More

    ಓಟಿಪಿಯೂ ಬರದೇ ಶಿಕ್ಷಕಿ ಖಾತೆಯಿಂದ 3.22 ಲಕ್ಷ ರೂ. ಮಾಯ! ಸಿಕ್ಕಿಬಿದ್ದ ಕಳ್ಳನ ಕಂಡು ಕಣ್‌ಕಣ್‌ ಬಿಟ್ಟ ಪೊಲೀಸರು!

    ಕಾಂಕರ್‌ (ಛತ್ತೀಸಗಢ): ಸೈಬರ್‌ ಕ್ರೈಂ ಪ್ರಕರಣ ದಿನವೂ ವರದಿಯಾಗುತ್ತಿದೆ. ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಛತ್ತೀಸಗಢದ ಕಾಂಕರ್ ಜಿಲ್ಲೆಯ ಪಂಖಜೂರ್ ಊರಿನಲ್ಲಿಯೂ ಇಂಥದ್ದೇ ಒಂದು ಪ್ರಕರಣ ಜರುಗಿದ್ದು, ಆದರೆ ಇದರ ಕಥೆ ಸ್ವಲ್ವ ವಿಭಿನ್ನವಾಗಿದೆ.

    ಇಲ್ಲಿ ಆಗಿದ್ದೇನೆಂದರೆ ಶಿಕ್ಷಕಿ ಶುಭ್ರಾ ಪಾಲ್ ಅವರ ಬ್ಯಾಂಕ್‌ ಖಾತೆಯಿಂದ 3.22 ಲಕ್ಷ ರೂಪಾಯಿ ನಾಪತ್ತೆಯಾಗಿತ್ತು. ಅವರು ಬ್ಯಾಂಕ್‌ ವಹಿವಾಟು ನಡೆಸದಿದ್ದ ಹಿನ್ನೆಲೆಯಲ್ಲಿ ಅವರಿಗೆ ಈ ವಿಷಯ ತಿಳಿದುಬಂದಿರಲಿಲ್ಲ. ಆದರೆ ನಿನ್ನೆ ಬ್ಯಾಂಕ್‌ ಬ್ಯಾಲೆನ್ಸ್‌ ಚೆಕ್‌ ಮಾಡಿದಾಗ ಹಣ ನಾಪತ್ತೆಯಾಗಿರುವುದು ತಿಳಿದಿದೆ. ಮೂರು ತಿಂಗಳಿನ ಅಂತರದಲ್ಲಿ ಇಷ್ಟು ಹಣ ಮಾಯವಾಗಿದೆ.

    ಕಕ್ಕಾಬಿಕ್ಕಿಯಾದ ಅವರು, ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಚ್ಚರಿ ವಿಷಯವೆಂದರೆ ಯಾರಾದರೂ ದುಡ್ಡನ್ನು ಡ್ರಾ ಮಾಡಿಕೊಂಡರೆ ಸಹಜವಾಗಿ ಮೊಬೈಲ್‌ಫೋನ್‌ಗೆ ಓಟಿಪಿ ಬರುತ್ತದೆ. ಆದರೆ ಮಹಿಳೆ ಫೋನ್‌ ಚೆಕ್‌ ಮಾಡಿದಾಗ ಅದರಲ್ಲಿ ಓಟಿಪಿ ಕೂಡ ಇರಲಿಲ್ಲ.

    ಓಟಿಪಿಯೂ ಇಲ್ಲದೇ ಹಣ ಕದ್ದಿದ್ದಾರೆ ಎಂದು ಇವರು ಭಾರಿ ಸೈಬರ್‌ಕ್ರಿಮಿನಲ್‌ ಇರಬೇಕು ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಇದಾದ ನಂತರ, ಪೊಲೀಸರು ಎಲ್ಲಾ ರೀತಿಯ ತನಿಖೆ ನಡೆಸಿದರೂ ಈ ವಿಷಯ ಅವರಿಗೆ ಗೋಜುಗೋಜಲಾಗಿ ಕಾಣಿಸಿತು. ಶಿಕ್ಷಕಿಯ ಖಾತೆಯಿಂದ 278 ವಹಿವಾಟುಗಳನ್ನು ಮಾಡಲಾಗಿದೆ ಎಂದು ತಿಳಿದುಬಂತು. ನಂತರ ಇನ್ನಷ್ಟು ತನಿಖೆ ನಡೆಸಿದಾಗ ಸುತ್ತಿಸುತ್ತಿ ಶಿಕ್ಷಕಿಯ ಮನೆಯ ಕಡೆಗೇ ಬೆರಳು ತೋರಿಸುತ್ತಿತ್ತು. ಕೊನೆಯ ಅಂತೂ ಪೊಲೀಸರು ತಮ್ಮ ಸಂದೇಹವನ್ನು ವ್ಯಕ್ತಪಡಿಸಿದಾಗ, ಮನೆಯಲ್ಲಿಯೇ ‘ಕಳ್ಳ’ ಇರುವುದಾಗಿ ಪೊಲೀಸರು ಹೇಳಿದರು. ಇನ್ನಷ್ಟು ವಿಚಾರಣೆ ನಡೆಸಿದಾಗ ಗೊತ್ತಾಗಿದ್ದು ಅವರ 12 ವರ್ಷದ ಮಗನೇ ಈ ಕೃತ್ಯ ಎಸಗಿದ್ದಾನೆ ಎಂದು!

    ಇದು ಆನ್‌ಲೈನ್‌ ವ್ಯಾಮೋಹದಿಂದ ಆಗಿರುವ ಅನಾಹುತ. ‘ಫ್ರೀ ಫೈರ್’ ಎಂಬ ಆಟವಾಡಲು ಈತ ಹೀಗೆ ಮಾಡಿದ್ದಾನೆ. ಆ ಆಟದಲ್ಲಿ ಮುಂದಿನ ಸ್ಟೆಪ್‌ ಹೋಗಲು ಹಣವನ್ನು ನೀಡಬೇಕಿತ್ತು. ಆಗ ಆನ್‌ಲೈನ್‌ ವ್ಯವಹಾರವನ್ನು ತಿಳಿದಿದ್ದ ಮಗ, ಅಮ್ಮನ ಮೊಬೈಲ್‌ನಲ್ಲಿಯೇ ಆಟವಾಡುತ್ತಿದ್ದರಿಂದ ಸುಲಭದಲ್ಲಿ ಅಲ್ಲಿಂದ ಹಣವನ್ನು ವರ್ಗಾಯಿಸುತ್ತಾ ಬಂದಿದ್ದಾನೆ. ಓಟಿಪಿ ಬಂದಾಗ ಅದನ್ನು ಡಿಲೀಟ್‌ ಮಾಡಿದ್ದಾನೆ. ವಿಷಯ ತಿಳಿದ ಪೊಲೀಸರೂ ಸುಸ್ತು, ಶಿಕ್ಷಕಿಯೂ ಸುಸ್ತು. ಹಣ ಕಳೆದುಕೊಂಡಿರುವ ಸಂಕಟದ ಜತೆಗೆ ಮಗನೇ ಕಳ್ಳ ಎಂದು ತಿಳಿದು ಬೇಸ್ತು ಬಿದ್ದಿದ್ದಾರೆ ಈ ಅಮ್ಮ.

    ಗುಂಡಿಗೆ ಬೀಳುವ ಮುನ್ನ..: ವಿಡಿಯೋ ಕಾಲ್ ಮಾಡಿ ಯಾಮಾರಿಸ್ತಾರೆ, ಹುಷಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts