More

    ಈಗಾಗ್ಲೇ ನಾಲ್ಕು ಮಕ್ಕಳಿವೆ… ಮನೆಯಲ್ಲಿದ್ದರೆ ಇನ್ನೂ ಹೆಚ್ಚಾಗೋ ಭಯ ಎಂದ ನಟ ಸೈಫ್‌ ಅಲಿ ಖಾನ್‌

    ಮುಂಬೈ: ಈಗಾಗಲೇ ನನಗೆ ನಾಲ್ಕು ಮಕ್ಕಳು ಇದ್ದಾರೆ. ಇನ್ನೂ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದರೆ ಇನ್ನೂ ಹೆಚ್ಚಾಗುವ ಭಯ ಕಾಡ್ತಿದೆ ಎಂದು ಬಾಲಿವುಡ್ ನಟ ಸೈಫ್ ಆಲಿ ಖಾನ್ ಹಾಸ್ಯಚಟಾಕಿ ಸಿಡಿಸಿದ್ದಾರೆ.

    ಕಪಿಲ‌ ಶರ್ಮ ಅವರ ಹಾಸ್ಯದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ. , ಈಗಾಗಲೇ 4 ಮಕ್ಕಳನ್ನು ಹೊಂದಿರುವ ನೀವು ಇನ್ನೂ ಮಕ್ಕಳನ್ನು ಪಡೆಯುವ ಒತ್ತಡ ಏನಾದರೂ ಇದೆಯೇ ಎಂದು ಕಪಿಲ್‌ ಶರ್ಮ ಪ್ರಶ್ನಿಸಿರುವುದಕ್ಕೆ ಪ್ರತಿಯಾಗಿ ಈ ಹಾಸ್ಯದ ಹೇಳಿಕೆ ನೀಡಿದ್ದಾರೆ. ಇದೀಗ ಭಾರಿ ವೈರಲ್‌ ಆಗಿದೆ. ಇಷ್ಟು ಹೇಳುತ್ತಿದ್ದಂತೆಯೇ ಇಬ್ಬರೂ ಜೋರಾಗಿ ನಕ್ಕಿದ್ದಾರೆ.

    2021ರಲ್ಲಿಯೇ 3 ಸಿನಿಮಾ ಪೂರ್ಣಗೊಳಿಸಿದ್ದೀರಿ, ನಿಮಗೆ ಕೆಲಸ ಮಾಡಲು ಇಷ್ಟವೇ? ಅಥವಾ ಮಕ್ಕಳ ಸಂಖ್ಯೆ ಜಾಸ್ತಿ ಮಾಡಬೇಕು ಎನ್ನುವ ಒತ್ತಡ ಇದೆಯೇ ಎಂದು ಕಪಿಲ್ ಶರ್ಮ ಪ್ರಶ್ನಿಸಿದ್ದರು.

    ಅಂದಹಾಗೆ ಸೈಫ್ ಅಲಿ ಖಾನ್ ಮೊದಲು ನಟಿ ಅಮೃತಾ ಸಿಂಗ್ ಜತೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ಇಬ್ರಾಹಿಂ ಅಲಿ ಖಾನ್, ಸಾರಾ ಅಲಿ ಖಾನ್. ನಂತರ ಅಮೃತಾ ಸಿಂಗ್ ಜತೆಗೆ ಡಿವೋರ್ಸ್‌ ಪಡೆದು 2012ರಲ್ಲಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದಾರೆ. ಇವರಿಗೂ ಇಬ್ಬರು ಮಕ್ಕಳು. ತೈಮೂರ್ ಅಲಿ ಖಾನ್ ಹಾಗೂ ಜೆಹಾಂಗೀರ್ ಎಂದು ಅವರು ಹೆಸರು.

    ಗುಂಡು ಹಾರಿಸಿಕೊಂಡು ಶಾಸಕನ ಮಗ ಆತ್ಮಹತ್ಯೆ: ಸಾಯುವ ಮುನ್ನ ಗೆಳೆಯರಿಗೆ ಕರೆ ಮಾಡಿದ್ದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts