More

    ಇಂದು, ನಾಳೆ ಬ್ಯಾಂಕ್ ಮುಷ್ಕರ: ಹಲವು ಸೇವೆಗಳಲ್ಲಿ ವ್ಯತ್ಯಯ- ಇಲ್ಲಿದೆ ಸಂಪೂರ್ಣ ವಿವರ…

    ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರು ಗುರುವಾರ (ಡಿ.16) ಮತ್ತು ಶುಕ್ರವಾರ (ಡಿ.17) ಎರಡು ದಿನಗಳ ಮುಷ್ಕರ ನಡೆಸಲಿದ್ದಾರೆ. ಆದ್ದರಿಂದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ವ್ಯಾಪ್ತಿಯ ಎಲ್ಲಾ ಬ್ಯಾಂಕ್‌ಗಳು ಸೇರಿದಂತೆ ಹಲವರು ಬ್ಯಾಂಕ್‌ಗಳ ಸೇವೆಯಲ್ಲಿ ಎರಡು ದಿನ ವ್ಯತ್ಯಯವಾಗಲಿದೆ.

    ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅನ್ನು ಪರಿಚಯಿಸುತ್ತದೆ. ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದು, ಬ್ಯಾಂಕಿಂಗ್ ಕಂಪೆನಿಗಳ (ಅಂಡರ್‌ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗಳಲ್ಲಿ ತಿದ್ದುಪಡಿಗಳನ್ನು ಮಾಡುವುದು, 1970 ಮತ್ತು 1980 ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರಲ್ಲಿ ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ. ಇದರ ವಿರುದ್ಧ ಮುಷ್ಕರ ನಡೆಸಲಾಗುತ್ತಿದೆ.

    ಯುಎಫ್​ಬಿಯು ಸಂಸ್ಥೆಯು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ​​(AIBEA) ಮತ್ತು ಬ್ಯಾಂಕ್ ವರ್ಕರ್ಸ್ ರಾಷ್ಟ್ರೀಯ ಸಂಸ್ಥೆ (NOBW) ಸೇರಿದಂತೆ ಒಂಬತ್ತು ಒಕ್ಕೂಟಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದೆ.

    ಈ ಹಿನ್ನೆಲೆಯಲ್ಲಿ ಹೆಚ್ಚಿನ ಬ್ಯಾಂಕ್‌ಗಳು ಚೆಕ್ ಕ್ಲಿಯರೆನ್ಸ್ ಮತ್ತು ಹಣ ವರ್ಗಾವಣೆಯಂತಹ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ನಡೆಸದೇ ಇರುವ ಸಾಧ್ಯತೆ ಇದೆ. ಇದಾಗಲೇ ಎಸ್‌ಬಿಐ ಈ ಕುರಿತು ಪ್ರಕಟಣೆ ಕೂಡ ನೀಡಿದೆ. ಎರಡು ದಿನಗಳ ಬ್ಯಾಂಕ್‌ ಸಂಘಟನೆಗಳ ಮುಷ್ಕರದಿಂದಾಗಿ ನಮ್ಮ ಸೇವೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಹಾಗೆಯೇ ಸಾಮಾನ್ಯವಾಗಿ ಸೇವೆಯು ಮುಂದುವರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ನಾವು ಕೈಗೊಳ್ಳುತ್ತೇವೆ ಎಂದು ಕೂಡಾ ಎಸ್‌ಬಿಐ ಹೇಳಿದೆ.

    ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಆರ್‌ಬಿಎಲ್‌ ಬ್ಯಾಂಕ್‌ ಕೂಡ ಹೇಳಿಕೆ ನೀಡಿದ್ದು, ’ನಮ್ಮ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಸಾಮಾನ್ಯವಾಗಿ ಸೇವೆ ನಡೆಸುವ ನಿಟ್ಟಿನಲ್ಲಿ ನಾವು ಎಲ್ಲಾ ಕ್ರಮವನ್ನು ಕೈಗೊಂಡಿದ್ದೇವೆ. ಆದರೆ ಮುಷ್ಕರದಿಂದಾಗಿ ನಮ್ಮ ಬ್ಯಾಂಕಿನ ಸೇವೆಯಲ್ಲಿ ಕೊಂಚ ವ್ಯತ್ಯಾಸ ಉಂಟಾಗಲಿದೆ’ ಎಂದಿದೆ.

    ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕ್ ಖಾಸಗೀಕರಣ ಮಸೂದೆಯನ್ನು (ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ, 2021) ಮಂಡಿಸುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದರೆ, ಮುಷ್ಕರವನ್ನು ಮರುಪರಿಶೀಲಿಸಲು ನಾವು ಒಲವು ತೋರುತ್ತೇವೆ. ಆದರೆ ಸರ್ಕಾರ ಈ ಕುರಿತು ಯಾವುದೇ ಭರವಸೆ ನೀಡಿಲ್ಲ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಹೇಳಿದ್ದಾರೆ. ಆದ್ದರಿಂದ ಈ ಎರಡು ದಿನ ಮಾತ್ರವಲ್ಲದೇ ಈ ವಾರದಲ್ಲಿ ಮತ್ತೆ ಎರಡು ದಿನಗಳ ಕಾಲ ಬ್ಯಾಂಕ್‌ಗಳು ಬಂದ್‌ ಆಗುವ ಸಾಧ್ಯತೆ ಇದೆ.

    VIDEO: 22 ಮಂದಿ ಪ್ರಯಾಣಿಕರು ಚಲಿಸುತ್ತಿದ್ದ ಬಸ್‌ಗೆ ಬೆಂಕಿ: ಬೆಳಗ್ಗೆ ಕಾರವಾರದಲ್ಲಿ ಭಾರಿ ಅವಘಡ- ಸುಟ್ಟ ಭಸ್ಮವಾದ ವಾಹನ

    ಪುಲ್ವಾಮಾ ಹುತಾತ್ಮನ ತಂಗಿಯ ಮದುವೆ ನೆರವೇರಿಸಿದ ಯೋಧರು: ಅಣ್ಣನ ಸ್ಥಾನ ತುಂಬಿದ ಅವಿಸ್ಮರಣೀಯ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts