More

    ಹಾಲಿನ ವ್ಯವಹಾರ ನಡೆಸಲು 30 ಕೋಟಿ ರೂ. ಹೆಲಿಕಾಪ್ಟರ್‌ ಖರೀದಿ!

    ಭಿವಾಂಡಿ: ಮಹಾರಾಷ್ಟ್ರದ ಭಿವಾಂಡಿಯ ರೈತ ಮತ್ತು ಉದ್ಯಮಿ ಜನಾರ್ದನ ಭೋಯಿರ್ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣ, ಇವರು ಖರೀದಿಸುತ್ತಿರುವ ಹೆಲಿಕಾಪ್ಟರ್‌! ಹಾಲಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸುತ್ತಾರೆ. ಈ ಕಾರಣದಿಂದ ತನ್ನ ಪ್ರಯಾಣ ಸುಗಮವಾಗಿ ನಡೆಯಲಿ ಎಂಬ ಉದ್ದೇಶದಿಂದ ಜನಾರ್ಧನ್ ಹೆಲಿಕ್ಯಾಪ್ಟರ್ ಖರೀದಿಸಿದ್ದಾರೆ.

    ಅಂದಹಾಗೆ ಈ ಹೆಲಿಕಾಪ್ಟರ್‌ ಬೆಲೆ 30 ಕೋಟಿ ರೂಪಾಯಿ! ಹಾಲಿನ ವ್ಯಾಪಾರಿಯೊಬ್ಬ ಇಷ್ಟು ಹಣ ಕೊಟ್ಟು ಹೆಲಿಕಾಪ್ಟರ್‌ ಖರೀದಿ ಮಾಡುತ್ತಿದ್ದಾರೆ ಎಂದರೆ ಸಹಜವಾಗಿ ಹುಬ್ಬೇರಿಸಲೇಬೇಕು. ಆದರೆ ಜನಾರ್ದನ ಅವರು, ಹಾಲಿನ ವ್ಯಾಪಾರಿಯ ಜತೆ ಉದ್ಯಮಿಯೂ ಹೌದು.

    ಡೈರಿ ವ್ಯವಹಾರಗಳಿಗೆ ಆಗಾಗ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗೆ ಪ್ರಯಾಣಿಸಬೇಕಿದೆ. ನಾನು ಭೇಟಿ ನೀಡಲಿರುವ ಎಲ್ಲಾ ನಗರಗಳಲ್ಲಿ ವಿಮಾನ ನಿಲ್ದಾಣಗಳು ಇರುವುದಿಲ್ಲ. ಹಾಗಾಗಿ ನಾನು ತಲುಪಬೇಕಾದ ಸ್ಥಳವನ್ನು ಬೇಗನೆ ತಲುಪಲು ಹೆಲಿಕಾಪ್ಟರ್ ಖರೀದಿಸಿದ್ದೇನೆ. ಇದರಿಂದ ಕೃಷಿ ಮತ್ತು ಡೈರಿ ವ್ಯವಹಾರಗಳಿಗೆ ಅನುಕೂಲವಾಗಲಿದೆ ಎಂದು ಜನಾರ್ದನ ಹೇಳಿದ್ದಾರೆ.

    ಇವರು ಹೆಲಿಕಾಪ್ಟರ್‌ಗಾಗಿ ತಮ್ಮ ಮನೆಯ ಸಮೀಪ ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಇದಲ್ಲದೆ, 2.5 ಎಕರೆ ಜಾಗದಲ್ಲಿ ಪೈಲಟ್ ರೂಮ್ ಟೆಕ್ನಿಷಿಯನ್ ರೂಮ್ ಸಹ ಸಿದ್ಧಪಡಿಸಿದ್ದಾರೆ. ಜನಾರ್ದನ್ ಅವರು ಕೃಷಿಯ ಹೊರತಾಗಿ, ರಿಯಲ್ ಎಸ್ಟೇಟ್ ನಡೆಸುತ್ತಾರೆ. ಅನೇಕ ದೊಡ್ಡ ಕಂಪನಿಗಳು ಭಿವಾಂಡಿ ಪ್ರದೇಶದಲ್ಲಿ ಗೋದಾಮುಗಳನ್ನು ಹೊಂದಿದ್ದು, ಇದರಿಂದ ಉತ್ತಮ ಬಾಡಿಗೆಗಳನ್ನು ಕೂಡ ಪಡೆಯುತ್ತಾರೆ. ಇವರು ಅನೇಕ ಗೋದಾಮುಗಳನ್ನು ಹೊಂದಿದ್ದಾರೆ.

    ಅಂದ ಹಾಗೆ, ಜನಾರ್ದನ ಅವರು 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

    ನಿವೃತ್ತ ಮುಖ್ಯ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ, ಸಂವಿಧಾನ ತಜ್ಞ ರಾಮಾ ಜೋಯಿಸ್‌ ಇನ್ನಿಲ್ಲ

    ದೆಹಲಿಗೆ ಹಾರಿದ ಸಿದ್ದರಾಮಯ್ಯ- ರಾಜ್ಯಕ್ಕೆ ರಾಹುಲ್‌ ಬರುವ ಮೊದಲೇ ಸಿಕ್ರೇಟ್‌ ಮಾತುಕತೆ

    ಅಜ್ಜ ಕಾಯಿಲೆ ಬಿದ್ದಾಗ ಮಗ ತನ್ನ ಹೆಸರಿಗೆ ಆಸ್ತಿ ಬರೆಸಿಕೊಂಡ- ಉಳಿದ ಮಕ್ಕಳಿಗೆ ಇರುವ ದಾರಿಗಳೇನು?

    8ನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ- ಇಂದಿನ ದರ ಎಷ್ಟಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts