More

    ಡಿವೋರ್ಸ್‌ ಪಡೆದಿದ್ದೇನೆ, ಪತ್ನಿ ತೀರಿಕೊಂಡಿದ್ದಾಳೆ- ಅವಳ ಹೆಸರಿನಲ್ಲಿರುವ ಆಸ್ತಿ ನನಗೆ ಸಿಗುತ್ತಾ?

    ಡಿವೋರ್ಸ್‌ ಪಡೆದಿದ್ದೇನೆ, ಪತ್ನಿ ತೀರಿಕೊಂಡಿದ್ದಾಳೆ- ಅವಳ ಹೆಸರಿನಲ್ಲಿರುವ ಆಸ್ತಿ ನನಗೆ ಸಿಗುತ್ತಾ?ಎರಡು ವರ್ಷಗಳ ಹಿಂದೆ ವಿಚ್ಛೇದನ ಆಗಿದೆ. ನಮಗೆ ಮಕ್ಕಳಿಲ್ಲ. ವಿಚ್ಛೇದನಕ್ಕೆ ನನ್ನ ಪತ್ನಿಯೇ ಅರ್ಜಿ ಹಾಕಿದ್ದಳು. ಹೋದ ತಿಂಗಳು ಆಕೆ ತೀರಿಕೊಂಡಿದ್ದಾಳೆ. ನಾನು ಮತ್ತೆ ಮದುವೆ ಆಗಿಲ್ಲ. ಹೆಂಡತಿಯ ಹೆಸರಿನಲ್ಲಿ ಎರಡು ಆಸ್ತಿ ಇದೆ (ಒಂದು ವಿಚ್ಛೇದನಕ್ಕೆ ಮುಂಚೆಯೇ ಇತ್ತು) ಈಗ ಅವಳಿಗೆ ತಂದೆ ತಾಯಿ ಇಬ್ಬರೂ ಇಲ್ಲ. ನಾನು ಅವಳ ಆಸ್ತಿ ನನಗೇ ಬರಬೇಕೆಂದು ಅವಳ ಅಕ್ಕ ಮತ್ತು ತಮ್ಮನಿಗೆ ಹೋಗಬಾರದೆಂದು ಕೇಸು ಹಾಕಬಹುದೇ?

    ಉತ್ತರ: ವಿಚ್ಛೇದಿತ ಪತಿಯ ಆಸ್ತಿಯಲ್ಲಿ ಪತ್ನಿಗೆ, ವಿಚ್ಛೇದಿತ ಪತ್ನಿಯ ಆಸ್ತಿಯಲ್ಲಿ ಪತಿಗೆ ಯಾವುದೇ ಹಕ್ಕೂ ಬರುವುದಿಲ್ಲ. ಹಿಂದೂ ವಾರಸಾ ಕಾಯ್ದೆಯ ಕಲಂ 15ರಂತೆ, ಮೃತ ಹಿಂದೂ ಮಹಿಳೆಯ ಆಸ್ತಿ ಆಕೆಯ ಮೊದಲನೆಯ ದರ್ಜೆಯ ವಾರಸುದಾರರಾಗಿ ಆಕೆಯ ಮಕ್ಕಳಿಗೂ ಮತ್ತು ಪತಿಗೂ ಸಲ್ಲುತ್ತದೆ. ನಿಮ್ಮ ವಿಷಯದಲ್ಲಿ ಆಕೆಗೆ ಮಕ್ಕಳಿಲ್ಲ ಮತ್ತು ಪತಿ ಎನ್ನುವುದರ ವ್ಯಾಪ್ತಿಯಲ್ಲಿ ವಿಚ್ಛೇದಿತ ಪತಿ ಬರುವುದಿಲ್ಲ.

    ಹೀಗಾಗಿ ನಿಮಗೆ ಯಾವ ಹಕ್ಕೂ ಬರುವುದಿಲ್ಲ. ಕಲಂ 15 (ಎ) ರಂತೆ ಪತಿ ಮಕ್ಕಳು ಇಲ್ಲದೇ ಇರುವುದರಿಂದ ಮತ್ತು ಕಲಂ 15(ಬಿ) ರಂತೆ ಪತಿಯ ವಾರಸುದಾರರು ಎನ್ನುವುದರ ಪ್ರಶ್ನೆ ಉದ್ಭವಿಸದೇ ಹೋಗುವುದರಿಂದ. ಕಲಂ 15(ಸಿ) ರಂತೆ, ಆಕೆಯ ತಂದೆ ತಾಯಿ ಇಲ್ಲದೇ ಇರುವುದರಿಂದ, ಕಲಂ 15 (ಡಿ)ರಂತೆ ಆಕೆಯ ತಂದೆಯ ವಾರಸುದಾರರಿಗೆ ಆಕೆಯ ಆಸ್ತಿ ಹೋಗಬೇಕಾಗುತ್ತದೆ. ಹೀಗಾಗಿ ನಿಮ್ಮ ವಿಚ್ಛೇದಿತ ಪತ್ನಿಯ ಹೆಸರಿನಲ್ಲಿ ಇರುವ ಎಲ್ಲ ಆಸ್ತಿಗಳೂ ಆಕೆಯ ಸಹೋದರ ಸಹೋದರಿಯರಿಗೆ ಹೋಗುತ್ತದೆಯೇ ವಿನಾ ನಿಮಗೆ ಬರುವುದಿಲ್ಲ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ನಿನಗೆ ಆಸ್ತಿ ಕೊಡುವುದಿಲ್ಲ ಎಂದು ತಂದೆ ಹೇಳುತ್ತಿದ್ದಾರೆ- ನಾನು ಇದರ ವಿರುದ್ಧ ಕೋರ್ಟ್‌ಗೆ ಹೋಗಬಹುದಾ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts