More

    ಬಗೆಹರಿಯದ ಡಿಸೆಂಬರ್​ ರಹಸ್ಯ! ಆಗ 100 ಶಿಶುಗಳು, ಈಗ ಒಂದೇ ಗಂಟೆಯಲ್ಲಿ ಕಣ್ಮುಚ್ಚಿದ 9 ಕಂದಮ್ಮಗಳು!

    ಜೈಪುರ್: 2019ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ 100 ಶಿಶುಗಳು ಮೃತಪಟ್ಟ ಆಘಾತಕಾರಿ ಘಟನೆ ನಡೆದಿತ್ತು. ತೀವ್ರ ಆತಂಕದ ಸಂಗತಿಯೆಂದರೆ ಈಗ ಇದೇ ಆಸ್ಪತ್ರೆಯಲ್ಲಿ ಕೇವಲ ಒಂದೇ ಗಂಟೆಯಲ್ಲಿ 9 ಶಿಶುಗಳ ಮೃತಪಟ್ಟಿದ್ದು, ಇನ್ನೂ ಕೆಲವು ಶಿಶುಗಳ ಪರಿಸ್ಥಿತಿ ಹದಗೆಟ್ಟಿರುವುದಾಗಿ ವರದಿಯಾಗಿದೆ.

    ಈ ಶಿಶುಗಳ ಸಾವಿಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಸೂಪರಿಟೆಂಡೆಂಟ್ ಸುರೇಶ್ ದುಲಾರಾ, ಇದು ಸಹಜವಾಗಿ ಸಂಭವಿಸಿದ ಸಾವು, ಯಾವುದೇ ಗಂಭೀರ ಕಾರಣ ಅಥವಾ ಸೋಂಕಿನಿಂದ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮೂರು ಮಕ್ಕಳನ್ನು ಜೆ.ಕೆ.ಲಾನ್ ಆಸ್ಪತ್ರೆಗೆ ಕರೆ ತರುವ ವೇಳೆಯೇ ಅವರು ಮೃತಪಟ್ಟಿದ್ದವು. ಉಳಿದವುಗಳಿಗೆ ಜನ್ಮಜಾತ ಗಂಭೀರ ಸಮಸ್ಯೆಗಳಿದ್ದವು ಎಂದು ಕೋಟಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರು ಆರೋಗ್ಯ ಇಲಾಖೆಗೆ ನೀಡಿದ ಮಾಹಿತಿ ನೀಡಿದ್ದಾರೆ.

    ಆದರೆ ಜನರು ಇದನ್ನು ನಂಬುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಕಳೆದ ವರ್ಷ 100 ಶಿಶುಗಳ ಸಾವು ಡಿಸೆಂಬರ್​ನಲ್ಲಿಯೇ ನಡೆದಿದ್ದು, ಈ ಡಿಸೆಂಬರ್​ನಲ್ಲಿಯೂ ಇದೇ ರೀತಿ ಆಗುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.

    ಘಟನೆ ಬಗ್ಗೆ ತಿಳಿದ ಡಿವಿಜನಲ್ ಕಮಿಷನರ್ ಕೆ.ಸಿ ಮೀನಾ ಹಾಗೂ ಜಿಲ್ಲಾಧಿಕಾರಿ ಉಜ್ವಲ್ ರಾಥೋಡ್ ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿರುವುದಾಗಿ ವರದಿ ತಿಳಿಸಿದೆ. ಪರಿಸ್ಥಿತಿಯ ಮೇಲೆ ನಿಗಾ ಇಡುವ ಸಲುವಾಗಿ ತಕ್ಷಣ ಆರು ಮಂದಿ ಹೆಚ್ಚುವರಿ ವೈದ್ಯರನ್ನು ಮತ್ತು 10 ಮಂದಿ ಹೆಚ್ಚುವರಿ ನರ್ಸ್‌ಗಳನ್ನು ನಿಯೋಜಿಸುವಂತೆ ಮೀನಾ ಸೂಚನೆ ನೀಡಿದ್ದಾರೆ.

    2019ರ ಡಿಸೆಂಬರ್​ನಲ್ಲಿ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿದಾಗ, ಇನ್‌ಕ್ಯುಬೇಟರ್‌ ಘಟಕದಲ್ಲಿ ಲೋಪವನ್ನು ಗುರುತಿಸಿದ್ದವು. ಆದರೆ, ನಿರ್ಲಕ್ಷ್ಯದಿಂದ ಮಕ್ಕಳ ಸಾವು ಆರೋಪವನ್ನು ವೈದ್ಯರು ನಿರಾಕರಿಸಿದ್ದು, ಮಕ್ಕಳನ್ನು ಕರೆತಂದಾಗಲೇ ಅವರ ಪರಿಸ್ಥಿತಿ ಗಂಭೀರವಾಗಿತ್ತೆಂದು ಹೇಳಿದ್ದರು. ಆಗಲೂ ತನಿಖೆಗೆ ಆದೇಶಿಸಲಾಗಿತ್ತು. ಆದರೆ ಆ ನಂತರ ವರದಿ ಬಂದ ಬಗ್ಗೆ ಉಲ್ಲೇಖವಿಲ್ಲ.

    ಗಂಡನ ಕಿರುಕುಳದಿಂದಾಗಿ ತವರಿನಲ್ಲಿರುವೆ: ಡಿವೋರ್ಸ್ ಕೊಡಬಹುದೆ? ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?

    ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದಾವಣಗೆರೆ ಕಾಮುಕನಿಗೆ 20 ವರ್ಷ ಜೈಲು

    ಐಟಿಐ ಪಾಸಾಗಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೆ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts