More

    ಕಾಮತೃಷೆ ತೀರಿಸಿಕೊಳ್ಳಲು ಕಳ್ಳತನ ಮಾಡ್ತಿದ್ದ 70 ವರ್ಷದ ಅಜ್ಜ ಅಂದರ್​! ಈತನ ಮೊಬೈಲ್​ನಲ್ಲಿದೆ ರಹಸ್ಯ

    ಬೆಂಗಳೂರು: ಈ ಚಿತ್ರದಲ್ಲಿ ಕಾಣಿಸ್ತಿರುವ ವೃದ್ಧನ ಹೆಸರು ರಮೇಶ್. ಈತನ ವಯಸ್ಸು ಸರಿಸುಮಾರು 70 ವರ್ಷ. ಈಗ ಈತ ಬೆಂಗಳೂರಿನ ಪೊಲೀಸರ ಅತಿಥಿ. ಅಷ್ಟಕ್ಕೂ ಈತ ಮಾಡುತ್ತಿದ್ದುದು ಏನೆಂದರೆ ಕಳ್ಳತನ. ಇದಕ್ಕೆ ಕಾರಣ ಮಹಿಳೆಯರ ಜತೆ ಚಕ್ಕಂದ ಆಡುವುದು!

    ಚಿಕ್ಕಮಗಳೂರು ಮೂಲದ ರಮೇಶ್​ ಕಂಡ ಕಂಡ ಹುಡುಗಿಯರ ಜತೆ ಚಕ್ಕಂದ ಆಡುವ ನಿಟ್ಟಿನಲ್ಲಿ ಕಳ್ಳತನ ಮಾಡುತ್ತಿದ್ದ. ಈ ರೀತಿ ಕಳ್ಳತನ ಮಾಡಿದ್ದ ಹಣದಿಂದ ಹುಡುಗಿಯರ ಜತೆ ಮಜಾ ಮಾಡುತ್ತಿದ್ದ. ಈತ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇವನಿಂದ ಸುಮಾರು 8 ಲಕ್ಷ ರೂ. ಮೌಲ್ಯದ 162 ಗ್ರಾಂ ತೂಕದ ಚಿನ್ನಾಭರಣ, 5 ಸಾವಿರ ರೂಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದೆ.

    ಬೆಂಗಳೂರಿನ ಮನೆಯೊಂದರ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿತ್ತು. ಮಾಲೀಕರು ನೀಡಿರುವ ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಖದೀಮ ಸಿಕ್ಕಿಬಿದ್ದಿದ್ದಾನೆ.
    ಎರಡು ಮದುವೆಯಾಗಿ ಮೂವರು ಮಕ್ಕಳ ಅಪ್ಪನಾಗಿರುವ ಈತ ಮೂರನೆಯ ಮದುವೆಗೂ ಯತ್ನಿಸುತ್ತಿದ್ದ ಎನ್ನುವ ವಿಷಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈತ ಕದ್ದ ಹಣ, ಚಿನ್ನಾಭರಣಗಳನ್ನುತೆಗೆದುಕೊಂಡು ಹೋಗಿ ಚಿಕ್ಕ ವಯಸ್ಸಿನ ಹುಡುಗಿಯರಿಗೆ ಆಮಿಷ ತೋರಿಸಿ ಕಾಮತೃಷೆ ತೀರಿಸಿಕೊಳ್ಳುತ್ತಿದ್ದುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

    12 ವರ್ಷಗಳ ಹಿಂದೆ ಮನೆ ತೊರೆದು ಇಬ್ಬರು ಪತ್ನಿಯರು ಮತ್ತು ಮಕ್ಕಳನ್ನು ಬಿಟ್ಟಿದ್ದ ಈತ ಕಳ್ಳತನಕ್ಕೆ ಇಳಿದಿದ್ದ. ವೇಶ್ಯಾಗೃಹಕ್ಕೆ ಹೋಗಿ ಇಲ್ಲವೇ ಎಳೆ ಮಕ್ಕಳನ್ನು ಟಾರ್ಗೆಟ್​ ಮಾಡಿ ಚಪಲ ತೀರಿಸಿಕೊಳ್ಳುತ್ತಿದ್ದ. ಸದ್ಯ ಈತನ ಮೊಬೈಲ್‌ ಸಂಪರ್ಕದಲ್ಲಿದ್ದ ಕೆಲವು ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ. ಮೊಬೈಲ್​ನಿಂದಲೇ ಈತನ ಕೆಲವು ಕಾಮ ಕೃತ್ಯಗಳೂ ಬಯಲಾಗಿವೆ.

    ಅಮ್ಮನನ್ನು ನೋಡಿಕೋ ಎಂದರೆ ಟಾಯ್ಲೆಟ್​ ಕ್ಲೀನರ್​​ ಹಾಕಿ ಕಣ್ಣಿನ ದೃಷ್ಟಿಯನ್ನೇ ತೆಗೆದ ಕೇರ್​ ಟೇಕರ್​!

    ವಿದೇಶದ ಎಂಬಿಬಿಎಸ್​ಗೆ ಭಾರತದಲ್ಲಿ ಉದ್ಯೋಗವೂ ಸುಲಭವಲ್ಲ, ಇಲ್ಲಿ ಪಾಸಾಗೋದು ಕಷ್ಟ- ಇಲ್ಲಿದೆ ನೋಡಿ ಡಿಟೇಲ್ಸ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts