More

    ವೈಎಸ್‌ಆರ್‌ಸಿಗೆ ಒಲಿಯುತಿರುವ ತಿರುಪತಿ ತಿರುಮಲ: ಕರ್ನಾಟಕದ ಮಾಜಿ ಮುಖ್ಯಕಾರ್ಯದರ್ಶಿ ರತ್ನಪ್ರಭಾಗೆ ಹಿನ್ನಡೆ…

    ತಿರುಪತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದ ತಿರುಪತಿಯ ಚುನಾವಣೆಯ ಈವರೆಗಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ, ಕರ್ನಾಟಕ ಮಾಜಿ ಮುಖ್ಯಕಾರ್ಯದರ್ಶಿಯೂ ಆಗಿರುವ ಕೆ.ರತ್ನ ಪ್ರಭಾ ಅವರು ಭಾರಿ ಹಿನ್ನಡೆಯಲ್ಲಿದ್ದಾರೆ.

    ವೈಎಸ್‌ಆರ್‌ಸಿ (ಯುವಜನ ಶ್ರಮಿಕ ರಿತು ಕಾಂಗ್ರೆಸ್‌) ಪಕ್ಷ 1,48,172 ಮತಗಳೊಂದಿಗೆ 61,482 ಮತಗಳ ಮುನ್ನಡೆ ಸಾಧಿಸಿದ್ದರೆ, ಟಿಡಿಪಿ 86,689 ಮತಗಳನ್ನು ಪಡೆದುಕೊಂಡಿದೆ. ಆದರೆ ಬಿಜೆಪಿ 13,026 ಮತಗಳನ್ನು ಪಡೆದಿದೆ.

    ವೈಎಸ್‌ಆರ್‌ಸಿ ಅಭ್ಯರ್ಥಿ ಎಂ ಗುರುಮೂರ್ತಿ ಮತ್ತು ಟಿಡಿಪಿ ಅಭ್ಯರ್ಥಿ ಪನಬಕ ಲಕ್ಷ್ಮಿ ಅವರನ್ನು ಚುನಾವಣೆಯಲ್ಲಿ ಪ್ರಮುಖ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ. ಕೆ ರತ್ನ ಪ್ರಭಾ ಸೇರಿದಂತೆ ಕಾಂಗ್ರೆಸ್‌ನ ಚಿಂತಾ ಮೋಹನ್, ಸಿಪಿಎಂ ಅಭ್ಯರ್ಥಿ ನೆಲ್ಲೂರು ಯಾದಗಿರಿ ಕೂಡ ಕಣದಲ್ಲಿದ್ದಾರೆ.

    ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಈ ಕ್ಷೇತ್ರದ ಏಳು ಅಸೆಂಬ್ಲಿ ವಿಭಾಗಗಳಲ್ಲಿ, ಚಿತ್ತೂರು ಜಿಲ್ಲೆಯಲ್ಲಿ ಬರುವ ಮೂರು ವಿಭಾಗಗಳಲ್ಲಿನ ಮತಗಳನ್ನು ತಿರುಪತಿಯಲ್ಲಿ ಎಣಿಸಲಾಗುತ್ತಿದ್ದು, ಉಳಿದ ನಾಲ್ಕು ವಿಭಾಗಗಳ ಮತಗಳನ್ನು ನೆಲ್ಲೂರಿನಲ್ಲಿ ಎಣಿಸಲಾಗುತ್ತಿದೆ.

    ತಮಿಳುನಾಡಿನ ಅರವಕುರಿಚಿ ಕ್ಷೇತ್ರದಲ್ಲಿ ಕ್ಷಣಕ್ಷಣಕ್ಕೂ ಕುತೂಹಲ: ಅಣ್ಣಾಮಲೈ- ಎಲಂಗೋ ನಡುವೆ ಬಿಗ್‌ ಫೈಟ್‌

    ತಮಿಳುನಾಡಲ್ಲಿ ಸೂರ್ಯೋದಯ? ಸಿಎಂ ಖುರ್ಚಿಯತ್ತ ಸ್ಟಾಲಿನ್‌- ಮ್ಯಾಜಿಕ್‌ ನಂಬರ್‌ ದಾಟಿದ ಡಿಎಂಕೆ

    ಕೇರಳದ ಸಿಎಂ ಮೊಗದಲ್ಲಿ ಭಾರಿ ಹರ್ಷ: ಎಲ್‌ಡಿಎಫ್‌ ಮೈತ್ರಿಕೂಟ 78 ಕ್ಷೇತ್ರಗಳಲ್ಲಿ ದಾ‍ಪುಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts