More

    ಹುಬ್ಬಳ್ಳಿ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ

    ಹುಬ್ಬಳ್ಳಿ : ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹುಬ್ಬಳ್ಳಿ ತಾಲೂಕಿನ ಗ್ರಾಮ ಮಟ್ಟದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ರಾಯನಾಳ, ಅದರಗುಂಚಿ, ನೂಲ್ವಿ, ಶೆರೆವಾಡ ಮತ್ತು ಛಬ್ಬಿ ಗ್ರಾಮಗಲ್ಲಿ ಶನಿವಾರದಂದು ಸಂವಿಧಾನದ ರಥದಂತಿರುವ ಸ್ಥಬ್ಧಚಿತ್ರದ ವಾಹನವನ್ನು ಗ್ರಾಮಸ್ಥರು ಭಕ್ತಿಯಿಂದ ಬರಮಾಡಿಕೊಂಡರು.

    ಐದೂ ಗ್ರಾಮಗಳ ರಸ್ತೆಗಳಲ್ಲಿ ರಂಗೋಲಿ ಹಾಕಿ, ತಳಿರು, ತೋರಣ ಕಟ್ಟಿ, ಸ್ಥಬ್ಧಚಿತ್ರದ ವಾಹನಗಳಿಗೆ ಆರತಿ ಬೆಳಗಲಾಯಿತು. ಕುಂಭಗಳನ್ನು ಹೊತ್ತ ಮಹಿಳೆಯರು ಮೆರವಣಿಗೆ ಉದ್ದಕ್ಕೂ ಸಾಗಿದರು. ಸಂಬಾಳವಾಧ್ಯ, ಜಾಂಜ್ ಮೇಳ, ಕೋಲಾಟ, ಹೆಜ್ಜೆಯ ಕುಣಿತ, ಲೈಜಿಮ್ ಕುಣಿತ, ಡೊಳ್ಳು ಕುಣಿತದಂತಹ ಮೊದಲಾದ ಹೆಜ್ಜೆಮೇಳಗಳು ಮೆರವಣಿಗೆ ಉದ್ದಕ್ಕೂ ಕಂಡವು. ಮಹನೀಯರ ವೇಷ ಧರಿಸಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.

    ಪ್ರತಿ ಗ್ರಾಮಗಳಲ್ಲಿ ಅಟೋ ರ್ಯಾಲಿ, ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ಟ್ರಾ್ಯಕ್ಟರ್ ರ್ಯಾಲಿ, ಚಕ್ಕಡಿ ರ‍್ಯಾಲಿ ನಡೆಸಲಾಯಿತು. ಹುಬ್ಬಳ್ಳಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಡಾ.ಪ್ರಹ್ಲಾದ ಗೆಜ್ಜಿ ಅವರು, ಐದೂ ಕಾರ್ಯಕ್ರಮಗಳಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿ, ಭಾರತ ಸಂವಿಧಾನದ ಕುರಿತು

    ಉಪನ್ಯಾಸದ ನೀಡಿದರು. ಭಗವಾನ್ ಬುಧ್ಧ , ಜಗಜೊ್ಯೕತಿ ಬಸವಣ್ಣ, ಕನಕದಾಸರು, ಸಂತರು, ದಾಸರ ಸಾಮಾಜಿಕ ಚಿಂತನೆಗಳನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಯಾವರೀತಿ ಅಳವಡಿಸಿದ್ದಾರೆ ಎಂಬುದರ ಬಗ್ಗೆ, ಮೂಲಭೂತ ಹಕ್ಕು ಮತ್ತು ಕರ್ತವ್ಯ ಗಳ ಕುರಿತು ಮಾತನಾಡಿದರು.

    ಶಾಲಾ ಮಕ್ಕಳಿಂದ ವಿವಿಧ ನೃತ್ಯ, ದೇಶಭಕ್ತಿ ಗೀತೆ, ಕಿರುನಾಟಕ, ಏಕಾಭಿನಯ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತ ಮಕ್ಕಳಿಗೆ ಸಾಧಕರಿಗೆ ಬಹುಮಾನ ವಿತರಿಸಲಾಯಿತು.

    ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ

    ಚನ್ನಮ್ಮ ಅಂಬಿಗೇರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಚಂದ್ರಶೇಖರಯ್ಯ ಕರವೀರಮಠ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ನೌಕರರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts