More

    ನಾನೇ ಸೀನಿಯರ್​… ಅಮಿತ್​ ಷಾ ಸ್ವಾಗತಕ್ಕಾಗಿ ಮಹಿಳಾ ಅಧಿಕಾರಿಗಳ ಜಟಾಪಟಿ

    ಬೆಳಗಾವಿ: ಗೃಹ ಸಚಿವ ಅಮಿತ್​ ಷಾ ಅವರ ಬೆಳಗಾವಿ ಭೇಟಿ ಹಿನ್ನೆಲೆಯಲ್ಲಿ, ಅವರನ್ನು ವಿಮಾನನಿಲ್ದಾಣದಲ್ಲಿ ಸ್ವಾಗತಿಸುವ ಸಂಬಂಧ ಇಬ್ಬರು ಮಹಿಳಾ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿರುವ ಘಟನೆ ನಡೆದಿದೆ.

    ಅಮಿತ್​ ಷಾ ಅವರನ್ನು ಸ್ವಾಗತಿಸುವವರ ಪಟ್ಟಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಅವರ ಹೆಸರು ಇತ್ತು. ನಂತರ ಪಟ್ಟಿಯನ್ನು ತಿದ್ದುಪಡಿ ಮಾಡಿ ಅದರಲ್ಲಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಸೋನಾಲಿ ಸರ್ನೋಬತ್​​ ಅವರ ಹೆಸರು ಸೇರಿಸಲಾಗಿತ್ತು. ಇದರಿಂದ ಕುಡಚಿ ಅವರಿಗೆ ತೀವ್ರ ಅಸಮಾಧಾನ ಉಂಟಾಗಿದೆ.

    ಇಬ್ಬರೂ ಅಮಿತ್​ ಷಾ ಅವರನ್ನು ಸ್ವಾಗತಿಸಲು ತಾಮುಂದು… ನಾಮುಂದು ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕುಡಚಿ ಅವರಿಗೆ ಕೊನೆಯ ಕ್ಷಣದಲ್ಲಿ ಅವಕಾಶ ತಪ್ಪಿಹೋಗಿದ್ದರಿಂದ ಅವರು ಕೆಂಡಾಮಂಡಲರಾಗಿದ್ದಾರೆ.

    ನಾನು ಬಿಜೆಪಿಯಲ್ಲಿ ಸೀನಿಯರ್, ನನಗೆ ಭೇಟಿಗೆ ಅವಕಾಶ ನೀಡದೇ ನಿನ್ನೆ ಮೊನ್ನೆ ಬಂದಿರುವ ಸೋನಾಲಿ ಅವರಿಗೆ ಅವಕಾಶ ಕೊಟ್ಟಿರುವುದು ಸರಿಯಲ್ಲ. ಬೆಳಗಾವಿ ಗ್ರಾಮೀಣ ಅಧ್ಯಕ್ಷ ಸಂಜಯ್ ಪಾಟೀಲ್ ನನ್ನ ಹೆಸರು ಕೈಬಿಟ್ಟು ಸೋನಾಲಿ ಹೆಸರು ಸೇರಿಸಿರುವುದು ಉಚಿವಲ್ಲ ಎಂದು ಕಿಡಿಕಾರಿದ್ದಾರೆ.

    ಇತ್ತೀಚಿಗೆ ಬಿಜೆಪಿಗೆ ಬಂದ ಸೋನಾಲಿಗೆ ಪಕ್ಷದಲ್ಲಿ 6 ಸ್ಥಾನ ನೀಡಲಾಗಿದೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಈ ವಿಚಾರವಾಗಿ ಪಕ್ಷದ ವರಿಷ್ಠರಿಗೆ ದೂರು ನೀಡುತ್ತೇವೆ ಎಂದು ದೀಪಾ ಹೇಳಿದ್ದಾರೆ.

    ‘ಬೆಳಗಾವಿಯಲ್ಲಿ ಮೂಲ‌ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ. ಪಕ್ಷಕ್ಕಾಗಿ 20 ವರ್ಷಗಳಿಂದ ದುಡಿದವರಿಗೆ ಮನ್ನಣೆ ದೊರೆಯುತ್ತಿಲ್ಲ. ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರನ್ನು ಖಾನಾಪುರ ಮಹಿಳಾ‌ ಘಟಕದ ಅಧ್ಯಕ್ಷೆಯನ್ನಾಗಿ ಮಾಡಲಾಗಿದೆ. ಈಚೆಗೆ ಬಂದ ಡಾ.ಸೋನಾಲಿ ಸರ್ನೋಬತ್ ಪಕ್ಷದಲ್ಲಿ ಸಾಕಷ್ಟು ಅಧಿಕಾರ ಅನುಭವಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

    ಹೃತಿಕ್​​- ಕಂಗನಾ ನಡುವೆ ಲೈಂಗಿಕ ಸಂಬಂಧ: ಗೋಸ್ವಾಮಿ ಚಾಟ್​ ಸೋರಿಕೆ

    2-3 ಗಂಟೆ ಕುಳಿತರೂ ಮಲವಿಸರ್ಜನೆ ಪೂರ್ಣವಾಗುತ್ತಿಲ್ಲ- ಪ್ಲೀಸ್​ ಪರಿಹಾರ ಹೇಳಿ

    ಹಾರುತ್ತಾ ಹಾರುತ್ತಾ ಟ್ಯಾಕ್ಸಿಯಲ್ಲೇ ಊರು ತಲುಪಬಹುದು: ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ

    11 ಮಹಿಳೆಯರ ಸಾವಿಗೆ ಕಾರಣ ಅಶೋಕ್​ ಖೇಣಿ: ಅವರನ್ನು ಬಂಧಿಸಿ ಎಂದು ಸರ್ಕಾರಕ್ಕೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts