More

    VIDEO: ಅಂಗಲಾಚಿದ್ರೂ ಬೈಕ್‌ ಕೊಡಲಿಲ್ಲ, ಓಡಿ ಹೋದ್ರು ಕರುಣೆ ತೋರಲಿಲ್ಲ… ಟೋಯಿಂಗ್ ವಾಹನ ಸೇವೆ ಅಮಾನತು

    ಬೆಂಗಳೂರು: ಆ್ಯಪ್ ಆಧಾರಿತ ಆಹಾರ ಪೂರೈಕೆ ಮಾಡುವ ಡೆಲಿವರಿ ಬಾಯ್, ಬೈಕ್ ಬಿಡಿಸಿಕೊಳ್ಳಲು ಸಂಚಾರ ಪೊಲೀಸರ ಟೋಯಿಂಗ್ ವಾಹನದ ಹಿಂದೆ ಓಡುವ ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ. ಬಿ.ಆರ್. ರವಿಕಾಂತೇಗೌಡ, ಟೋಯಿಂಗ್ ವಾಹನ ಸೇವೆಯನ್ನು ಅಮಾನತುಗೊಳಿಸಿದ್ದಾರೆ. ಜತೆಗೆ ಟೋಯಿಂಗ್ ಸೇವೆಯಿಂದ ಎಎಸ್‌ಐಯನ್ನು ಹಿಂಪಡೆದು ಬೇರೆ ಜವಾಬ್ದಾರಿ ನೀಡಿದ್ದಾರೆ.

    ಬೆಂಗಳೂರಿನ ಜೀವನ್‌ಬೀಮಾನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಡೆಲಿವರಿ ಬಾಯ್ ರಸ್ತೆಬದಿ ಬೈಕ್ ನಿಲ್ಲಿಸಿ ಮನೆಯೊಂದಕ್ಕೆ ಪಾರ್ಸೆಲ್ ನೀಡಲು ಹೋಗಿದ್ದಾನೆ. ಇಲ್ಲಿಗೆ ಬಂದ ಟೋಯಿಂಗ್ ವಾಹನ ಸಿಬ್ಬಂದಿ ಮತ್ತು ಸಂಚಾರ ಪೊಲೀಸ್, ಬೈಕ್ ಜಪ್ತಿಗೆ ಮುಂದಾಗಿದ್ದಾರೆ. ಈ ವೇಳೆ ಯುವಕ ಓಡಿ ಬಂದಿದ್ದಾನೆ. ಅಷ್ಟೊತ್ತಿಗೆ ಟೋಯಿಂಗ್ ಸಿಬ್ಬಂದಿ ತನ್ನ ಬೈಕ್‌ನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ಟೋಯಿಂಗ್ ವಾಹನದ ಹಿಂದೆ ಓಡಿದ್ದಾನೆ.

    ಬೈಕ್ ಬಿಟ್ಟು ಕೊಟ್ಟು ಬಿಡಿ ಎಂದು ಓಡುತ್ತಲ್ಲೇ ಅಂಗಲಾಚಿದ್ದಾನೆ. ಆದರೂ ಟೋಯಿಂಗ್ ಸಿಬ್ಬಂದಿ ವಾಹನ ನಿಲ್ಲಿಸದೆ ಮುಂದೆ ಸಾಗಿದ್ದಾರೆ. ಟೋಯಿಂಗ್ ಸಿಬ್ಬಂದಿ ಬಳಿ ಅಂಗಲಾಚುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು, ಸಂಚಾರ ಪೊಲೀಸರು ಮತ್ತು ಟೋಯಿಂಗ್ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. ನೋ ಪಾರ್ಕಿಂಗ್‌ನಲ್ಲಿ ವಾಹನ ತೆರವು ಮೊದಲು ಮೈಕ್‌ನಲ್ಲಿ ಅನೌನ್ಸ್ ಮಾಡಬೇಕು. ಆಗಲೂ ವಾರಸುದಾರರು ಬಾರದಿದ್ದಲ್ಲಿ ಮಾತ್ರ ಟೋಯಿಂಗ್ ಮಾಡಬೇಕು.

    ಸಂಚಾರ ಪೊಲೀಸರು, ಟೋಯಿಂಗ್ ಸಿಬ್ಬಂದಿ ನಿಯಮ ಪಾಲಿಸುತ್ತಿಲ್ಲ. ವಾಹನ ಟೋಯಿಂಗ್ ಮಾಡಿ ವಾರಸುದಾರರ ಬಳಿ ಸುಲಿಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಂತರಿಕ ತನಿಖೆಗೆ ಸೂಚನೆ
    ಟೋಯಿಂಗ್ ವಾಹನದ ಹಿಂದೆ ಯುವಕ, ಓಡುವ ವಿಡಿಯೋ ಪ್ರಕರಣದ ಸಂಬಂಧ ಆಂತರಿಕ ತನಿಖೆಗೆ ರವಿಕಾಂತೇಗೌಡ ಆದೇಶಿಸಿದ್ದಾರೆ. ವಿಚಾರಣೆ ಮುಕ್ತಾಯದವರೆಗೂ ಟೋಯಿಂಗ್ ವಾಹನ ಸೇವೆ ಅಮಾನತಿನಲ್ಲಿ ಇರಿಸಿದ್ದಾರೆ. ಜತೆಗೆ ಟೋಯಿಂಗ್ ಸೇವೆಯಿಂದ ಎಎಸ್‌ಐಯನ್ನು ಪಡೆದಿದ್ದಾರೆ.

    ನಿಗೂಢವಾಗಿಯೇ ಉಳಿದ ಬಿಎಸ್‌ವೈ ಮೊಮ್ಮಗಳ ಆತ್ಮಹತ್ಯೆ ಕೇಸ್‌: ಪತಿ, ಮಾವ, ಕೆಲಸದವಳು ಹೇಳಿದ್ದೇನು?

    ಜಾಲತಾಣದಲ್ಲಿ ರಂಗೇರಿದ ‘ಆಂಟಿ’ ವಿವಾದ! 15 ವರ್ಷ ದೊಡ್ಡವಳನ್ನು ಇನ್ನೇನು ಹೇಳ್ಬೇಕು ಎಂದು ಪ್ರಶ್ನಿಸಿದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts