More

    ಮಾಸ್ಕ್‌ ಒಳಗೆ ಬ್ಯಾಟರಿ, ಚಾರ್ಜಿಂಗ್, ಸಿಮ್ ಕಾರ್ಡ್! ಕಾನ್ಸ್‌ಟೆಬಲ್‌ ನೇಮಕಾತಿ ಪರೀಕ್ಷೆಯ ಅಕ್ರಮದ ಪರಿ ಇದು…

    ಮುಂಬೈ: ವಿವಿಧ ಪರೀಕ್ಷೆಗಳಲ್ಲಿ ಅಕ್ರಮ ನಡೆಸಲು ಹಲವಾರು ವಿಧಗಳನ್ನು ಅಭ್ಯರ್ಥಿಗಳು ಅಳವಡಿಸಿಕೊಂಡಿರುತ್ತಾರೆ. ಆದರೆ ಇದೀಗ ಮಾಸ್ಕ್‌ ಬಳಕೆ ಕಡ್ಡಾಯವಾಗಿರುವ ಈ ಹೊತ್ತಿನಲ್ಲಿ ಮಾಸ್ಕ್‌ ಒಳಗೇ ವಿವಿಧ ತಂತ್ರಜ್ಞಾನ ಅಳವಡಿಸಿಕೊಂಡು ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‍ವಾಡ್‍ನಲ್ಲಿ ನಡೆದಿದೆ.

    ಎಲೆಕ್ಟ್ರಾನಿಕ್ ಸಾಧನದೊಂದಿಗೆ ಫೇಸ್ ಮಾಸ್ಕ್ ಧರಿಸಿ ಅಭ್ಯರ್ಥಿಯೊಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ಇಲ್ಲಿಯ ಬ್ಲೂ ರಿಡ್ಜ್ ಪಬ್ಲಿಕ್ ಸ್ಕೂಲ್‍ನಲ್ಲಿ ಕಾನ್ಸ್‌ಟೆಬಲ್‌ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿತ್ತು. ಈ ಸಮಯದಲ್ಲಿ ಪೊಲೀಸರು ತಪಾಸಣೆ ಮಾಡುವಾಗ ಅಭ್ಯರ್ಥಿಯೊಬ್ಬನ ಸ್ವಲ್ಪ ಭಿನ್ನವಾಗಿರುವ ಮಾಸ್ಕ್‌ ಮೇಲೆ ಅವರ ಗಮನ ಹೋಗಿದೆ. ಆಗ ಮಾಸ್ಕ್‌ ತೆಗೆಸಿದ್ದಾರೆ. ಅದನ್ನು ನೋಡಿ ಪೊಲೀಸ್‌ ಅಧಿಕಾರಿ ಶಶಿಕಾಂತ್ ದೇವಕಾಂತ್ ಹುಬ್ಬೇರಿಸಿದ್ದಾರೆ.

    ಏಕೆಂದರೆ ಅದು ಕೇವಲ ಮಾಸ್ಕ್‌ ಆಗಿರಲಿಲ್ಲ. ಬದಲಿಗೆ ಅದರಲ್ಲಿ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಲಾಗಿತ್ತು. ಜಿಬಿಎಸ್ ಬ್ಯಾಟರಿ, ಚಾರ್ಜಿಂಗ್ ಪಾಯಿಂಟ್, ಮೊಬೈಲ್‌ ಸಿಮ್
    ಕಾರ್ಡ್, ಸ್ವಿಚ್ ಮತ್ತು ಮೈಕ್ ಕೂಡ ಇದ್ದವು. ಇವುಗಳನ್ನು ವೈರ್‌ಗಳೊಂದಿಗೆ ಸಂಪರ್ಕಿಸಲಾಗಿತ್ತು. ಇದರ ಮೂಲಕ ಪರೀಕ್ಷೆಯಲ್ಲಿ ಬಂದಿರುವ ಪ್ರಶ್ನೆಗಳಿಗೆ ಬೇರೆ ಕಡೆಗಳಿಂದ ಸುಲಭದಲ್ಲಿ ಉತ್ತರ ಕಂಡುಹಿಡಿಯಲು ಸಾಧ್ಯವಾಗಿತ್ತು.

    ತಪಾಸಣೆ ನಡೆಸುತ್ತಿದ್ದಂತೆಯೇ ಅಭ್ಯರ್ಥಿ ಪರೀಕ್ಷೆ ಹಾಲ್‌ ಬಿಟ್ಟು ಓಡಿಹೋಗಿದ್ದಾನೆ. ಆತನ ವಿರುದ್ಧ ದೂರು ದಾಖಲಾಗಿದೆ. ಆದರೆ ಸದ್ಯ ಪೊಲೀಸರ ಕಣ್ಣುತಪ್ಪಿಸಿಕೊಂಡು ಹೋಗಿರುವ ಆತನಿಗಾಗಿ ಶೋಧ ಕಾರ್ಯ ನಡೆದಿದೆ.

    ಎಸ್‌ಎಸ್‌ಎಲ್‌ಸಿ ಆಗಿದೆಯಾ? ಜಿಲ್ಲಾ ಕೋರ್ಟ್‌ನಲ್ಲಿವೆ ಜಾರಿಕಾರರ ಹುದ್ದೆ: 40 ಸಾವಿರ ರೂ.ಸಂಬಳದ ಜತೆ ಇತರ ಭತ್ಯೆ

    ರೇಪ್ ಕೇಸ್‌ ತನಿಖೆ ವೇಳೆ ಸಿಕ್ಕಿದ್ದು 5 ಸಾವಿರ ಸ್ತ್ರೀಯರು! ವಿಶ್ವದ ಟಾಪ್‌ಮೋಸ್ಟ್‌ ಸಿರಿವಂತನ ಭಯಾನಕ ಕಥೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts