More

    ‘ಕರೊನಾದಿಂದ ಮೃತಪಟ್ಟು ಪ್ರಮಾಣಪತ್ರದಲ್ಲಿ ಸುಳ್ಳು ಬರೆದ್ರೆ ಕುಟುಂಬದವರು ಸುಮ್ನೆ ಇರ್ತಾರಾ? ಗೊಂದಲ ಯಾಕೆ?’

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ನೈಜ ಸಂಖ್ಯೆ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ಅನಗತ್ಯ ಗೊಂದಲ, ಅಪನಂಬಿಕೆ ಹುಟ್ಟುಹಾಕುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಆಕ್ಷೇಪಿಸಿದರು.

    ಭರತ್ ಗೌಡ ಚಾರಿಟಬಲ್ ಟ್ರಸ್ಟ್ ಕೊಡಮಾಡಿದ ಆಹಾರ ಕಿಟ್ ಗಳನ್ನು ತಮ್ಮ ಗೃಹ ಕಚೇರಿ ಬಳಿ ಚಿತ್ರರಂಗದ ಕಲಾವಿದರಿಗೆ ಭಾನುವಾರ ವಿತರಿಸಿ ಮಾತನಾಡಿದ ಅವರು, ಮರಣ ಪ್ರಮಾಣಪತ್ರದಲ್ಲಿ ಕರೊನಾ ಸೋಂಕಿನಿಂದ ಸಾವು ದಾಖಲಾಗಿರುತ್ತದೆ. ಬೇರೆ ಕಾರಣ ನಮೂದಿಸಿದರೆ‌ ಮೃತರ ಸಂಬಂಧಿಕರು ಸುಮ್ಮನಿರಲು ಸಾಧ್ಯವೆ ? ಎಂದು ಕೇಳಿದರು.

    ಎಲ್ಲವೂ ಪಾರದರ್ಶಕವಾಗಿದ್ದು, ನಿಜಾಂಶ ಮುಚ್ಚಿಹಾಕಲಾಗದು. ಕರೊನಾ ಸಂಕಷ್ಟದ ವೇಳೆ ಇಂತಹದ್ದೆಲ್ಲ ಸೃಷ್ಟಿಸಬಾರದು. ರಾಜಕಾರಣ ಮಾಡುವುದಕ್ಕೆ ಬೇರೆ ಸಮಯ, ಸಂದರ್ಭವಿದೆ ಎಂದು ಆರೋಪಿಸಿದವರಿಗೆ ಚಾಟಿ ಬೀಸಿದರು.

    ಗೊಂದಲ ನಿವಾರಣೆ ಶೀಘ್ರ
    ಸಿಎಂ ಬಿಎಸ್ ವೈ ಅವರು ಕಲಾವಿದರ ಬಗ್ಗೆ ಅಪಾರ ಗೌರವ, ಅಭಿಮಾನ ಇಟ್ಟುಕೊಂಡು ಕಷ್ಟದಲ್ಲಿ ಇರುವವರಿಗೆ ತಲಾ 3,000 ರೂ ಪರಿಹಾರ ಪ್ರಕಟಿಸಿದ್ದಾರೆ. ಆ ಕಲಾವಿದರು ಯಾರು ? ಸಿನಿಮಾ, ಕಿರುತೆರೆ ರಂಗಭೂಮಿ, ಜಾನಪದ ಇತ್ಯಾದಿ ಕ್ಷೇತ್ರಗಳಿಗೆ ಸೇರಿದವರಾ? ಎಂಬ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಷ್ಟರಲ್ಲೇ ಸ್ಪಷ್ಟಪಡಿಸಿ, ಗೊಂದಲ ನಿವಾರಿಸಲಿದೆ ಎಂದರು.

    ಘೋಷಿಸಿದ ಪರಿಹಾರ ಮೊತ್ತ ಯಾವುದಕ್ಕೂ ಸಾಲದು ಎನ್ನುವುದು ಗೊತ್ತಿದೆ. ಆರ್ಥಿಕ ಇತಿಮಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಿಎಂ ಬಿಎಸ್ ವೈ ಸ್ಪಂದಿಸಿದ್ದು, ಬೇರೆ ಸಂಘಸಂಸ್ಥೆಗಳು ಕೈಜೋಡಿಸಬೇಕು ಎಂದು ಅಶ್ವತ್ಥ ನಾರಾಯಣ ಕೋರಿದರು.

    ನಿಮಗೂ ಮಕ್ಕಳಿದ್ದರೆ ಅವನ ದೇಹ ಬಯಸ್ತಿದ್ರಾ? ತನ್ನ ಹೆಂಡ್ತಿ, ಮಕ್ಕಳನ್ನೇ ಪಾಲಿಸದವ ನಿಮಗೇನು ಮಾಡಿಯಾನು?

    ವಾರಾಂತ್ಯದಲ್ಲೇ ವಾರಕ್ಕಾಗೋವಷ್ಟು ಕರೊನಾ: ನಾಲ್ಕು ಗಂಟೆಯಲ್ಲೇ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದರು!

    ಕೋವಿಡ್‌ಗೆ ಪರಿಣಾಮಕಾರಿಯಾದ ಕೊವ್ಯಾಕ್ಸಿನ್‌ಗೆ ಅನುಮೋದನೆ ಅಡ್ಡಿ! ಆರೋಗ್ಯ ಸಂಸ್ಥೆಗೆ ಕೇಂದ್ರದ ದೌಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts