More

    ಅಯೋಧ್ಯೆಯಲ್ಲಿ ಶುರುವಾಯ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ: ರನ್‌ವೇ ನಿರ್ಮಾಣ ಬೆಂಗಳೂರಿನ ಸಂಸ್ಥೆಗೆ

    ಲಖನೌ: ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ‘ಮರ್ಯಾದಾ ಪುರಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ’ ಎಂಬ ಹೆಸರಿನಲ್ಲಿ ನಿರ್ಮಾಣಗೊಳ್ಳಲಿರುವ ನಿಲ್ದಾಣದ ಕೆಲಸವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಆರಂಭಿಸಿದೆ.

    ವಿಶೇಷವೆಂದರೆ ಬೆಂಗಳೂರಿನ ವಿಶಾಲ್ ಇನ್‍ಫ್ರಾಸ್ಟ್ರಕ್ಚರ್ ರನ್‍ವೇ ಕಟ್ಟಡಕ್ಕಾಗಿ ಬಿಡ್ ಗೆದ್ದಿದ್ದು, ಎಎಐ ಮೇಲ್ವಿಚಾರಣೆಯಲ್ಲಿ ಕೆಲಸ ಆರಂಭಿಸಲಿದೆ. ಯೋಜನೆಯ ಉಸ್ತುವಾರಿಯನ್ನು ರಾಜೀವ್ ಕುಲಶ್ರೇಷ್ಠ ಮತ್ತು ಇತರ ಮೂವರು ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ನಿಲ್ದಾಣದ ನಿರ್ದೇಶಕರನ್ನಾಗಿ ಲಾಲ್ಜಿ ಮತ್ತು ಎಎಐನ ಇಬ್ಬರು ಸಹಾಯಕ ಪ್ರಧಾನ ವ್ಯವಸ್ಥಾಪಕರನ್ನು ಸರ್ಕಾರ ನೇಮಕ ಮಾಡಿದೆ.

    ಸದ್ಯದ ಯೋಜನೆಯ ಪ್ರಕಾರ ವಿಮಾನ ನಿಲ್ದಾಣವನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ಮೊದಲ ಹಂತವು ಸುಮಾರು ಒಂದೂವರೆ ಅಥವಾ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ 150 ಕೋಟಿ ರೂ. ಯೋಜನೆಯ ಮೊದಲ ಹಂತದಲ್ಲಿ, ಎಟಿಆರ್-72 ವಿಮಾನಗಳ ಲ್ಯಾಂಡಿಂಗ್‍ಗಾಗಿ 2,250 ಮೀಟರ್ ರನ್‍ವೇ ನಿರ್ಮಿಸಬೇಕಾಗಿದೆ.

    ಸದ್ಯ ಹಾಕಿರುವ ಲೆಕ್ಕಾಚಾರದ ಪ್ರಕಾರ ಸುಮಾರು 550 ಎಕರೆ ಭೂಮಿ ಅಗತ್ಯವಿದೆ. ಈ ಪೈಕಿ, ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಏರ‌ಸ್ಟ್ಕ್ರಿಪ್ ಮತ್ತು ಟರ್ಮಿನಲ್ ಈಗಾಗಲೇ 182 ಎಕರೆಗಳನ್ನು ಹೊಂದಿದೆ. 555.66 ಎಕರೆ ಹೆಚ್ಚುವರಿ ಭೂಮಿಯನ್ನು ಖರೀದಿಸಲು ಒಟ್ಟು 1,001.77 ಕೋಟಿ ರೂ. ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಬಜೆಟ್‍ನಲ್ಲಿ 101 ಕೋಟಿ ರೂ. ಮೀಸಲಿಡಲಾಗಿದೆ.

    ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರವು 250 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಉತ್ತರ ಪ್ರದೇಶ ಸರ್ಕಾರ ಹೆಚ್ಚುವರಿ ಭೂಮಿಯನ್ನು ಖರೀದಿಸಲು 321 ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ.

    ಉಪಕುಲಪತಿಗಳ ಅಧಿಕೃತ ನಿವಾಸ ಸೇರಿದಂತೆ ಈ ಭೂಮಿಯಲ್ಲಿರುವ ಸುಮಾರು 30 ಕಟ್ಟಡಗಳನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜನವರಿ 8ರಂದು ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ.

    VIDEO: ಅಯೋಧ್ಯೆಯ ರಾಮ ಮಂದಿರ ಹೇಗಿರಲಿದೆ? ಒಳಗೆ ಏನೇನು ಇರಲಿವೆ? ಕಣ್ಮನ ಸೆಳೆಯುವ 3ಡಿ ವಿಡಿಯೋ ಇಲ್ಲಿದೆ ನೋಡಿ…

    ಜಾರಕಿಹೊಳಿ ಸಿಡಿ ಕೇಸ್‌ಗೆ ಭಾರಿ ಟ್ವಿಸ್ಟ್‌: ಎಸ್‌ಐಟಿ ವರದಿ ಸಲ್ಲಿಕೆಗೆ ಸುಪ್ರೀಂ ತಡೆ- ಮತ್ತಷ್ಟು ಸಂಕಟದಲ್ಲಿ ಶಾಸಕ!

    ಹೆಚ್ಚುತ್ತಲಿದೆ ಚಂದ್ರನ ಮೇಲೆ ಜಾಗ ಖರೀದಿ ಮಾಡುವವರ ಸಂಖ್ಯೆ: ಎಕರೆಗೆ 6 ಸಾವಿರ ರೂ ಕೊಟ್ಟ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts