More

    ಜೈಲಾಧಿಕಾರಿ ಸೇರಿದಂತೆ ಎಂಟು ಮಂದಿಯ ಕೊಲೆ ಮಾಡಿ 100ಕ್ಕೂ ಅಧಿಕ ಕೈದಿಗಳು ಎಸ್ಕೇಪ್‌‌!

    ಹೈಟಿ: ಜೈಲಿನಲ್ಲಿರುವ ಕಂಬಿಗಳನ್ನು ಮುರಿದು ಎಂಟು ಮಂದಿಯನ್ನು ಕೊಲೆ ಮಾಡಿರುವ 100ಕ್ಕೂ ಅಧಿಕ ಕೈದಿಗಳು ತಪ್ಪಿಸಿಕೊಂಡಿರುವ ಘಟನೆ ಹೈಟಿ ದೇಶದಲ್ಲಿ ನಡೆದಿದೆ. ಈಶಾನ್ಯ ಭಾಗದಲ್ಲಿ ಇರುವ ಹೈಟಿ ದೇಶದ ಕ್ರೋಯಿಕ್ಸ್‌-ಡೇಸ್‌-ಬಾಕಿಟ್ಸ್‌ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

    ಬಂದೀಖಾನೆ ಅಧಿಕಾರಿ ಸೇರಿದಂತೆ ಎಂಟು ಮಂದಿಯನ್ನು ಕೊಲೆ ಮಾಡಿ ಕೈದಿಗಳು ಪರಾರಿಯಾಗಿರುವ ಭಯಾನಕ ಘಟನೆ ಇದಾಗಿದೆ.

    ಜೈಲಿನ ಒಳಗಡೆ ಇರುವ ಕೈದಿಗಳಿಂದಲೇ ಈ ಕೃತ್ಯ ನಡೆದಿದೆಯೇ ಅಥವಾ ಹೊರಗಿನಿಂದ ಯಾರಾದರೂ ಬಂದು ಕೈದಿಗಳು ಪರಾರಿಯಾಗಲು ನೆರವಾಗಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಏಕೆಂದರೆ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಸಶಸ್ತ್ರಧಾರಿಗಳ ಗುಂಪೊಂದು ಏಕಾಏಕಿ ಜೈಲು ಅಧಿಕಾರಿಗಳು ಸೇರಿದಂತೆ ಅಲ್ಲಿನ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿದೆ.

    ನಂತರ ನೋಡಿದಾಗ ಕಂಬಿಗಳು ಮುರಿದಿದ್ದು ಅಲ್ಲಿಂದ ಹಲವಾರು ಕೈದಿಗಳು ಪರಾರಿಯಾಗಿರುವುದು ಕಂಡುಬಂದಿದೆ. ಕೈದಿಗಳಿಗೆ ಬಂದೂಕು ಸಿಕ್ಕಿದ್ದಾದರೂ ಹೇಗೆ ಅಥವಾ ಹೊರಗಿನಿಂದ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆಯೇ ಇನ್ನಷ್ಟೇ ತಿಳಿಯಬೇಕಿದೆ.

    ಈ ಗುಂಡಿನ ಚಕಮಕಿಯಿಂದಾಗಿ ಸ್ಥಳದಲ್ಲಿಯೇ 8 ಮಂದಿ ಮೃತಪಟ್ಟಿದ್ದು, ಇನ್ನೂ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಗುಂಡಿನ ಶಬ್ದ ಎಷ್ಟು ಭೀಕರವಾಗಿತ್ತೆಂದರೆ ಜೈಲಿನ ಸುತ್ತಲಿನ ಪ್ರದೇಶಗಳಲ್ಲಿಯೂ ಗುಂಡಿನ ಶಬ್ದ ಕೇಳಿದ್ದು, ಜನರು ಭಯಭೀಯತಾಗಿದ್ದಾರೆ ಎಂದು ವರದಿಗಳು ಹೇಳಿವೆ.

    2012ರಲ್ಲಿ ನಿರ್ಮಾಣವಾಗಿರುವ ಈ ಜೈಲಿನಿಂದ ಕೈದಿಗಳು ಪರಾರಿಯಾಗುತ್ತಿರುವುದು ಇದೇ ಮೊದಲೇನಲ್ಲ. ನಿರ್ಮಾಣವಾದ ಎರಡನೆಯ ವರ್ಷವೇ ಅಂದರೆ 2014ರಲ್ಲಿ ಕೂಡ ಕಂಬಿಗಳನ್ನು ಮುರಿದು 300ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದರು. ಇಲ್ಲಿನ ಜೈಲಿನಲ್ಲಿ ಕೈದಿಗಳ ಸ್ಥಿತಿ ದಾರುಣವಾಗಿದ್ದು, ಅವರಿಗೆ ಯಾವುದೇ ಸೌಕರ್ಯಗಳು ಇಲ್ಲ ಎಂಬ ಬಗ್ಗೆ ಮೊದಲಿನಿಂದಲೂ ಕೂಗು ಕೇಳಿಬರುತ್ತಲೇ ಇದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

    ಮಾರ್ಚ್‌ ತಿಂಗಳಿನಲ್ಲಿ ಬ್ಯಾಂಕ್‌ ಕೆಲಸ ಇದ್ಯಾ? ಹಾಗಿದ್ರೆ ರಜೆಗಳ ಕುರಿತು ತಿಳಿದುಕೊಳ್ಳಿ..

    ಅಮೆರಿಕ ಪ್ರತಿಕಾರ: ಇರಾನ್‌ ಬೆಂಬಲಿತ ಉಗ್ರಗಾಮಿ ತಾಣಗಳ ಮೇಲೆ ವೈಮಾನಿಕ ದಾಳಿ

    ಇಂದು ದೇಶವ್ಯಾಪಿ ಲಾರಿ ಸಂಚಾರ ಸ್ತಬ್ಧ- ಜನಸಾಮಾನ್ಯರಿಗೆ ಇಂದಿಲ್ಲ ತೊಂದರೆ, ಆದರೆ ಮುಂದೆ?

    ಅಣ್ಣ ಬುದ್ಧಿಹೇಳಿದ ಎಂದು ತಮ್ಮನ ಆತ್ಮಹತ್ಯೆ… ಸಾವಿನ ಸುದ್ದಿ ಕೇಳಿ ಅಣ್ಣನೂ ನೇಣಿಗೆ ಶರಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts