More

    ಶ್ರೀರಾಮನೇ ಇಲ್ಲ ಅಂದೋರು ಪೂಜೆಗೆ ಕರೆದಿಲ್ಲ ಅನ್ನೋದು ಸರಿನಾ?- ಬಿಜೆಪಿ ಟಾಂಗ್‌

    ನವದೆಹಲಿ: ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ದಿನಾಂಕ ಸಮೀಪಿಸುತ್ತಿದ್ದಂತೆಯೇ, ಈ ಸಂದರ್ಭದಲ್ಲಿ ತಮ್ಮನ್ನು ಕರೆದಿಲ್ಲ ಎಂಬುದಾಗಿ ಹಲವಾರು ಮಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಇದರ ಬೆನ್ನಲ್ಲೇ ಕಾಂಗ್ರೆಸ್‌ ಕೂಡ ಬಿಜೆಪಿ ತಮಗೆ ಕರೆದಿಲ್ಲ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದೆ. ರಾಮ ಮಂದಿರ ನಿರ್ಮಾಣ ಈ ಹಂತಕ್ಕೆ ತಲುಪಲು ಕಾಂಗ್ರೆಸ್ ಮುಖ್ಯ ಕಾರಣ. ಕಾಂಗ್ರೆಸ್‌ಗೂ ಆಮಂತ್ರ ನೀಡಬೇಕು. ಆದರೆ ಬಿಜೆಪಿ ತಾನೇ ಮಾಡಿದೆ ಎಂದು ಬೀಗುತ್ತಿದೆ. ಬಿಜೆಪಿ ನಡೆ ಸರಿಯಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು.

    ಇದನ್ನೂ ಓದಿ: ಆಗಸ್ಟ್​ 5ರಂದು ಅಯೋಧ್ಯೆ, ಜಮ್ಮು-ಕಾಶ್ಮಿರದಲ್ಲಿ ಉಗ್ರದಾಳಿಯ ಸಂಭವ; ಭದ್ರತೆ ಮತ್ತಷ್ಟು ಬಿಗಿ

    ಕಾಂಗ್ರೆಸ್‌ನ ಈ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಜಿಎಲ್‌ವಿ ನರಸಿಂಹ ರಾವ್, ‘ಅರೆ, ಇದ್ಯಾಕೆ ಈಗ ಈ ಆರೋಪ? ಶ್ರೀರಾಮಚಂದ್ರನ ಅಸ್ತಿತ್ವವೇ ಇಲ್ಲ ಎಂದಿದ್ದು ಇದೇ ಕಾಂಗ್ರೆಸ್‌ ಪಕ್ಷ ತಾನೆ? ಈಗೇಕೆ ಈ ಕ್ಯಾತೆ ಎಂದು ಪ್ರಶ್ನಿಸಿದ್ದಾರೆ.

    ’ಸುದೀರ್ಘ ಇತಿಹಾಸವುಳ್ಳ ಕಾಂಗ್ರೆಸ್‌ ಪಕ್ಷ ಎಷ್ಟೋ ದಶಕ ಅಧಿಕಾರದಲ್ಲಿದೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬೇಕಾದ ಯಾವ ಪ್ರಯತ್ನಗಳು ಇದುವರೆಗೂ ನಡೆದಿಲ್ಲ. ಅದು ಹೋಗಲಿ ಎಂದರೆ ರಾಮನ ಮಂದಿರ ನಿರ್ಮಾಣ ಮಾಡದಂತೆ ಪ್ರಯತ್ನಗಳೂ ಅದೆಷ್ಟೋ ನಡೆದುಹೋಗಿವೆ. ಬದಲಿಗೆ ಧ್ವಂಸಗೊಳಿಸಿದ ಬಾಬರಿ ಮಸೀದಿ ಮರುಸ್ಥಾಪಿಸುವ ಪ್ರಯತ್ನಕ್ಕೂ ಕಾಂಗ್ರೆಸ್ ಒಲವು ತೋರಿತ್ತು. ಇದೀಗ ಇದೇ ಕಾಂಗ್ರೆಸ್ ತಮಗೆ ಆಹ್ವಾನಿಸಿಲ್ಲ ಎಂದು ಆರೋಪಿಸುವುದು ಸರಿಯೇ’ ಎಂದು ನರಸಿಂಹ ರಾವ್ ಕೇಳಿದ್ದಾರೆ.

    29 ವರ್ಷಗಳ ಹಿಂದಿನ ‘ಪ್ರತಿಜ್ಞೆ’ ಪೂರೈಸಿದ ಪ್ರಧಾನಿ ಮೋದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts