ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಐದು ದಿನಗಳಿಂದ ಆ ಸಿಡಿಯಲ್ಲಿರುವ ಯುವತಿಯ ವಿಚಾರಣೆಯನ್ನು ತನಿಖಾಧಿಕಾರಿಗಳು ನಡೆಸುತ್ತಿದ್ದಾರೆ. ಇದಾಗಲೇ ವಿಚಾರಣೆಗೆ ಹಾಜರು ಆಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಾಲ್ಕು ಬಾರಿ ನೋಟಿಸ್ ನೀಡಲಾಗಿತ್ತು. ಇಂದು ಐದನೇ ಬಾರಿ ನೋಟಿಸ್ ನೀಡಲಾಗಿದೆ.
ಆದರೆ ಇಂದು ಕೂಡ ಸಾಹುಕಾರ್ ಗೈರಾಗಿದ್ದಾರೆ. ಮಾರ್ಚ್ 29ಕ್ಕೆ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಜಾರಕಿಹೊಳಿ ಎಲ್ಲಿದ್ದಾರೆ ಎಂದು ಸದ್ಯ ಅವರ ಆಪ್ತರಿಗಷ್ಟೇ ತಿಳಿದಿದೆ. ಐದಾರು ದಿನಗಳಿಂದ ಅವರು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.
ಎಸ್.ಐ.ಟಿ ವಿಚಾರಣೆಗೂ ಬಾರದೆ, ವಕೀಲರ ಮೂಲಕ ಕಾಲಾವಕಾಶ ಕೇಳಿರುವ ಜಾರಕಿಹೊಳಿ ನೀಡಿರುವ ಕಾರಣ ತಮಗೆ ಅನಾರೋಗ್ಯವಾಗಿದೆ ಎಂದು. ಸಿಡಿ ಲೇಡಿಯನ್ನು ಎದುರಿಸಲು ಆಗದೇ ನಿಜವಾಗಿಯೂ ಮಾಜಿ ಸಚಿವರಿಗೆ ಹುಷಾರು ತಪ್ಪಿತಾ ಎಂದು ಜನರು ಆಡಿಕೊಳ್ಳುವಂತಾಗಿದೆ.
ಅಜ್ಞಾತ ಸ್ಥಳದಲ್ಲೇ ಕೂತು ಬೆಳವಣಿಗೆ ಗಮನಿಸುತ್ತಿರುವ ರಮೇಶ್ ಜಾರಕಿಹೊಳಿ ಯುವತಿಯ ಎಲ್ಲಾ ಹೇಳಿಕೆಗಳನ್ನು ಗಮನಿಸುತ್ತಿರುವಂತೆ ಕಾಣಿಸುತ್ತಿದೆ. ಆಕೆಯ ಎಲ್ಲಾ ಹೇಳಿಕೆ ಮುಗಿದ ಬಳಿಕ ಕಾಣಿಸಿಕೊಳ್ಳುವ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಇಂದು ಆಡುಗೋಡಿ ಟೆಕ್ನಿಕಲ್ ಸೆಲ್ಗೆ ಯುವತಿ ಹಾಜರಾಗಿದ್ದು ವಿಚಾರಣೆ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಅವರಿಗೂ ನೋಟಿಸ್ ನೀಡಲಾಗಿತ್ತು. ಆದರೆ ಅವರು ಬರಲಿಲ್ಲ.
ಈ ನಡುವೆ ಅತ್ಯಾಚಾರ ಕೇಸ್ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿಕೊಂಡಿರುವ ಎಸ್ಐಟಿ ತಂಡ, ಎಲ್ಲ ದಾಖಲೆಗಳನ್ನು ಕಲೆಹಾಕಿಕೊಂಡು ರಮೇಶ್ ಜಾರಕಿಹೊಳಿಯ ವಿಚಾರಣೆ ನಡೆಸಲು ತಯಾರಿ ನಡೆಸಿದೆ.
‘ಆ ದಿನ’ ಮೂರ್ನಾಲ್ಕು ಆ್ಯಂಗಲ್ಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಆಗಿದ್ಯಲ್ಲಾ? ಯಾರು ಮಾಡಿದ್ರು?
VIDEO: ಮಾಸ್ಕ್ ಇಲ್ಲ… ಅಂತರವೂ ಇಲ್ಲ… ಎಸಿ ರೂಂನಲ್ಲಿ 500 ಮಂದಿ! ಸಾಮಾನ್ಯರಿಗೆ ಮಾತ್ರ ರೂಲ್ಸಾ?
ನನಗೂ ಮದುವೆಯಾಗುವ ಆಸೆ… ಆದರೆ ನನ್ನ ಈ ಸಮಸ್ಯೆ… ಡಿಪ್ರೆಷನ್ಗೆ ಹೋಗ್ತಿರೋ ನನಗೆ ದಾರಿ ತೋರಿ…