More

    ತಾಳಿ ಕಟ್ಟುವ ಮೊದಲು ಬಾಲಕಿಗೆ ಜೀವದಾನ- ಮದುಮಗನಿಂದ ನಡೆಯಿತು ಒಂದು ಅಪೂರ್ವ ಕಾರ್ಯ

    ಲಖನೌ: ರಕ್ತದಾನ ಶ್ರೇಷ್ಠದಾನ ಎನ್ನುವ ಮಾತಿದೆ. ಅಪಘಾತದಲ್ಲಿ ಗಾಯಾಳುವಾಗಿ ಅಥವಾ ಇನ್ನಾವುದೋ ಸಂದರ್ಭಗಳಲ್ಲಿ ಸೂಕ್ತ ಸಮಯದಲ್ಲಿ ರಕ್ತ ಸಿಗದೇ ಎಷ್ಟೋ ಮಂದಿ ಮೃತಪಡುವುದು ಇದೆ. ರಕ್ತದಾನದ ಬಗ್ಗೆ ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಹಲವರಿಗೆ ರಕ್ತ ನೀಡಿದರೆ ತಮ್ಮ ಜೀವಕ್ಕೆ ಅಪಾಯ ಆಗಬಹುದು ಎಂದು ತಪ್ಪು ಕಲ್ಪನೆ ಇದೆ.

    ಆದರೆ ಇಲ್ಲೊಬ್ಬ ಮದುಮಗ ಮದುವೆಯ ದಿನವೇ ಬಾಲಕಿಯೊಬ್ಬಳ ಜೀವ ಉಳಿಸಿ ನಂತರ ಮಂಟಪಕ್ಕೆ ಬಂದು ಮದುವೆ ಕಾರ್ಯ ಮುಗಿಸಿದ್ದಾನೆ. ಇದೀಗ ಈ ಮದುಮಗನಿಗೆ ಸಹಸ್ರಾರು ಮಂದಿಯ ಆಶೀರ್ವಾದ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇಂಥದ್ದೊಂದು ವಿಶೇಷ ಕಾರ್ಯ ಮಾಡಿದವ ಮದುಮಗ ಆಶೀಶ್​ ಕುಮಾರ್​ ಮಿಶ್ರಾ. ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶೀಶ್​ ಅವರ ವಿವಾಹ ನಿನ್ನೆ ಇತ್ತು. ಮದುಮಗನ ಡ್ರೆಸ್​ ಮಾಡಿಕೊಂಡು ಇನ್ನೇನು ಮಂಟಪಕ್ಕೆ ಹೋಗಬೇಕು ಎನ್ನುವಷ್ಟದಲ್ಲಿ ಒಬ್ಬ ಬಾಲಕಿಗೆ ರಕ್ತದಾನದ ಅವಶ್ಯಕತೆ ಇರುವುದು ತಿಳಿಯಿತು. ಆದರೆ ಆಕೆಗೆ ರಕ್ತ ಕೊಡಲು ಯಾರೊಬ್ಬರೂ ಮುಂದೆ ಬಂದಿರಲಿಲ್ಲ.

    ಈ ಹಿನ್ನೆಲೆಯಲ್ಲಿ, ಮಂಟಪಕ್ಕೆ ಹೋಗುವ ಮೊದಲು ಆಶೀಶ್​ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿ ಬಾಲಕಿಯ ಜೀವ ಉಳಿಸಿ ನಂತರ ಮದುವೆಯಾಗಿದ್ದಾನೆ. ಮದುಮಗಳು ಕೂಡ ತನ್ನ ಭಾವಿ ಪತಿಯನ್ನು ನೋಡಲು ಆಸ್ಪತ್ರೆಗೆ ಧಾವಿಸಿದ್ದಾಳೆ. ನಂತರ ಈ ವಿಷಯವನ್ನು ಆಶೀಶ್ ತಮ್ಮ  ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಪೊಲೀಸ್​ ಇಲಾಖೆ ಕೂಡ ಆಶೀಶ್​ ಕಾರ್ಯವನ್ನು ಶ್ಲಾಘಿಸಿ ಟ್ವೀಟ್​ ಮಾಡಿದೆ.

    ಇದು ಸಕತ್​ ವೈರಲ್ ಆಗಿದ್ದು, ಅನೇಕ ಮಂದಿ ಮೆಚ್ಚುಗೆ ಸೂಸಿದ್ದಾರೆ. ಎಷ್ಟೇ ತುರ್ತು ಕಾರ್ಯವಿದ್ದರೂ, ರಕ್ತದಾನ ಮಾಡಿ ಜೀವ ಉಳಿಸಿ ಎಂದು ಪೊಲೀಸ್​ ಇಲಾಖೆ ಇದೆ ವೇಳೆ ಕೇಳಿಕೊಂಡಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    VIDEO: ವಿಮಾನಕ್ಕೆ ಬಿತ್ತು ಬೆಂಕಿ: ಇನ್ನೇನು 241 ಪ್ರಯಾಣಿಕರ ಸಾವು ಸನಿಹದಲ್ಲಿತ್ತು- ನಡೆಯಿತು ಪವಾಡ

    ಅಂತ್ಯಸಂಸ್ಕಾರಕ್ಕೆ ಪುತ್ರನೇ ಬೇಕೆ? ಅಪ್ಪನ ಶವ ಹೆಗಲಮೇಲೆ ಹೊತ್ತರು- ಚಿತೆಗೆ ಕೊಳ್ಳಿ ಇಟ್ಟ ಪುತ್ರಿಯರು

    ಉದ್ಯೋಗ- ಮದುವೆಯ ನಡುವೆ ಮನಸ್ಸು ಗೊಂದಲದ ಗೂಡಾಗಿದೆ- ಪ್ಲೀಸ್‌ ಪರಿಹಾರ ಹೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts