More

    ಬೇಕಾಬಿಟ್ಟೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ಯೋಧ! ಒಟ್ಟೂ ಐವರ ಸಾವು

    ಅಮೃತಸರ: ಪಂಜಾಬ್​ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಸೈನಿಕನೋರ್ವ ತನ್ನ ಕರ್ತವ್ಯದ ಗನ್​ನಿಂದ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆನಂತರ ತನ್ನ ಮೇಲೂ ಗುಂಡು ಹಾರಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಎಲ್ಲರೂ ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಬಿಎಸ್ಎಫ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬಿಎಸ್​​ಎಫ್ ಮೂಲಗಳ ಪ್ರಕಾರ 144ನೇ ಬೆಟಾಲಿಯನ್​ನ ‘ಬಿ’ಕಾಯ್, ಕಾನ್​ಸ್ಟೇಬಲ್ ಆಗಿದ್ದ ಸೆಟ್ಟೆಪ್ಪ ಎಸ್.​ಕೆ, ಸಹೋದ್ಯೋಗಿಗಳು ಹಾಗೂ ಒಆರ್​ಎಸ್​ ಬ್ಯಾರಕ್​ನಲ್ಲಿದ್ದವರ ಮೇಲೆ ಮೊದಲಿಗೆ ಗುಂಡು ಹಾರಿಸಲು ಆರಂಭಿಸಿದ್ದಾರೆ. 44 ಬೆಟಾಲಿಯನ್‌ನ ಕಮಾಂಡೆಂಟ್ ಆಗಿದ್ದ ಸತೀಶ್ ಮಿಶ್ರಾ ಅವರ ವಾಹನದ ಮೇಲೂ ಅವರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಮುಂಭಾಗದ ಉದ್ದಕ್ಕೂ ಅಟ್ಟಾರಿ-ವಾಘಾ ಗಡಿ ದಾಟುವಿಕೆಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಖಾಸಾ ಪ್ರದೇಶದ ಫೋರ್ಸ್ ಮೆಸ್‌ನಲ್ಲಿ ಈ ಘಟನೆ ನಡೆದಿದೆ.

    ಗುಂಡು ಹಾರಿಸಿರುವ ಸೆಟ್ಟೆಪ್ಪ ಅವರು ಕರ್ನಾಟಕ ಮೂಲದವರು ಎನ್ನಲಾಗಿದೆ. ಮೃತಪಟ್ಟವರು ಬಿಹಾರದ ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಮ್ ಬಿನೋದ್, ಮಹಾರಾಷ್ಟ್ರದ ಡಿಎಸ್ ತೊರಸ್ಕರ್, ಜಮ್ಮು ಮತ್ತು ಕಾಶ್ಮೀರದ ರತ್ತನ್ ಸಿಂಗ್ ಮತ್ತು ಹರಿಯಾಣದ ಪಾಣಿಪತ್‌ನ ಬಲ್ಜಿಂದರ್ ಕುಮಾರ್.

    ಗುಂಡು ಹಾರಿಸಿದ ಜವಾನ ತನ್ನ ಕರ್ತವ್ಯದ ಸಮಯದ ವೇಳಾಪಟ್ಟಿಯ ಕುರಿತು ಅಸಮಾಧಾನ ಹೊಂದಿದ್ದ. ಇದೇ ಕಾರಣ ಈ ಗುಂಡಿನ ದಾಳಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ತನಿಖೆಯ ಬಳಿಕ ಸತ್ಯಾಂಶ ಹೊರಬರಬೇಕಿದೆ.

    ಯುದ್ಧದ ನಡುವೆಯೇ ಭಾರತೀಯನ ಹೃದಯ ಕದ್ದ ರಷಿಯನ್‌ ಬೆಡಗಿ… ಫೋಟೋ ಕ್ಲಿಕ್ಕಿಸುತ್ತಲೇ ಶುರುವಾಯ್ತು ಲವ್‌…

    ‘ವಾರದಲ್ಲೇ ನೀನು ಫಿನಿಷ್‌, ನಿನ್ನ ತಾಯಿ ಪತಿವ್ರತೆ ಆಗಿದ್ರೆ ತಪ್ಪಿಸು ನೋಡುವ…’ ವಿದ್ಯಾರ್ಥಿಗೆ ವಿದೇಶಗಳಿಂದ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts