ಶಾರುಖ್‌ ಪುತ್ರನಿಗೆ ಇಲ್ಲ ಬಿಡುಗಡೆ ಭಾಗ್ಯ: ಜೈಲಿಗೆ ದೌಡಾಯಿಸಿ ಒಂದು ಲಕ್ಷ ರೂ. ನೀಡಿದ ನಟಿ ಜೂಹಿ ಚಾವ್ಲಾ

Aryan
Published on

ಮುಂಬೈ: ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಜಾಮೀನು ನಿನ್ನೆ ಮಂಜೂರಾಗಿದ್ದರೂ ಇದುವರೆಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಜಾಮೀನಿನ ಸಂಪೂರ್ಣ ಪ್ರಕ್ರಿಯೆಗಳು ಮುಗಿಯದ ಹಿನ್ನೆಲೆಯಲ್ಲಿ ಇಂದು ರಾತ್ರಿ ಜೈಲಿನಲ್ಲಿಯೇ ಕಳೆಯಬೇಕಿದೆ.

ನಿನ್ನೆ ಆರ್ಯನ್‌ಗೆ ಬಾಂಬೆ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿ ಜಾಮೀನು. ಇದರಲ್ಲಿ ಒಂದು ಒಂದು ಲಕ್ಷ ರೂಪಾಯಿಗಳ ಶ್ಯೂರಿಟಿ (ಭದ್ರತೆ) ಹಾಕಬೇಕು ಎನ್ನುವುದು. ಅದಕ್ಕಾಗಿ ಯಾರಾದರೂ ಪರಿಚಿತರು ಭದ್ರತೆ ನೀಡಬೇಕಿರುವುದು ಕಾನೂನು.

ಈ ಹಿನ್ನೆಲೆಯಲ್ಲಿ ನಟಿ ಜೂಹಿ ಚಾವ್ಲಾ ಒಂದು ಲಕ್ಷ ರೂಪಾಯಿ ಬಾಂಡ್‌ನ್ನು ಹಿಡಿದು ಜೈಲಿಗೆ ಆಗಮಿಸಿ, ಬಾಂಡ್‌ಗೆ ಸಹಿ ಹಾಕಿದ್ದಾರೆ. ಈ ಕುರಿತು ಆರ್ಯನ್ ಖಾನ್ ಅವರ ವಕೀಲ ಸತೀಶ್ ಮನೇಶಿಂಡೆ ಮಾಹಿತಿ ನೀಡಿದ್ದಾರೆ.

'ಬಾಂಬೆ ಹೈಕೋರ್ಟ್‌ನ ಆದೇಶದ ಪ್ರತಿ ಸಿಕ್ಕಿದೆ. ಶ್ಯೂರಿಟಿ ಸೇರಿದಂತೆ ಕೆಲವು ವಿಧಿವಿಧಾನಗಳನ್ನು ನೆರವೇರಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ತಂಡವು ಕೆಲಸ ಮಾಡುತ್ತಿದೆ. ಆರ್ಯನ್‌ ಇಂದೇ ಬಿಡುಗಡೆಯಾಗಲು ಪ್ರಯತ್ನಿಸುತ್ತಿದ್ದೇವೆ, ಆದರೆ ಅದು ಸಾಧ್ಯವಿಲ್ಲ ಎನಿಸುತ್ತದೆ. ಇಲ್ಲದಿದ್ದರೆ ನಾಳೆ ಬೆಳಗ್ಗೆ ಜೈಲಿನಿಂದ ಆರ್ಯನ್‌ ಬಿಡುಗಡೆಯಾಗಲಿದ್ದಾರೆ ಎಂದರು.

ಶ್ಯೂರಿಟಿ ನೀಡಲು ಬಂದ ಜೂಹಿ ಚಾವ್ಲಾ ಅವರ ದಾಖಲೆಗಳನ್ನು ಪರಿಶೀಲಿಸಿದ ನಂತರ, ಅದನ್ನು ಮಾನ್ಯ ಮಾಡಲಾಗಿದೆ. ಅನುಮತಿಯಿಲ್ಲದೆ ದೇಶವನ್ನು ತೊರೆಯಬಾರದು. ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಬಾರದು, ಮಾಧ್ಯಮಗಳ ಜತೆ ಮಾತನಾಡಬಾರದು ಸೇರಿದಂತೆ 14 ಷರತ್ತುಗಳನ್ನು ಕೋರ್ಟ್‌ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net