More

    ಬೆಚ್ಚಿಬಿದ್ದ ಸಾಗರ: ಗುಡ್ಡದ ಸುತ್ತ ಭಯಾನಕ ಸ್ಫೋಟ- ಧಗಧಗನೆ ಹೊತ್ತಿ ಉರಿದ ಮರಗಳು

    ಶಿವಮೊಗ್ಗ: ಕೆಲ ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರದ ಹುಣಸೋಡಿನಲ್ಲಿ ಸ್ಫೋಟ ಸಂಭವಿಸಿ ಭಾರಿ ಅನಾಹುತ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟ ಕೇಳಿಬಂದಿದೆ. ತಾಳಗುಪ್ಪದಲ್ಲಿನ ರಂಗಪ್ಪನ ಗುಡ್ಡದಲ್ಲಿ ಧಗಧಗ ಬೆಂಕಿ ಕಾಣಿಸಿಕೊಂಡು ಮರಗಳು ಹೊತ್ತಿ ಉರಿದಿವೆ.

    ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್ ನೀಡಲು ಕೆಪಿಟಿಸಿಎಲ್ ಹೈಟೆನ್ಷನ್ ಲೈನ್ ಈ ಮಾರ್ಗದಲ್ಲಿ ಹಾದುಹೋಗಿದೆ. ಸಮೀಪದಲ್ಲಿಯೇ ಬೃಹತ್ ಪ್ರಮಾಣದ ಅಕೇಶಿಯಾ ಮರಗಳು ಬೆಳೆದಿದ್ದು, ಈ ವೈರ್​ಗೆ ಮರ ತಾಗಿ ಭಾರಿ ಸ್ಫೋಟವಾಗಿದೆ ಎನ್ನಲಾಗಿದೆ.

    ಈ ಸ್ಫೋಟದ ನಂತರ ಸುತ್ತಲಿನ ಜನರು ಭಾರಿ ಭೀತಿಯಿಂದ ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈ ಹಿಂದೆ ಕೂಡ ಇದೇ ರೀತಿಯ ಅವಾಂತರಗಳು ಇಲ್ಲಿ ಸೃಷ್ಟಿಯಾಗಿದ್ದವು. ಸಾಗರ ತಾಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥ ಕಾಲನಿ ಸಮೀಪದ ಜನ ಭೀತಿಯಿಂದ ಇರುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕೂಡ ವಿದ್ಯುತ್‌ಗೆ ತಗುಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದ್ದರೂ ಕೆಪಿಟಿಸಿಎಲ್‌ನವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹೈಫೈ ಮೊಬೈಲ್‌ ಖರೀದಿಸಲು ಮದುವೆಯಾದ ಬಾಲಕ! ಪತ್ನಿಯನ್ನು ಮಾರಿ ಆಸೆ ಈಡೇರಿಸಿಕೊಂಡ!

    ತುಮಕೂರು ವಿವಿ, ಧಾರವಾಡದ ಕೃಷಿ ವಿವಿಯಲ್ಲಿ ಖಾಲಿ ಇವೆ ಉಪನ್ಯಾಸಕ, ಸಹಾಯಕರ ಹುದ್ದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts