More

    ಭೀಕರ ಆತ್ಮಹತ್ಯಾ ದಾಳಿ: ಚುನಾವಣೆ ಬೆನ್ನಲ್ಲೇ ಘನಘೋರ ಕೃತ್ಯ- ಕನಿಷ್ಠ 30 ಮಂದಿ ಬಲಿ

    ಬಗ್ದಾದ್‌: ಇರಾಕ್‌ ರಾಜಧಾನಿ ಬಗ್ದಾದ್‌‌ನ ಕೇಂದ್ರ ಭಾಗದಲ್ಲಿ ನಿನ್ನೆ ನಡುವೆ ಎರಡು ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಲಾಗಿದೆ. ಈ ದಾಳಿಗೆ ಕನಿಷ್ಠ 30 ಮಂದಿ ಬಲಿಯಾಗಿದ್ದು, 100ಕ್ಕೂ ಅಧಿಕ ಮಂದಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ.

    ಮೂರು ವರ್ಷಗಳ ಅವಧಿಯಲ್ಲಿ ನಡೆದ ಅತ್ಯಂತ ಭೀಕರ ಬಾಂಬ್‌ ದಾಳಿ ಇದಾಗಿದೆ. ಶೀಘ್ರದಲ್ಲಿಯೇ ಚುನಾವಣೆಗಳು ನಡೆಯಲಿರುವಂತೆಯೇ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್‌ನಲ್ಲಿ ಅವಧಿ ಪೂರ್ವ ಚುನಾವಣೆ ನಡೆಸಲು ಇರಾಕ್ ಸರ್ಕಾರ ತೀರ್ಮಾನಿಸಿದೆ. ಈ ತೀರ್ಮಾನ ಕೈಗೊಂಡ ಮೂರು ದಿನಗಳ ಬಳಿಕ ಈ ದಾಳಿ ನಡೆದಿರುವುದು ಹಲವಾರು ಅನುಮಾನಗಳಿಗೆ ಕಾರಣ ಮಾಡಿಕೊಟ್ಟಿದೆ.

    ಸರ್ಕಾರಿ ವಿರೋಧಿ ಪ್ರತಿಭಟನೆಕಾರರ ಬೇಡಿಕೆಗಳನ್ನು ಈಡೇರಿಸಲು ಜುಲೈನಲ್ಲಿ ಅವಧಿಪೂರ್ವ ಚುನಾವಣೆಗಳನ್ನು ನಡೆಸುವುದಾಗಿ ಇರಾಕ್ ಪ್ರಧಾನಿ ಮುಸ್ತಫಾ ಅಲ್ ಖಾದಿಮಿ ಸೋಮವಾರ ಘೋಷಿಸಿದ್ದರು.

    ಭೀಕರ ಆತ್ಮಹತ್ಯಾ ದಾಳಿ: ಚುನಾವಣೆ ಬೆನ್ನಲ್ಲೇ ಘನಘೋರ ಕೃತ್ಯ- ಕನಿಷ್ಠ 30 ಮಂದಿ ಬಲಿ

    ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಈ ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಗುಂಪು ವಹಿಸಿಕೊಂಡಿಲ್ಲ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಇರಾಕ್‌ನಲ್ಲಿ ಐಸಿಸ್ ಹಾಗೂ ಉಗ್ರಗಾಮಿ ಗುಂಪುಗಳು ತಮ್ಮ ದಾಳಿಗಳನ್ನು ತೀವ್ರಗೊಳಿಸಿರುವ ಕಾರಣ ಈ ಕೃತ್ಯ ಕೂಡ ಇದರದ್ದೇ ಇರಬೇಕು ಎಂದು ಸೇನಾ ವಕ್ತಾರ ಯಹ್ಯಾ ರಸೂಲ್ ತಿಳಿಸಿದ್ದಾರೆ.

    ತಯರಾನ್‌ ಸ್ಕ್ವೇರ್‌ನ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸಿದ ಬಾಂಬ್‌ ಧರಿಸಿದ್ದ ವ್ಯಕ್ತಿ ಜನರ ಮಧ್ಯಕ್ಕೆ ನುಗ್ಗಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಕೇಂದ್ರ ಬಗ್ದಾದ್‌ನಲ್ಲಿರುವ ಬಾಬ್ ಅಲ್-ಶರ್ಖಿ ವಾಣಿಜ್ಯ ಪ್ರದೇಶದಲ್ಲಿ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

    ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ರಾಜಧಾನಿಯ ಎಲ್ಲಾ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆಯೆಂದು ಇರಾಕ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

    ಬಗ್ದಾದ್‌ನ ಅತ್ಯಂತ ಜನನಿಬಿಡ ಮಾರುಕಟ್ಟೆಯಾದ ಅಲ್‌ಶರ್ಖಿಯಲ್ಲಿ 2018ರಲ್ಲಿಯೂ ಆತ್ಮಹತ್ಯಾ ದಾಳಿ ನಡೆದಿತ್ತು. ಇಡೀ ಮಾರುಕಟ್ಟೆಯ ನೆಲದಲ್ಲಿ ರಕ್ತದ ಕೋಡಿ ಹರಿದಿತ್ತು.

    ಜನರ ಜೀವನದ ಜತೆ ಚೆಲ್ಲಾಟವಾಗಿ ಕ್ಷಿಪಣಿ ಸಕ್ಸಸ್​ ಎಂದು ಬೀಗಿದ ಪಾಕಿಸ್ತಾನ!

    ಕೇಂದ್ರದಲ್ಲಿ ಬಿಜೆಪಿ ಬಂದರೆ ಮೂರೂವರೆ ಸಾವಿರ ಮಸೀದಿ ನೆಲಸಮ ಎಂದ ಸಂಸದ ಮೌಲಾನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts