More

    ‘ನಾನು ಬಿಚ್ಚಲು ರೆಡಿ, ನೀವು ಶೂಟ್‌ ಮಾಡಿ’ ಎಂದು ಕುಂದ್ರಾಗೆ ಹೇಳಿದವಳೇ ಇವಳು: ನಟಿ ವಿರುದ್ಧ ಗಂಭೀರ ಆರೋಪ!

    ಮುಂಬೈ: ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಸಿಲುಕಿ ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಇಂಥದ್ದೊಂದು ಐಡಿಯಾ ಕೊಟ್ಟವಳು ನಟಿ ಶೆರ್ಲಿನ್ ಚೋಪ್ರಾ ಎಂದು ಇನ್ನೋರ್ವ ನಟಿ ಗೆಹನಾ ವಸಿಷ್ಠ ಗಂಭೀರ ಆರೋಪ ಮಾಡಿದ್ದಾರೆ.

    ಶೆರ್ಲಿನ್‌ ಪೊಲೀಸರ ಬಳಿ ರಾಜ್‌ ಕುಂದ್ರಾ ವಿರುದ್ಧ ಆರೋಪಿಸಿದ್ದರು. ನನ್ನನ್ನು ರಾಜ್‌ ಕುಂದ್ರಾ ಕಿಸ್‌ ಮಾಡಲು ನೋಡುತ್ತಿದ್ದರು. ಶಿಲ್ಪಾ ಜತೆ ನನ್ನ ಸಂಬಂಧ ಸರಿಯಿಲ್ಲ, ಆದ್ದರಿಂದ ನೀನು ನನಗೆ ಬೇಕು ಎಂದೆಲ್ಲಾ ಹೇಳುತ್ತಿದ್ದರು ಎಂದು ವಿಚಾರಣೆ ವೇಳೆ ಶೆರ್ಲಿನ್‌ ಹೇಳಿದ್ದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಟಿ ಗೆಹನಾ, ಇದೆಲ್ಲಾ ಸುಳ್ಳು. ಸದಾ ನ್ಯೂಸ್‌ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳಲು ಬಯಸುವ ಗೆಹನಾ ಹೀಗೆಲ್ಲಾ ಇಲ್ಲಸಲ್ಲದ ಆರೋಪ ಮಾಡಿದ್ದಾಳೆ. ಅಸಲಿಗೆ ಅವಳೇ ಸರಿಯಿಲ್ಲ. ಇಂಥದ್ದೊಂದು ಕೆಟ್ಟ ಐಡಿಯಾ ಕೊಟ್ಟವಳೇ ಅವಳು ಎಂದಿದ್ದಾರೆ.

    ಬಟ್ಟೆ ಬಿಚ್ಚಿ ಪೋಸ್‌ ಕೊಡುವುದು ಶೆರ್ಲಿನ್‌ಗೆ ದೊಡ್ಡ ವಿಷಯವಲ್ಲ. ಇದಾಗಲೇ ಪೋರ್ನ್‌ ಕಂಟೆಂಟ್‌ಗಳಿಗೆ ಅವಳು ಬಟ್ಟೆ ಬಿಚ್ಚಿದ್ದಾಳೆ. ರಾಜ್‌ಕುಂದ್ರಾಗೆ ಐಡಿಯಾ ಕೊಟ್ಟಿರುವುದೂ ಅವಳೇ. ಬೋಲ್ಡ್ ಕಂಟೆಂಟ್ ಸಿದ್ಧ ಮಾಡಲು ರಾಜ್ ಕುಂದ್ರಾ ಅವರನ್ನು ಎಳೆದು ತಂದಿದ್ದೇ ಶೆರ್ಲಿನ್. 2012 ರಲ್ಲಿಯೇ ಶರ್ಲಿನ್ ಪೋರ್ನ್‌ ವಿಡಿಯೋಗಳಲ್ಲಿ ತೊಡಗಿಕೊಂಡಿದ್ದರು. ಹಾಗೆ ನೀಡಿದರೆ ಶೆರ್ಲಿನ್‌ ರಾಜ್‌ ಕುಂದ್ರಾಗೆ ಋಣಿಯಾಗಿರಬೇಕು. ಏಕೆಂದರೆ ಅವರು ಆಕೆಗೆ ಹೊಸ ಬಿಜಿನೆಸ್‌ ಐಡಿಯಾ ಕೊಟ್ಟಿದ್ದರು. ಇಂದು ಶೆರ್ಲಿನ್‌ ಇಷ್ಟು ಫೇಮಸ್‌ ಆಗಲು ಕಾರಣ ಕೂಡ ರಾಜ್‌ ಕುಂದ್ರಾ ಅವರೇ. ಆದರೆ ಅವರ ವಿರುದ್ಧವೇ ಆರೋಪ ಮಾಡಿದ್ದಾಳೆ ಎಂದು ಗೆಹನಾ ಹರಿಹಾಯ್ದಿದ್ದಾರೆ.

    ಈ ಸಂದರ್ಭದಲ್ಲಿ ನಟಿ ಶಿಲ್ಪಾ ಶೆಟ್ಟಿ ಪರವಾಗಿ ಮಾತನಾಡಿರುವ ಗೆಹನಾ, ಶಿಲ್ಪಾ ಅವರಿಗೆ ಧನ್ಯವಾದ ಹೇಳಬೇಕು. ಶೆರ್ಲಿನ್ ರಾಜ್‌ ಕುಂದ್ರಾ ವಿರುದ್ಧ ಎಂಥ ಅಸಂಬಂಧ ಆರೋಪ ಮಾಡಿದರೂ ಅವರು ಪ್ರತಿಕ್ರಿಯೆ ನೀಡಲಿಲ್ಲ. ಇದು ಅವರ ಒಳ್ಳೆತನವನ್ನು ತೋರಿಸುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಈ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಂತೆ ಇನ್ನಷ್ಟು ಸತ್ಯಗಳು ಹೊರಬೀಳಲಿದೆ.

    ಬ್ಲೂ ಫಿಲ್ಮ್ಂ ಕೇಸ್‌: ಪತಿಯ ಕುರಿತು ಶಿಲ್ಪಾ ಹೇಳಿದ್ದೇನು? ರಾಜ್‌ ಕುಂದ್ರಾ ವಿರುದ್ಧ 1500 ಪುಟಗಳ ಚಾರ್ಜ್​ಶೀಟ್​

    ಪತಿ ಜೈಲಿನಿಂದ ಬರುತ್ತಿದ್ದಂತೆಯೇ ಪ್ರೀತಿಯ ಬಗ್ಗೆ ಶಿಲ್ಪಾ ನಿಗೂಢ ಸಂದೇಶ- ತಲೆ ಕೆಡಿಸಿಕೊಂಡ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts