More

    ಮಧ್ಯಾಹ್ನ ಮಲಗುವ ಅಭ್ಯಾಸವಿದೆಯೆ? ಹಾಗಿದ್ದರೆ ಇದನ್ನೊಮ್ಮೆ ಓದಿ ನೋಡಿ…

    ನವದೆಹಲಿ: ಹೆಚ್ಚಿನವರಿಗೆ ಮಧ್ಯಾಹ್ನ ಊಟದ ಬಳಿಕ ಮಲಗುವ ಅಭ್ಯಾಸವಿರುತ್ತದೆ. ಅಭ್ಯಾಸ ಇಲ್ಲದವರು ಕೂಡ ಲಾಕ್‌ಡೌನ್‌ನಿಂದಾಗಿ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದರೆ, ವರ್ಕ್‌ ಫ್ರಂ ಹೋಂನಲ್ಲಿ ಇರುವ ಕೆಲವರು ಕೆಲಸದ ಟೆನ್ಷನ್‌ ಇರದಿದ್ದರೆ ಮಧ್ಯಾಹ್ನ ನಿದ್ದೆಗೆ ಜಾರುವುದನ್ನು ರೂಢಿಸಿಕೊಂಡಿದ್ದಾರೆ.

    ನಿಮಗೂ ಕೆಲವೊಮ್ಮೆ ವೈದ್ಯರು ಮಧ್ಯಾಹ್ನ ಮಲಗಿ ಎಂದು ಸಲಹೆಯನ್ನೂ ಕೊಟ್ಟಿರಬಹುದು. ಹಾಗಿದ್ದರೆ ಮಧ್ಯಾಹ್ನ ಮಲಗುವುದು ಒಳ್ಳೆಯದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು.

    ಅದಕ್ಕೆ ಉತ್ತರವಾಗಿ ಬಂದಿದೆ ಈ ಅಧ್ಯಯನ. ವೈದ್ಯರು, ತಜ್ಞರು ಕೆಲವರಿಗೆ ಹೇಳುವಂತೆ ಮಧ್ಯಾಹ್ನ ಮಲಗುವುದರಿಂದ ಸಮಾಧಾನ ಸಿಗುವುದು ನಿಜ. ದೇಹಕ್ಕೂ ಸ್ವಲ್ಪ ವಿಶ್ರಾಂತಿ ಸಿಗುವುದೂ ನಿಜ. ಆದರೆ ವೈದ್ಯರು ಹೇಳಿರುವುದನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದೇ ಅಥವಾ ನಿಮಗೆ ಕೆಲಸವಿಲ್ಲವೆಂದು ಒಂದು ಮುಕ್ಕಾಲು- ಒಂದು ಗಂಟೆಗಿಂತ ಹೆಚ್ಚಿನ ಸಮಯ ಮಲಗಿದರೋ ಅಂಥವರದಲ್ಲಿ ಹೃದ್ರೋಗ ಸಮಸ್ಯೆ ಅಧಿಕವಾಗುತ್ತದೆ ಎಂದು ಅಧ್ಯಯನ ಹೇಳಿದೆ.

    ಇಸಿಎಸ್‌ ಕಾಂಗ್ರೆಸ್ 2020ಯ ಡಿಜಿಟಲ್ ಎಕ್ಸ್‌ಪೀರಿಯೆನ್ಸ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು ಮಧ್ಯಾಹ್ನ ನಿದ್ದೆ ಮಾಡುವುದು ಹಾಗೂ ಹೃದ್ರೋಗ ಮತ್ತು ಸಾವಿನ ಅಪಾಯದ ನಡುವಿನ ಸಂಬಂಧವನ್ನು ವಿವರಿಸಿದೆ.

    ಈ ಸಂಶೋಧನೆ ಮಾಡುವ ಸಲುವಾಗಿ 3,13,651 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರ ಪೈಕಿ ಶೇ.39ರಷ್ಟು ಜನರು ಮಧ್ಯಾಹ್ನ ಒಂದುಗಂಟೆಗಿಂತಲೂ ಅಧಿಕ ಸಮಯ ನಿದ್ರಿಸುವವರಾಗಿದ್ದಾರೆ. ಅವರ ಆರೋಗ್ಯವನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ ಇವರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಿಗೆ ಬಾಧಿಸಿರುವುದು ಕಂಡುಬಂದಿದೆ.

    ಇದನ್ನೂ ಓದಿ: ಪ್ರವಾಹದಲ್ಲಿ ಏರ್‌ಲಿಫ್ಟ್‌: ಯೋಧರ ಸಾಹಸಮಯ ರೋಚಕ ವಿಡಿಯೋ

    ‘ಹಗಲಿನ ಮಲಗುವುದು ವಿಶ್ವಾದ್ಯಂತ ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ಚಿಕ್ಕನಿದ್ರೆ ತೆಗೆದುಕೊಳ್ಳುವುದರಿಂದ ಕೆಲಸದ ಸಾಮರ್ಥ್ಯ ಸುಧಾರಿಸುತ್ತದೆ ಮತ್ತು ನಿದ್ರೆಯ ಕೊರತೆಯಿಂದ ಉಂಟಾಗುವ ನಷ್ಟವನ್ನು ಸಹ ಸರಿದೂಗಿಸುತ್ತದೆ. ಸಾಮಾನ್ಯವಾಗಿ ಈ ಎರಡೂ ವಿಚಾರಗಳನ್ನು ನಾವು ನಮ್ಮ ಸಂಶೋಧನೆಯಲ್ಲಿ ಪ್ರಶ್ನಿಸಿದ್ದೇವೆ’ ಎಂದು ಸಂಶೋಧಕ ಡಾ. ಝೆ. ಪಾನ್ ಹೇಳಿದ್ದಾರೆ.

    ನಿದ್ರೆಗೆ ಬಾರದವರಿಗೆ ಹೋಲಿಸಿದರೆ 60 ನಿಮಿಷಗಳಿಗಿಂತ ಹೆಚ್ಚು ಕಾಲ ಮಲಗುವುದು ಹೃದ್ರೋಗ ಮತ್ತು ಸಾವಿನ ಅಪಾಯವನ್ನು ಶೇಕಡಾ 30ರಷ್ಟು ಹೆಚ್ಚಿಸುತ್ತದೆ. ರಾತ್ರಿ 6-8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರಲ್ಲಿ ಈ ಅಪಾಯ ಹೆಚ್ಚು ಎಂದಿದ್ದಾರೆ ಪಾನ್. ರಾತ್ರಿಯ ಹೊತ್ತು ಶರೀರಕ್ಕೆ ಬೇಕಾಗುವಷ್ಟು ನಿದ್ರೆ ಮಾಡದವರು ಒಂದು ವೇಳೆ ಮಧ್ಯಾಹ್ನ 30ರಿಂದ 45 ನಿಮಿಷ ಮಲಗಿದರೆ, ಅವರ ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂದೂ ಹೇಳಿದ್ದಾರೆ.

    ಕರೊನಾ ಕೋಲಾಹಲ: ಶಾಸಕರೇ ನೀವು ಸೋಂಕಿತರು ಎನ್ನುವಷ್ಟರಲ್ಲಿಯೇ ಬಂತು ನೆಗೆಟಿವ್‌ ವರದಿ!

    ಕರೊನಾ ಸೋಂಕಿಗೆ ಬಲಿಯಾದ ದೇಶದ ಮೊದಲ ಮಹಿಳಾ ಹೃದ್ರೋಗ ತಜ್ಞೆ

    ಕರೊನಾ ಹೆಚ್ಚಳಕ್ಕೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ ಎಂದ ದಿನೇಶ್‌ ಗುಂಡೂರಾವ್‌: ಕಮೆಂಟಿಗರು ಕಿಡಿಕಿಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts