More

    ವಾಣಿಜ್ಯ ಬಳಕೆ ಸಿಲಿಂಡರ್ ಬಳಸುವ ಗ್ರಾಹಕರಿಗೆ ಬಿಗ್‌ ಶಾಕ್‌: 43 ರೂ. ಹೆಚ್ಚಳ

    ನವದೆಹಲಿ: ಪ್ರತಿ ತಿಂಗಳೂ ಅಡುಗೆ ಅನಿಲದ ಬೆಲೆ ಏರುಗತಿಯಲ್ಲಿಯೇ ಸಾಗುತ್ತಿದೆ. ಕಳೆದ ತಿಂಗಳು ಅಂದರೆ ಸೆಪ್ಟೆಂಬರ್‌ಗೆ ಅನ್ವಯ ಆಗುವಂತೆ ಪ್ರತಿ ತಿಂಗಳೂ 25 ರೂಪಾಯಿ ಏರಿಕೆ ಆಗುತ್ತಲೇ ಸಾಗಿತ್ತು. ಇದರ ಬೆನ್ನಲ್ಲೇ ಇದೀಗ ವಾಣಿಜ್ಯ ಬಳಕೆ ಸಿಲಿಂಡರ್‌ ಬಳಸುವ ಗ್ರಾಹಕರಿಗೆ ಶಾಕ್‌ ನೀಡಲಾಗಿದೆ.

    ಅದೇನೆಂದರೆ ಅಕ್ಟೋಬರ್ 1 ರಿಂದ ಅನ್ವಯ ಆಗುವಂತೆ ವಾಣಿಜ್ಯ ಬಳಕೆ ಸಿಲಿಂಡರ್ ಅನ್ನು 43.5 ರೂಪಾಯಿಗೆ ಏರಿಸಲಾಗಿದೆ. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 43.5 ರೂ.ಗಳವರೆಗೆ ಹೆಚ್ಚಿಸಿದೆ.

    ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1693 ರೂ.ಗಳಿಂದ ಪ್ರತಿ ಸಿಲಿಂಡರ್ ಗೆ 1736.5 ರೂ.ಗೆ ಏರಿಕೆಯಾಗಿದೆ.

    ಆದರೆ ಸಂತಸದ ಸಂಗತಿಯೆಂದರೆ, ಅಡುಗೆ ಇಂಧನದ ಬೆಲೆಯಲ್ಲಿ ಸದ್ಯ ಯಾವುದೇ ಏರಿಕೆಯಾಗಿಲ್ಲ.

    ಸೆಪ್ಟೆಂಬರ್ 1ರಂದು ಬೆಲೆ ಏರಿಕೆಯಾದಂತೆ ಅಡುಗೆ ಇಂಧನದ ಬೆಲೆ ಸದ್ಯ ದೆಹಲಿ: 884.50 ರೂ, ಬೆಂಗಳೂರು: 887.5 ರೂ, ಮುಂಬೈ: 884.50 ರೂ, ಕೋಲ್ಕತಾ: 911 ರೂ, ಚೆನ್ನೈ: 900.50 ರೂ ಹಾಗೂ ಹೈದರಾಬಾದ್: 937 ರೂ ಇವೆ.

    ಖಾಲಿ ಇವೆ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು: 1.83 ಲಕ್ಷ ರೂ.ವರೆಗೆ ಸಂಬಳ: ಇಲ್ಲಿದೆ ಸಂಪೂರ್ಣ ವಿವರ

    ರಾಜೀವಗಾಂಧಿ ಹತ್ಯೆ- 30 ವರ್ಷಗಳ ಬಳಿಕ ಮರಳಿದ ರಕ್ತಸಿಕ್ತ ಕ್ಯಾಪ್‌… ಕಣ್ಣೀರಾದ ಐಪಿಎಸ್‌ ಅಧಿಕಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts