More

    ಕಾರಿನಲ್ಲಿ ಹೋಗುವಾಗ ಹೆಲ್ಮೆಟ್‌ ಹಾಕಲಿಲ್ಲವೆಂದು ವಕೀಲನಿಗೆ ಬಿತ್ತು ಒಂದು ಸಾವಿರ ರೂ. ದಂಡ!

    ಪಟ್ನಾ (ಬಿಹಾರ): ಬೈಕ್​ ಮೇಲೆ ಹೋಗುವಾಗ ಸವಾರರಿರಲಿ, ಹಿಂಬದಿ ಪ್ರಯಾಣಿಕರೇ ಇರಲಿ, ಹೆಲ್ಮೆಟ್‌ ಕಡ್ಡಾಯ. ಅದೇ ರೀತಿ ಕಾರಿನಲ್ಲಿ ಹೋಗುವಾಗ ಸೀಟ್‌ ಬೆಲ್ಟ್‌ ಕಡ್ಡಾಯ. ಇಲ್ಲದಿದ್ದರೆ ದಂಡ ಬೀಳುತ್ತೆ. ಹಾಗಿದ್ದರೆ ಕಾರಿನಲ್ಲಿ ಹೋಗುವಾಗ ಹೆಲ್ಮೆಟ್‌ ಹಾಕ್ತೀರಾ? ಇದೇನು ಪ್ರಶ್ನೆ ಎಂದು ಕೇಳ್ತೀರಾ?

    ಇಲ್ಲೊಂದು ಪ್ರಕರಣದಲ್ಲಿ ವಕೀಲನೊಬ್ಬ ಕಾರಿನಲ್ಲಿ ಹೋಗುವಾಗ ಹೆಲ್ಮೆಟ್‌ ಹಾಕಿಲ್ಲ ಎನ್ನುವ ಕಾರಣಕ್ಕೆ ಟ್ರಾಫಿಕ್‌ ಪೊಲಿಸ್‌ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾನೆ. ಅಂದಹಾಗೆ ಇದು ಬೇರೆ ಯಾವುದೋ ದೇಶದಲ್ಲಿ ನಡೆದಿರುವುದು ಅಲ್ಲ, ಬಿಹಾರದ ಪಟ್ನಾದಲ್ಲಿನ ಕಂಕರ್‌ಬಾಗ್‌ನ ಟ್ರಾಫಿಕ್ ಚೆಕ್ ಪೋಸ್ಟ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

    ಕಾರಿನಲ್ಲಿ ಹೋಗುತ್ತಿದ್ದ ವಕೀಲನನ್ನು ತಡೆದು ನಿಲ್ಲಿಸಿದ ಪೊಲೀಸ್‌ ಹೆಲ್ಮೆಟ್ ಹಾಕಿಲ್ಲವೆಂದು ಸಾವಿರ ರೂ.ದಂಡ ಹಾಕಿದ್ದಾರೆ. ಪಟ್ನಾ ಹೈಕೋರ್ಟ್​ನ ವಕೀಲ ಪ್ರಕಾಶ್​ ಚಂದ್ರ ಅಗರವಾಲ್​​ ಅವರಿಗೆ ದಂಡ ಹಾಕಲಾಗಿದೆ. 1,000 ರೂಪಾಯಿ ದಂಡ ಕಟ್ಟುವಂತೆ ರಶೀದಿ ನೀಡುತ್ತಿದ್ದಂತೆಯೇ ವಕೀಲರು ರೇಗಿ ಹೋಗಿದ್ದಾರೆ.

    ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ನಂತರ ಹೇಗೋ ತಡೆದು ನಿಲ್ಲಿಸಲಾಗಿದೆಯಲ್ಲ, ಏನಾದರೂ ಮಾಡಬೇಕು ಎನ್ನುವ ಕಾರಣಕ್ಕೆ ಪೊಲೀಸ್‌ ಕಾರಿನ ಎಲ್ಲ ದಾಖಲೆ ತಪಾಸಣೆ ನಡೆಸಿದ್ದಾನೆ. ಎಲ್ಲವೂ ಸರಿಯಾಗಿದೆ. ನಂತರ ವಕೀಲರು ಸಿಟ್ಟಿಗೆದ್ದು ಗದರಿದಾಗ ಟ್ರಾಫಿಕ್‌ ಪೊಲೀಸ್‌ಗೆ ಇವರು ವಕೀಲರು ಎಂದು ತಿಳಿದು ಹೆದರಿ 1000 ರೂಪಾಯಿ ಚಲನ್​​​ ಕ್ಯಾನ್ಸಲ್​ ಮಾಡಿದ್ದಾನೆ.

    ಆದರೆ ಇಲ್ಲಿಗೆ ಸುಮ್ಮನಾಗದ ವಕೀಲರು, ಸಂಚಾರಿ ವಿಭಾಗದ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ತಪ್ಪಿತಸ್ಥ ಪೊಲೀಸ್‌ ಟ್ರಾಫಿಕ್‌ ಇನ್ಸ್‌ಪೆಕ್ಟರ್‌ ವಿರುದ್ಧ ತನಿಖೆ ನಡೆಸಲಾಗುವುದು ಎಂದಿದ್ದಾರೆ.

    ರೋಹಿಣಿ ಸಿಂಧೂರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ: ಅಮಾನತಿಗೆ ಕೋರಿ ಕೇಸ್‌ ದಾಖಲು

    ಏಳು ಮಕ್ಕಳ ತಂದೆಯ ಪ್ರೀತಿಗೆ ಸಿಲುಕಿದ 19ರ ಯುವತಿ! ಗಂಡ ಬೇಡ ಇವನೇ ಬೇಕು ಎಂದು ಪಟ್ಟು ಹಿಡಿದು ಕೋರ್ಟ್‌ ಮೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts