More

    ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಕೇಂದ್ರದಿಂದ ರಾಜ್ಯಕ್ಕೆ ಮತ್ತಷ್ಟು ಔಷಧ: 1221 ಸೀಸೆ ಬಿಡುಗಡೆ

    ಬೆಂಗಳೂರು: ಕಪ್ಪು ಶಿಲೀಂಧ್ರ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಲಿಪೊಸೋಮಲ್ ಆಂಫೊಟೆರಿಸಿನ್- ಬಿ‌ ಇಂಜೆಕ್ಷನ್‌ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ನಿರಂತರತೆ ಕಾಯ್ದುಕೊಂಡಿದ್ದು, ರಾಜ್ಯಕ್ಕೆ ಮತ್ತೆ 1221 ಸೀಸೆ ( ವೈಯಲ್ಸ್) ಔಷಧಿಯನ್ನು ಹಂಚಿಕೆ ಮಾಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಮಾಹಿತಿ ನೀಡಿದ್ದಾರೆ.

    ದೇಶದಲ್ಲಿ 11,717. ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಕರ್ನಾಟಕದ 481 ಪ್ರಕರಣಗಳು ಸೇರಿವೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಒಟ್ಟು 29,250 ಸೀಸೆ‌ ಔಷಧಿ ಹಂಚಿಕೆಯಾಗಿದೆ.

    ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಆಧಾರದಲ್ಲಿ ಆಂಫೊಟೆರಿಸಿನ್- ಬಿ ಇಂಜೆಕ್ಷನ್ ಕೇಂದ್ರ ಸರ್ಕಾರ ಹಂಚಿಕೆ ಮಾಡುತ್ತಾ ಬಂದಿದ್ದು, ಅದರಂತೆ ಕರ್ನಾಟಕಕ್ಕೆ 1221 ವೈಯಲ್ಸ್ ನೀಡಿದೆ. ಆಮದು ಮತ್ತು ದೇಶೀಯ ಉತ್ಪಾದನೆಗೆ ಆದ್ಯತೆ ನೀಡಿರುವ ಕಾರಣ ಲಭ್ಯತೆ ಅನುಸಾರ ಪೂರೈಕೆ ಮುಂದುವರಿಯಲಿದೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

    ಕೋವಿಡ್ ನಿರ್ವಹಣೆಗೆ ‘ಆಕಾಂಕ್ಷಾ‘: ದೇಶದಲ್ಲಿಯೇ ಪ್ರಥಮ ಪೋರ್ಟಲ್‌ಗೆ ಸಿಎಂ ಚಾಲನೆ

    ಖಾಸಗಿ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸಲು ಸಿಎಂಗೆ ಸಚಿವ ಸುರೇಶ್ ಕುಮಾರ್‌ ಮನವಿ

    ಗೋಮಾತೆಯ ಅಪ್ಪುಗೆಯೇ ಚಿಕಿತ್ಸೆ: ತಾಸಿಗೆ 15 ಸಾವಿರ ರೂ. ಕೊಟ್ಟು ಹಸು ತಬ್ಬಿಕೊಳ್ಳುತ್ತಿರೋ ಅಮೆರಿಕನ್ನರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts