More

    ದೇವಾಲಯದ ಆವರಣ ಶುಚಿಗೊಳಿಸಲು ಹೋಗಿ ಎಡವಟ್ಟು: ಹಳೆಬೀಡಿನ ಐತಿಹಾಸಿಕ ವಿಗ್ರಹಗಳಿಗೆ ಹಾನಿ

    ಹಾಸನ: ದೇಶದ ಕೆಲವೇ ಕೆಲವು ಅಪರೂಪದ ಐತಿಹಾಸಿಕ ಸ್ಮಾರಕಗಳು ಹಾಗೂ ದೇಗುಲಗಳ ಪೈಕಿ ಕರ್ನಾಟಕದ ಬೇಲೂರು ಮತ್ತು ಹಳೇಬೇಡು ಕೂಡ ಒಂದು. ಅದರಲ್ಲಿಯೂ ಹಳೆಬೀಡಿನ ಹೊಯ್ಸಳೇಶ್ವರ ದೇಗುಲಕ್ಕೆ ಅದರದ್ದೇ ಆದ ವಿಶೇಷತೆಗಳಿದ್ದು, ದೇಶ- ವಿದೇಶಗಳಿಂದ ಈ ದೇಗುಲ ನೋಡಲು ಪ್ರವಾಸಿಗರು ಆಗಮಿಸುತ್ತಾರೆ.

    ಆದರೆ ಇದೀಗ ಎಡವಟ್ಟಿನಿಂದಾಗಿ ಈ ದೇಗುಲದ ಮೂರ್ತಿಗಳಿಗೆ ಹಾನಿಯಾಗಿರುವ ಘಟನೆ ನಡೆದಿದೆ. ದೇವಾಲಯದ ಸುತ್ತಮುತ್ತಲೂ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚುವಾಗ ಹಲವು ವಿಗ್ರಹಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ.

    ಜೈನ ಬಸದಿ ಹಿಂಭಾಗದಲ್ಲಿ ಪುರಾತತ್ವ ವಿಭಾಗದಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ಉತ್ಖನನ ಕಾರ್ಯ ಸುಗಮವಾಗಿ ನಡೆಯುವ ಉದ್ದೇಶದಿಂದ ಗಿಡಗಂಟೆ ನಾಶಪಡಿಸಲು ಬೆಂಕಿ ಹಾಕಿದ್ದಾರೆ. ಈ ಸಮಯದಲ್ಲಿ ಅಚಾತುರ್ಯ ನಡೆದಿದೆ.

    ಈ ದೇವಾಲಯದ ಸುತ್ತಲೂ ಇರುವ ಕಳೆಗಳನ್ನು ಕಿತ್ತು ಆವರಣವನ್ನು ಶುಚಿಗೊಳಿಸುವ ಉದ್ದೇಶದಿಂದ ಮೊದಲು ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಬೆಂಕಿ ಕೆನ್ನಾಲಗೆ ಚಾಚಿ ದೇವಸ್ಥಾನದಲ್ಲಿರುವ ಐತಿಹಾಸಿಕ ವಿಗ್ರಹಗಳು ಸುಟ್ಟುಹೋಗಿವೆ. ಇದರಿಂದ ವಿಗ್ರಹಗಳು ಭಗ್ನವಾಗಿವೆ. ಬಿಸಿಲಿಗೆ ಒಣಗಿದ್ದ ಗಿಡ-ಬಳ್ಳಿಗಳು ಧಗಧಗನೆ ಹೊತ್ತಿಕೊಂಡು ಉರಿದಿದ್ದು ಕೆರೆ ದಂಡೆಯಲ್ಲಿದ್ದ ಹುಚ್ಚೇಶ್ವರ (ಬ್ರಹ್ಮೇಶ್ವರ) ಸ್ಮಾರಕದ ಬಹುಭಾಗ ಬೆಂಕಿಯ ಜ್ವಾಲೆಗೆ ಸಿಲುಕಿ ಕರಕಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ಭಾರತೀಯ ಪುರಾತತ್ವ ವಿಭಾಗದಿಂದ ನಿಯೋಜಿರಾಗಿದ್ದ ಕಾರ್ಮಿಕರು ಇಂಥದ್ದೊಂದು ಬೇಜವಾಬ್ದಾರಿಯ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಬೆಂಕಿ ಚಾಚುತ್ತಿದ್ದಂತೆಯೇ ಅದನ್ನು ನಂದಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅದಾಗುವ ಮೊದಲೇ ವಿಗ್ರಹಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಉತ್ಖನನ ಕಾರ್ಯದಲ್ಲಿ ಪಾಲ್ಗೊಂಡವರು ವಿಗ್ರಹಗಳ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಉತ್ಖನನ ಮಾಡಿ ಪ್ರಯೋಜನವೇನು ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

    ಹೆಲಿಕಾಪ್ಟರ್‌ ಖರೀದಿಸಿ ಓಡಿಸಬೇಕಿದೆ… ಪ್ಲೀಸ್‌ ಪರವಾನಗಿ ನೀಡಿ: ಮಹಿಳೆಯೊಬ್ಬರಿಂದ ರಾಷ್ಟ್ರಪತಿಗೆ ಮನವಿ

    ಭಾರತಕ್ಕೆ ಮಸಿಬಳಿಯಲು ಗುಟ್ಟಾಗಿ ತಯಾರಿಸಿದ್ದ ‘ಟೂಲ್‌ಕಿಟ್‌’ ವಿವಾದ: ಗ್ರೇಟಾಳಿಂದ ಸಿಕ್ಕಿಬಿದ್ದ ದಿಶಾ ಅರೆಸ್ಟ್‌

    ಪುಲ್ವಾಮಾದಲ್ಲಿ ಪಾಕ್‌ ಉಗ್ರರ ಅಟ್ಟಹಾಸಕ್ಕೆ ಎರಡು ವರ್ಷ: 40 ಯೋಧರ ನೆನೆದು ಕಣ್ಣೀರು

    ಶಾಕಿಂಗ್‌! ಚಾವಣಿ ತೆಗೆದು ಒಳನುಗ್ಗಿ ಹಸುಗೂಸನ್ನು ಎಳೆದೊಯ್ದ ಮಂಗ- ಅಸುನೀಗಿದ ಕಂದಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts