More

    VIDEO: ಮೇಡ್‌ ಇನ್‌ ಚೀನಾ: ಎರಡೇ ವರ್ಷದಲ್ಲಿ ಧರೆಗುರುಳುತಿದೆ ಪಾಕ್‌ ವಿಮಾನನಿಲ್ದಾಣದ ಸೂರು

    ಇಸ್ಲಾಮಾಬಾದ್: ಚೀನಾ ಮೇಡ್‌ ಎಂದರೆ ಅದರ ಗುಣಮಟ್ಟದ ಬಗ್ಗೆ ಬೇರೆ ಹೇಳುವಂತೆಯೇ ಇಲ್ಲ. ಇದೀಗ ಪಾಕಿಸ್ತಾನದ ವಿಮಾನ ನಿಲ್ದಾಣವೂ ಚೀನಾ ಮೇಡ್‌ಗೆ ಸಾಕ್ಷಿಯಾಗಿದೆ.

    ಭಾರಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಐಐಎಪಿ) ಸೀಲಿಂಗ್ ಉದುರುತ್ತಿದ್ದು, ಅದರ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ.

    ಧರೆಗುರುಳುತಿದೆ ಪಾಕ್‌ ವಿಮಾನನಿಲ್ದಾಣ ಸೂರು

    ಪಾಕ್‌ ವಿಮಾನ ನಿಲ್ದಾಣದ ಸೂರು ಬೀಳುತ್ತಿರುವ ದೃಶ್ಯ

    Posted by Vijayavani on Tuesday, August 18, 2020

    ಅಚ್ಚರಿಯ ಸಂಗತಿ ಎಂದರೆ ಈ ವಿಮಾನ ನಿಲ್ದಾಣವನ್ನು ಶುರು ಮಾಡಿ ಇನ್ನೂ ಎರಡು ವರ್ಷ ಕೂಡ ಆಗಿಲ್ಲ. ನಿಲ್ದಾಣದ ಛಾವಣಿ ಮೇಲೆ ಮಳೆನೀರು ಹರಿಯುತ್ತಿದ್ದಂತೆ ಸೀಲಿಂಗ್‌ನ ಒಂದು ಭಾಗ ಕೆಳಗೆ ಬೀಳುತ್ತಿದೆ. ಇದರಿಂದ ಜನರಲ್ಲಿ ಆತಂಕ ಶುರುವಾಗಿದೆ.
    ಹೀಗೆಯೇ ಮುಂದುವರೆದರೆ ಇಡೀ ವಿಮಾನ ನಿಲ್ದಾಣವೇ ಕುಸಿದುಬೀಳುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

    2018ರಲ್ಲಿ ಉದ್ಘಾಟನೆಯಾದ ಈ ವಿಮಾನ ನಿಲ್ದಾಣದ ನಿರ್ಮಾಣವನ್ನು ಚೀನಾದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ನಿರ್ಮಾಣ ಕಂಪನಿಗಳಲ್ಲಿ ಒಂದಾದ ಚೀನಾ ಸ್ಟೇಟ್ ಕನ್ಸ್ಟ್ರಕ್ಷನ್ ಎಂಜಿನಿಯರಿಂಗ್ ಕಾರ್ಪೊರೇಷನ್ ವಹಿಸಿಕೊಂಡಿದೆ. ಇಷ್ಟು ಬೇಗನೇ ಇಂಥದ್ದೊಂದು ದುರ್ಗತಿ ಏಕೆ ಬಂತು ಎಂದು ಪಾಕಿಸ್ತಾನ ತಲೆ ಕೆಡಿಸಿಕೊಳ್ಳುತ್ತಿದೆ.

    ಇದು ಈ ವರ್ಷದ ಕಥೆಯಾದರೆ, ಹಿಂದಿನ ವರ್ಷವೇ ಅಂದರೆ ನಿಲ್ದಾಣ ಉದ್ಘಾಟನೆಯಾದ ಒಂದೇ ವರ್ಷದಲ್ಲಿಯೇ ಮಳೆನೀರು ವಿಮಾನ ನಿಲ್ದಾಣಕ್ಕೆ ಪದೇ ಪದೇ ಪ್ರವೇಶಿಸಿದ್ದು, ವರ್ಷದಿಂದಲೂ ಇದರ ಬಗ್ಗೆ ವಿಚಾರಣೆ ನಡೆಯುತ್ತಲೇ ಇದೆ. ಆದರೆ ಸಮಸ್ಯೆ ಮಾತ್ರ ಇದುವರೆಗೆ ಪರಿಹಾರ ಆಗಲಿಲ್ಲ. ಕಳೆದ ವರ್ಷ ಹಾಗೂ ಈ ವರ್ಷದ ಮಳೆಯಿಂದಾಗಿ ವಿಮಾನ ನಿಲ್ದಾಣದ ಒಳಗೆ ಕೊಚ್ಚೆ ನಿರ್ಮಾಣ ಆಗಿರುವುದೂ ಇದೆ.

    ಈ ಕುರಿತು ಖುದ್ದು ವಿಮಾನ ನಿಲ್ದಾಣ ವ್ಯವಸ್ಥಾಪಕರೇ ಮಾಹಿತಿ ನೀಡಿದ್ದಾರೆ.ಮಳೆ ನೀರಿನಿಂದಾಗಿ ವಿಪರೀತ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದ್ದು, ಚರಂಡಿಗಳು ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಭಾರಿ ಮಳೆಗೆ ಹೊರಬಂತು 2400 ವರ್ಷಗಳ ಹಳೆಯ ‘ಮಮ್ಮಿ ’

    ಪಾಕಿಸ್ತಾನದ ಪತ್ರಕರ್ತ ಒಮರ್ ಆರ್ ಖುರೇಷಿ ಅವರು ಇದರ ವಿಡಿಯೋ ಮಾಡಿ ಪೋಸ್ಟ್‌ ಮಾಡಿದ್ದು, ಇದೀಗ ಸಖತ್‌ ವೈರಲ್‌ ಆಗಿದೆ.

    ಈ ಹಿಂದೆ ಬೆನಜೀರ್ ಭುಟ್ಟೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತಿತ್ತು. 2018ರಲ್ಲಿ ಚೀನಾ ನಿರ್ಮಿತ ಹೊಸ ವಿಮಾನ ನಿಲ್ದಾಣ ಶುರುವಾದ ಮೇಲೆ ಇಲ್ಲಿಂದಲೇ ಎಲ್ಲ ವಿಮಾನಗಳು ಕಾರ್ಯಾರಂಭ ಮಾಡಲಿವೆ.

    “ವೈ” ಆಕಾರದಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಹೊಸ ವಿಮಾನ ನಿಲ್ದಾಣದಲ್ಲಿ 15 ಪ್ರಯಾಣಿಕರ ಬೋರ್ಡಿಂಗ್ ಪಾರ್ಕ್‌, ಪ್ರಯಾಣಿಕ-ಸ್ನೇಹಿ ಟರ್ಮಿನಲ್, ಎರಡು ರನ್‌ವೇ, ಮೂರು ಟ್ಯಾಕ್ಸಿವೇಗಳು ಸೇರಿವೆ.

    ಸಾರ್ವಜನಿಕ ಗಣೇಶೋತ್ಸವಕ್ಕೆ ಸಿಕ್ಕಿತು ಗ್ರೀನ್‌ ಸಿಗ್ನಲ್‌: ಷರತ್ತಲ್ಲಿ ಏನೇನಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts