More

    ನೀರು ಕುಡಿದ ಆಟಗಾರ- ಕೋಕಾಕೋಲಾ ಕಂಪೆನಿಗೆ 30 ಸಾವಿರ ಕೋಟಿ ರೂ ನಷ್ಟ! ಇದೇನು ವಿಚಿತ್ರ ಅಂತೀರಾ?

    ಬುಡಾಪೆಸ್ಟ್‌ (ಹಂಗೇರಿ): ಚಿತ್ರನಟರು ಮತ್ತು ಕ್ರೀಡಾ ತಾರೆಯರನ್ನು ಅಭಿಮಾನಿಗಳು ಎಷ್ಟರಮಟ್ಟಿಗೆ ಫಾಲೋ ಮಾಡುತ್ತಾರೆ, ಅವರು ಮಾಡುವ ಕಾರ್ಯಗಳು (ಕೆಟ್ಟದ್ದು, ಒಳ್ಳೆಯದ್ದು ಎರಡೂ) ಅಭಿಮಾನಿಗಳ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಈ ಘಟನೆ ತಾಜಾ ಉದಾಹರಣೆ.

    ಪ್ರಸಿದ್ಧ ಫುಟ್‌ಬಾಲ್‌ ಆಟಗಾರನೊಬ್ಬ ನೀರು ಕುಡಿದ ಕಾರಣಕ್ಕೆ ಕೋಕಾಕೋಲಾ ಕಂಪೆನಿಗೆ 2 ಬಿಲಿಯನ್‌ ಡಾಲರ್‌ (ಸುಮಾರು 30 ಸಾವಿರ ಕೋಟಿ ರೂಪಾಯಿ) ನಷ್ಟವಾಗಿದೆ ಎಂದರೆ ನಂಬುವಿರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್‌ ಕಥೆ.

    ಆಗಿದ್ದೇನೆಂದರೆ ಪೋರ್ಚುಗಲ್‌ ಹಾಗೂ ಹಂಗೇರಿ ನಡುವಿನ ಯೂರೊ ಕಪ್‌ ಫ‌ುಟ್‌ಬಾಲ್‌ ಪಂದ್ಯವು ಹಂಗೇರಿಯಲ್ಲಿ ನಡೆಯುತ್ತಿದೆ. ಫುಟ್‌ಬಾಲ್‌ನ ವಿಶ್ವಖ್ಯಾತಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಆ ಸಮಯದಲ್ಲಿ ಟೇಬಲ್‌ನಲ್ಲಿ ಕೊಕಾಕೊಲಾ ಬಾಟಲ್‌ಗ‌ಳನ್ನು ಜೋಡಿಸಿಡಲಾಗಿತ್ತು. ಆಗ ರೊನಾಲ್ಡ್‌ ಅವರು ಬಾಯಾರಿಕೆಯಾದಾಗ ಕೊಕಾಕೊಲಾ ಬಾಟಲಿಯನ್ನು ಬದಿಗಟ್ಟು ನೀರಿನ ಬಾಟಲನ್ನು ಕೈಯಲ್ಲಿ ಹಿಡಿದುಕೊಂಡು ನೀರು ಕುಡಿಯಿರಿ ಎಂದು ಹೇಳಿದರು ಅಷ್ಟೇ…

    ಇಲ್ಲಿ ಇಷ್ಟು ಆಗುತ್ತಿದ್ದಂತೆಯೇ ಕೋಕಾಕೋಲಾ ಕಂಪೆನಿಯ ಶೇರು ಮಾರುಕಟ್ಟೆ ದಿಢೀರ್‌ ಕುಸಿದು ಹೋಗಿದೆ. ಒಂದಲ್ಲ… ಎರಡಲ್ಲ ಬರೋಬ್ಬರಿ 2 ಬಿಲಿಯನ್‌ ಡಾಲರ್‌ ನಷ್ಟ ಕಂಪೆನಿಗೆ ಆಗಿದೆ! ವಿಚಿತ್ರ ಎನಿಸಿದರೂ ಇದು ಸತ್ಯ. ಏಕೆಂದರೆ ಜನರನ್ನು ಮರಳು ಮಾಡಲು ಹಲವು ಕಂಪೆನಿಗಳು ಕ್ರೀಡಾ ತಾರೆಯರು, ಸಿನಿಮಾ ನಟ- ನಟಿಯರನ್ನು ಬಳಸುವುದು ಹೊಸತೇನಲ್ಲ. ಕೊಕಾಕೊಲಾ ಯೂರೊ ಕಪ್‌ನ ಅಧಿಕೃತ ಪ್ರಾಯೋಜಕರಲ್ಲೊಂದಾಗಿತ್ತು. ಅದರಿಂದಲೇ ಅದನ್ನು ಅಲ್ಲಿ ಇಡಲಾಗಿತ್ತು.

    ಈಗ ಕಂಪೆನಿ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ರೊನಾಲ್ಡೊ ವಿರುದ್ಧ ಸಂಘಟಕರು ಶಿಸ್ತುಕ್ರಮ ತೆಗೆದು ಕೊಳ್ಳಲು ಮುಂದಾಗಿದ್ದಾರೆ!

    ಇಲ್ಲಿದೆ ನೋಡಿ ವಿಡಿಯೋ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts