More

    ಕೇಂದ್ರಕ್ಕಿರುವುದು ಇನ್ನೊಂದೇ ತಿಂಗಳ ಗಡುವು: ಇಲ್ಲದಿದ್ದರೆ ಇದೇ ನನ್ನ ಕೊನೆಯ ಉಪವಾಸ ಸತ್ಯಾಗ್ರಹ

    ಪುಣೆ: ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳ ಕಾಲಾವಕಾಶ ಕೇಳಿದೆ. ಆದ್ದರಿಂದ ನಾನು ಜನವರಿ ಅಂತ್ಯದವರೆಗೆ ನೋಡುತ್ತೇನೆ. ಇಲ್ಲದಿದ್ದರೆ ಉಪವಾಸಕ್ಕೆ ಕುಳಿತುಕೊಳ್ಳುತ್ತೇನೆ. ಇದು ನನ್ನ ಜೀವನದ ಕೊನೆಯ ಉಪವಾಸ ಆಗಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಸಿದ್ದಾರೆ.

    ರಾಲೇಗಣ್ ಸಿದ್ಧಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅಣ್ಣಾ ಹಜಾರೆ, ತಾವು ಕಳೆದ ಮೂರು ವರ್ಷಗಳಿಂದ ರೈತರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಇದುವೆಗೆ ಸರ್ಕಾರ ನನ್ನ ಮನವಿಗೆ ಸ್ಪಂದಿಸಿಲ್ಲ. ಖೊಟ್ಟಿ ಭರವಸೆಗಳನ್ನಷ್ಟೇ ನೀಡುತ್ತಿರುವ ಸರ್ಕಾರದ ಬಗ್ಗೆ ತನಗೆ ನಂಬಿಕೆ ಸಂಪೂರ್ಣ ಹೊರಟು ಹೋಗಿದೆ. ಇದೀಗ ರೈತರು ಬೀದಿಗಿಳಿದಿದ್ದಾರೆ. ಇನ್ನು ಒಂದೇ ತಿಂಗಳು ಗಡುವು ಇರುವುದು ಎಂದಿದ್ದಾರೆ 83 ವರ್ಷದ ಅಣ್ಣಾ ಹಜಾರೆ.

    ಎಂಎಸ್ ಸ್ವಾಮಿನಾಥನ್ ಸಮಿತಿ ವರದಿಯ ಶಿಫಾರಸುಗಳನ್ನ ಜಾರಿಗೆ ತರಬೇಕು. ಕೃಷಿ ವೆಚ್ಚ ಮತ್ತು ದರ ಆಯೋಗ (ಸಿಎಸಿಪಿ) ಸಂಸ್ಥೆಗೆ ಸ್ವಾಯತ್ತ ಅಧಿಕಾರ ನೀಡಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆಗಳು. ಈ ನಿಟ್ಟಿನಲ್ಲಿ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಡಿಸೆಂಬರ್ 14ರಂದು ಪತ್ರ ಬರೆದಿದ್ದು, ಈ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿದ್ದಾರೆ.

    ಸರ್ಕಾರ ಕೇವಲ ಖಾಲಿ ಭರವಸೆಗಳನ್ನಷ್ಟೇ ನೀಡುತ್ತಿದೆ. ಆದ್ದರಿಂದ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದೇನೆ. ಈಗ ನನ್ನ ಬೇಡಿಕೆಗಳ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನೋಡೋಣ ಎಂದಿದ್ದಾರೆ.

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ‘ಬಿಎಸ್​ವೈ ಮೇಲಿದೆ ಸಿಗಂದೂರು ದೇವಿ ಶಾಪ: ಸಂಕ್ರಾಂತಿಯ ನಂತರ ಖುರ್ಚಿಯಿಂದ ಕೆಳಕ್ಕೆ’

    ಬೆಳಗಾವಿ, ಬೆಂಗಳೂರಿನ ಮೇಲೆ ಬಿದ್ದಿದೆ ಓವೈಸಿ ಕಣ್ಣು: ಅಧಿಪತ್ಯ ಸಾಧಿಸಲು ‘ಮಾಜಿ’ಗಳ ಭೇಟಿ

    ನಮಗಾಗಿ ಅಪ್ಪ ಒಮ್ಮೆಯೂ ​ರಜೆ ಹಾಕಲ್ಲ, ಕೇಳಿದ್ದನ್ನು ಕೊಟ್ರೆ ಸಾಕೆ? ತಂದೆ ಪ್ರೀತಿ ಬಯಸೋದೇ ತಪ್ಪಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts