು ಹಾಂಗ್​ಕಾಂಗ್​​ನಿಂದ ಮುಂಬೈಗೆ ಆಗಮಿಸಿದ್ದಾರೆ.

    ಅಹಮದಾಬಾದ್‌ನಿಂದ ಮುಂಬೈಗೆ ಮರ್ಸಿಡಿಸ್ ಕಾರಿನಲ್ಲಿ ಹೋಗುವ ಸಂದರ್ಭದಲ್ಲಿ ಮುಂಬೈ ಸಮೀಪ ಪಾಲ್‌ಘರ್‌ನಲ್ಲಿ ಅಪಘಾತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಕಾರಿನ ಪರಿಶೀಲನೆಯನ್ನು ಇದೀಗ ತಜ್ಞರು ಮಾಡಲಿದ್ದಾರೆ. ತಂಡ ಈಗಾಗಲೇ ಮುಂಬೈಗೆ ಆಗಮಿಸಿದ್ದು, ಕಾರಿನ ಬಗ್ಗೆ ತನಿಖೆ ಆರಂಭಿಸಲಿದ್ದಾರೆ.

    ಅಪಘಾತ ನಡೆದ ಸಂದರ್ಭದಲ್ಲಿ ಏರ್​ಬ್ಯಾಗ್​​ ತೆಗೆದುಕೊಳ್ಳದೇ ಇರುವುದೇ ಸಾವಿಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಇದರ ಅಸಲಿಯತ್ತೇನು ಎಂದು ಪರಿಶೀಲಿಸಲು ಈ ತಂಡ ಆಗಮಿಸಿದೆ. ಅಪಘಾತಕ್ಕೀಡಾದ ಕಾರನ್ನ ಥಾಣೆಯ ಮರ್ಸಿಡಿಸ್ ಶೋ ರೂಂನಲ್ಲಿ ಇಡಲಾಗಿದೆ. ಹಾಂಗ್​ಕಾಂಗ್​​ನಿಂದ ಆಗಮಿಸಿರುವ ತಂಡ ಈಗಾಗಲೇ ಮುಂಬೈ ತಲುಪಿದೆ ಎಂದು ಪಾಲ್ಘರ್​ ಎಸ್​ಪಿ ಬಾಳಾಸಾಹೇಬ್ ಪಾಟೀಲ್​ ತಿಳಿಸಿದ್ದು, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕಾರಿನ ತನಿಖೆ ನಡೆಯಲಿದೆ ಎಂದಿದ್ದಾರೆ.

    ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕಾರು ತಯಾರಕ ಕಂಪೆನಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅಪಘಾತದ ಸಂದರ್ಭದಲ್ಲಿ ಕಾರಿನ ಏರ್‌ ಬ್ಯಾಗ್‌ಗಳು ಏಕೆ ತೆರೆದಿಲ್ಲ? ವಾಹನದಲ್ಲಿ ಏನಾದರೂ ಯಾಂತ್ರಿಕ ದೋಷವಿದೆಯೇ? ಕಾರು ಟೈರ್‌ ಒತ್ತಡ ಏನು ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಕಂಪೆನಿ ಉತ್ತರಗಳನ್ನು ನೀಡಿದ್ದು, ಪೊಲೀಸರ ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದೆ. (ಏಜೆನ್ಸೀಸ್​)

    ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಕಾರು ಅಪಘಾತವಾಗಿದ್ದು ಹೇಗೆ? ತನಿಖೆಯಿಂದ ಸತ್ಯ ಬಯಲು…

    ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿನ ಭವಿಷ್ಯ ಮೊದಲೇ ನುಡಿದಿದ್ದ ಸ್ವಾಮೀಜಿ! ಪೋಸ್ಟ್​ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts