More

    ಕರೊನಾ ಸೋಂಕಿಗೆ ಬಲಿಯಾದ ದೇಶದ ಮೊದಲ ಮಹಿಳಾ ಹೃದ್ರೋಗ ತಜ್ಞೆ

    ನವದೆಹಲಿ: ಭಾರತದ ಮೊದಲ ಹೃದ್ರೋಗ ತಜ್ಞೆಯಾಗಿರುವ ಡಾ ಎಸ್ ಪದ್ಮಾವತಿ ಅವರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    103 ವರ್ಷದ ಪದ್ಮಾವತಿಯವರು “ಗಾಡ್ ಮದರ್ ಆಫ್ ಕಾರ್ಡಿಯಾಲಜಿ” ಎಂದೇ ಪ್ರಸಿದ್ಧರಾದವರು. ಕಳೆದ 11 ದಿನಗಳಿಂದ ರಾಷ್ಟ್ರೀಯ ಹೃದಯ ಸಂಸ್ಥೆಯಲ್ಲಿ (ಎನ್‌ಎಚ್‌ಐ) ಇವರು ಕರೊನಾ ಚಿಕಿತ್ಸೆ ಪಡೆಯುತ್ತಿದ್ದರು. ಪದ್ಮಾವತಿಯವರು ಕೋವಿಡ್ 19 ಸೋಂಕಿಗೆ ತುತ್ತಾಗಿದ್ದರು. ಉಸಿರಾಟದ ತೊಂದರೆ ಮತ್ತು ಜ್ವರ ಸಹ ಕಾಣಿಸಿಕೊಂಡಿತ್ತು. ಅವರು ಇತ್ತೀಚೆಗೆ ನ್ಯುಮೋನಿಯಾದಿಂದಲೂ ಬಳಲುತ್ತಿದ್ದರು. ವೆಂಟಿಲೇಟರ್ ಅಗತ್ಯವಿತ್ತು. ಆದರೆ ಆಕೆಗೆ ಹೃದಯಾಘಾತವಾಗಿದ್ದು ನಮ್ಮ ಪ್ರಯತ್ನ ವಿಫಲವಾಗಿದೆ ಎನ್‌ಎಚ್‌ಐ ತಿಳಿಸಿದೆ.

    ಇದನ್ನೂ ಓದಿ: ಕರೊನಾ ಹೆಚ್ಚಳಕ್ಕೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ ಎಂದ ದಿನೇಶ್‌ ಗುಂಡೂರಾವ್‌: ಕಮೆಂಟಿಗರು ಕಿಡಿಕಿಡಿ…

    ರಾಷ್ಟ್ರೀಯ ಹೃದಯ ಸಂಸ್ಥೆಯ ಸ್ಥಾಪಕರಾಗಿದ್ದ ಪದ್ಮಾವತಿಯವರು 1917ರಲ್ಲಿ ಬರ್ಮಾದಲ್ಲಿ (ಈಗ ಮ್ಯಾನ್ಮಾರ್) ಜನಿಸಿದ್ದರು,. ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ 1942ರಲ್ಲಿ ಭಾರತಕ್ಕೆ ಬಂದಿದ್ದರು. ರಂಗೂನ್ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಿದ್ದ ಇವರು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ನಂತರ ಭಾರತಕ್ಕೆ ಹಿಂದಿರುಗಿದ ನಂತರ, ಅವರು ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

    1962ರಲ್ಲಿ, ಆಲ್ ಇಂಡಿಯಾ ಹಾರ್ಟ್ ಫೌಂಡೇಶನ್ ಸ್ಥಾಪಿಸಿದರು. 1981ರಲ್ಲಿ ದೆಹಲಿಯಲ್ಲಿ ಆಧುನಿಕ ಹೃದಯ ಆಸ್ಪತ್ರೆಯಾಗಿ ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್‌ ಸ್ಥಾಪಿಸಿದರು, ಭಾರತದಲ್ಲಿ ಹೃದ್ರೋಗಶಾಸ್ತ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಾಗಿ ಅಮೆರಿಕನ್‌ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ಎಫ್‌ಎಎಂಎಸ್ ಗೌರವ, 1967ರಲ್ಲಿ ಪದ್ಮವಿಭೂಷಣ, 1992 ರಲ್ಲಿ ಪದ್ಮಭೂಭೂಷಣ ಪ್ರಶಸ್ತಿ ಸಂದಿತ್ತು.

    ಡಾ. ಪದ್ಮಾವತಿಯವರನ್ನು ಭಾನುವಾರ ಪಂಜಾಬಿ ಬಾಗ್‌ನಲ್ಲಿ ಗೊತ್ತುಪಡಿಸಿದ ಕೋವಿಡ್ 19 ಶವಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.

    ಕರೊನಾ ಹೆಚ್ಚಳಕ್ಕೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ ಎಂದ ದಿನೇಶ್‌ ಗುಂಡೂರಾವ್‌: ಕಮೆಂಟಿಗರು ಕಿಡಿಕಿಡಿ…

    ರಿಷಿಕೇಶದಲ್ಲಿ ನಗ್ನವಾಗಿ ನಿಂತು ವಿಡಿಯೋ ಮಾಡಿಕೊಂಡಳು: ಕಾರಣ ಕೇಳಿ ಪೊಲೀಸರು ಹುಬ್ಬೇರಿಸಿದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts